ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ವಿಮಾನದ ಅವಶೇಷ ಬ್ರೆಜಿಲ್ ಪೈಲಟ್‌ಗೆ ಗೋಚರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಮಾನದ ಅವಶೇಷ ಬ್ರೆಜಿಲ್ ಪೈಲಟ್‌ಗೆ ಗೋಚರ
ಅಟ್ಲಾಂಟಿಕ್ ಸಾಗರವನ್ನು ಸೋಮವಾರ ಬೆಳಿಗ್ಗೆ ಹಾದುಹೋಗುವಾಗ ಉರಿಯುತ್ತಿದ್ದ ಅವಶೇಷದ ಚೂರುಗಳನ್ನು ಕಂಡಿದ್ದಾಗಿ ಬ್ರೆಜಿಲ್ ಏರ್‌ಲೈನ್ ಟಿಎಎಂ ಪೈಲಟ್ ತಿಳಿಸಿದ್ದಾರೆ. ರಿಯೊ ಡಿ ಜನೈರೊನಿಂದ ಫ್ರಾನ್ಸ್‌ಗೆ ಹಾರುತ್ತಿದ್ದ ಏರ್‌ಫ್ರಾನ್ಸ್ 447 ವಿಮಾನ ರೆಡಾರ್‌ನಿಂದ ಕಣ್ಮರೆಯಾದ ಸಮಯಕ್ಕೂ ಬ್ರೆಜಿಲ್ ಏರ್‌ಲೈನ್ ಪೈಲಟ್ ಅವಶೇಷದ ಚೂರನ್ನು ನೋಡಿದ ಸಮಯವೂ ಹೊಂದಿಕೆಯಾಗಿದೆ.

ಬ್ರೆಜಿಲ್ ಏರ್‌ಲೈನ್ ಪೈಲಟ್ ಆಟ್ಲಾಂಟಿಕ್ ಸಾಗರದ ಮೇಲೆ ಹಾದುಹೋಗುವ ಸಂದರ್ಭದಲ್ಲಿ ಸಾಗರದ ಮಧ್ಯದಲ್ಲಿ ಕಿತ್ತಲೆ ಬಣ್ಣದ ಚುಕ್ಕಿಗಳು ಗೋಚರಿಸಿದ್ದಾಗಿ ಬ್ರೆಜಿಲ್ ವಾಯುಪಡೆ ದೃಢಪಡಿಸಿದೆ.228 ಜನರಿದ್ದ ಎಎಫ್447 ವಿಮಾನವು 2.15 ಜಿಎಂಟಿ ಕಾಲಮಾನದಲ್ಲಿ ಸೋಮವಾರ ರೆಡಾರ್ ವ್ಯಾಪ್ತಿಯಿಂದ ಕಣ್ಮರೆಯಾಗಿತ್ತು. ಯುರೋಪ್ ಮತ್ತು ಬ್ರೆಜಿಲ್ ನಡುವೆ ಫರ್ನಾಂಡೊ ಡೆ ನೊರೋನಾ ದ್ವೀಪಕ್ಕೆ 1300 ಕಿಮೀ ದೂರದಲ್ಲಿ ಟಿಎಎಂ ಸಿಬ್ಬಂದಿಯು ಸಾಗರದಲ್ಲಿ ಉರಿಯುವ ಚುಕ್ಕಿಯನ್ನು ಕಂಡಿದ್ದಾಗಿ ಟಿಎಎಂ ಏರ್‌ಲೈನ್ ಪ್ರಕಟಣೆಯ ಆಧಾರದ ಮಾಧ್ಯಮದ ವರದಿಗಳು ತಿಳಿಸಿವೆ.

ಫರ್ನಾಂಡೊ ಡಿ ನೊರೊನಾ ಬ್ರೆಜಿಲ್ ತೀರದಿಂದ 350 ಕಿಮೀ ದೂರದಲ್ಲಿದೆ. ರೆಡಾರ್ ಪರದೆಯಿಂದ ವಿಮಾನ ಕಣ್ಮರೆಯಾಗಿ ನಾಲ್ಕು ಗಂಟೆಗಳ ಬಳಿಕ, 5.30 ಜಿಎಂಟಿ ಕಾಲಮಾನದಲ್ಲಿ ಕಣ್ಮರೆಯಾದ ವಿಮಾನಕ್ಕೆ ಶೋಧ ಆರಂಭವಾಯಿತು ಎಂದು ಬ್ರೆಜಿಲ್ ರಕ್ಷಣಾ ಸಚಿವಾಲಯ ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒತ್ತಡಗಳಿಗೆ ಮಣಿದ ಪಾಕ್: ಹಫೀಜ್ ಸಯೀದ್ ಬಿಡುಗಡೆ
ತಾಲಿಬಾನ್ ಉಗ್ರರಿಂದ 80 ಮಂದಿ ಪಾರು
ಫ್ರಾನ್ಸ್ ವಿಮಾನ ಅಪಘಾತ: 228 ಸಾವಿನ ಶಂಕೆ
ಪಾಕ್: ಬಾಂಬ್ ಸ್ಫೋಟಕ್ಕೆ ನಾಲ್ಕು ಬಲಿ
ಇಸ್ರೇಲ್: ಎಚ್1ಎನ್1 ಸೋಂಕು ಪತ್ತೆ
ಪ್ಲುಟೋನಿಯಂ: ಪಾಕಿಸ್ತಾನಕ್ಕೆ ಚೀನಾ ನೆರವು