ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಏರ್ ಫ್ರಾನ್ಸ್ ಅವಶೇಷ ಪತ್ತೆ: ಅಪಘಾತಕ್ಕೆ ಕಾರಣ ನಿಗೂಢ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏರ್ ಫ್ರಾನ್ಸ್ ಅವಶೇಷ ಪತ್ತೆ: ಅಪಘಾತಕ್ಕೆ ಕಾರಣ ನಿಗೂಢ
ಅಪಘಾತಗೊಂಡ ಏರ್ ಫ್ರಾನ್ಸ್ ವಿಮಾನದ ಅವಶೇಷವನ್ನು ಅಟ್ಲಾಂಟಿಕ್ ಸಾಗರದಲ್ಲಿ 90 ಕಿಮೀ ವ್ಯಾಪ್ತಿಯಲ್ಲಿ ಶೋಧಕ ಸಿಬ್ಬಂದಿ ಪತ್ತೆಹಚ್ಚಿದ್ದು, ವಿಮಾನವು ಆಕಾಶದಲ್ಲೇ ಸ್ಫೋಟಗೊಂಡಿರುವ ಸಾಧ್ಯತೆ ದಟ್ಟವಾಗಿದೆ.

ಪ್ರಥಮ ಬ್ರೆಜಿಲ್ ನೌಕೆಯು ಅಪಘಾತದ ಸ್ಥಳಕ್ಕೆ ಸಮೀಪಿಸಿದ್ದು, ಏರ್‌ಬಸ್ ಎ330ರ ಅವಶೇಷಗಳನ್ನು ಹೊರತೆಗೆಯುವ ಕಠಿಣ ಕೆಲಸವನ್ನು ಆರಂಭಿಸಲಿದೆ. ರಿಯೊ ಜಿ ಜನೈರೊನಿಂದ ಪ್ಯಾರಿಸ್ ಮಾರ್ಗವಾಗಿ ತೆರಳುತ್ತಿದ್ದ ಏರ್‌ಫ್ರಾನ್ಸ್ ವಿಮಾನ ಎರಡು ದಿನಗಳ ಹಿಂದೆ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿತ್ತು. ಈ ಪ್ರದೇಶದಲ್ಲಿ ಶೋಧಿಸುತ್ತಿರುವ ವಾಯುಪಡೆಯ ಪೈಲಟ್‌ಗಳಿಗೆ ಬದುಕುಳಿದವರ ಅಥವಾ ವಿಮಾನದಲ್ಲಿದ್ದ 228 ಜನರ ಮೃತದೇಹಗಳು ಸಿಗುವ ಲಕ್ಷಣಗಳು ಕಾಣಿಸಿಲ್ಲವೆಂದು ಹೇಳಿದ್ದಾರೆ.

ವಿಮಾನ ಹಾರಾಟದ ಅಂಕಿಅಂಶ ಮತ್ತು ಧ್ವನಿ ರೆಕಾರ್ಡರ್ ಸಾಗರದ ಆಳದಲ್ಲಿ ಮುಳುಗಿರಬಹುದೆಂದು ಹೇಳಲಾಗಿದ್ದು, ವಿಮಾನವು ಅಪಘಾತಗೊಂಡಿದ್ದು ಹೇಗೆಂದು ಪತ್ತೆಹಚ್ಚುವುದು ಕಷ್ಟವಾಗಬಹುದೆಂದು ಫ್ರೆಂಚ್ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು ಐದು ಕಿಮೀ ವ್ಯಾಪ್ತಿಯೊಳಗೆ 23 ಮೀಟರ್ ವ್ಯಾಸದ ಲೋಹದ ವಸ್ತು ಮತ್ತು 20 ಕಿಮೀ ತೈಲ ಪದರದ ಅವಶೇಷಗಳನ್ನು ಪತ್ತೆಹಚ್ಚಲಾಗಿದೆ.

ಅಪಘಾತಕ್ಕಿಂತ ಮುಂಚೆ ಯಾವುದೇ ಸಂಕೇತಗಳು ವಿಮಾನದಿಂದ ಬಂದಿಲ್ಲವೆಂದು ಹೇಳಲಾಗಿದ್ದು, ವಿದ್ಯುತ್ ವೈಫಲ್ಯ ಮತ್ತು ಒತ್ತಡದ ಕುಸಿತದ ಸೂಚನೆ ನೀಡುವ ಸ್ವಯಂಚಾಲಿತ ಸಂದೇಶಗಳು ಬಂದಿವೆಯೆಂದು ಹೇಳಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸ್ವಾತ್ ಕಾರ್ಯಾಚರಣೆ ವಿರುದ್ಧ ಕಿಡಿಕಾರಿದ ಲಾಡೆನ್
ಪಾಕ್‌ನ ಸಿಖ್ಖರು, ಹಿಂದುಗಳಿಗೆ ಜಝಿಯ ತೆರಿಗೆಯ ಹೊರೆ
ಮುಸ್ಲಿಂ ಜಗತ್ತಿಗೆ ಇಂದು ಒಬಾಮಾ ಭಾಷಣ
ಮುಂಬೈ ದಾಳಿಕೋರರ ಮೇಲೆ ಕ್ರಮಕ್ಕೆ ಅಮೆರಿಕ ಒತ್ತಾಯ
ಸ್ವಾತ್ ಕಣಿವೆಯಲ್ಲಿ ಪಾಕ್ ಸೇನಾಶಿಬಿರ
ಸೇನಾಪಡೆಗಳ ಮೇಲೆ ಪಾಕ್ ಗುಂಡಿನ ದಾಳಿ