ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ತಾಲಿಬಾನಿಗಳಿಂದ 48 ವಿದ್ಯಾರ್ಥಿಗಳ ಬಿಡುಗಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಾಲಿಬಾನಿಗಳಿಂದ 48 ವಿದ್ಯಾರ್ಥಿಗಳ ಬಿಡುಗಡೆ
ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ತಾಲಿಬಾನ್ ಉಗ್ರಗಾಮಿಗಳು ಅಪಹರಿಸಿದ್ದ ಸರ್ಕಾರಿ ಸ್ವಾಮ್ಯದ ಕೆಡೆಟ್ ಕಾಲೇಜಿನ 46 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ಬುಡಕಟ್ಟು ಪ್ರದೇಶದಲ್ಲಿ ಶಾಂತಿ ಮ‌ೂಡಿಸುವ ದಿಸೆಯಲ್ಲಿ ನಾವು ಅವರನ್ನು ಬಿಡುಗಡೆ ಮಾಡಿದ್ದು ಬುಡಕಟ್ಟು ಜಿರ್ಗಾ ಮನವಿಗೆ ಸ್ಪಂದಿಸಿದ್ದಾಗಿ ತಾಲಿಬಾನ್ ಕಮಾಂಡರ್ ಬೈತುಲ್ಲಾ ಮೆಹಸೂದ್ ಡೆಪ್ಯೂಟಿ ಹಕೀಮುಲ್ಲಾ ಮೆಹಸೂದ್ ತಿಳಿಸಿದ್ದಾನೆ.

ಮಿಲಿಟರಿ ವಕ್ತಾರ ಮೇ. ಜ. ಅಥಾರ್ ಅಬ್ಬಾಸ್ ಕೂಡ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಬಿಡುಗಡೆಯನ್ನು ದೃಢಪಡಿಸಿದ್ದಾರೆ. ಭದ್ರತಾ ಸಂಸ್ಥೆಗಳು ಬುಡಕಟ್ಟು ಹಿರಿಯರ ಮ‌ೂಲಕ ಉಗ್ರಗಾಮಿಗಳ ಜತೆ ರಹಸ್ಯ ಮಾತುಕತೆ ನಡೆಸಿದ ಬಳಿಕ ವಿದ್ಯಾರ್ಥಿಗಳನ್ನು ಬೇಷರತ್ತಿನ ಮೇಲೆ ಬಿಡುಗಡೆ ಮಾಡಲಾಯಿತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ವಾಯವ್ಯ ಗಡಿ ಪ್ರಾಂತ್ಯದ ಬನ್ನುಗೆ ಕರೆತಂದು ಬುಡಕಟ್ಟು ಜಿರ್ಗಾಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದು ಘಟನೆಯಲ್ಲಿ ವಾಯವ್ಯ ಗಡಿ ಪ್ರಾಂತ್ಯದ ಹೊರವಲಯದ ಬಾಲಕಿಯರ ಶಾಲೆಯನ್ನು ಉಗ್ರಗಾಮಿಗಳು ಸ್ಫೋಟಿಸಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ. ಪೇಶಾವರಕ್ಕೆ 10 ಕಿಮೀ ದೂರದ ಬುಡಾಬೆರ್‌ನಲ್ಲಿರುವ ಶಾಲೆಯನ್ನು 40 ಕೇಜಿ ಸ್ಫೋಟಕದಿಂದ ಸಿಡಿಸಿದಾಗ ತೀವ್ರ ಹಾನಿಗೊಂಡಿದೆ.

ಪಾಕಿಸ್ತಾನ ಸೇನೆಯು ಉಗ್ರಗಾಮಿಗಳು ಬಂಧಿಸಿಟ್ಟ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿರುವುದಾಗಿ ಈ ಮುಂಚೆ ಹೇಳಿತ್ತು. ಆದರೆ ಸೇನೆ ಕೇವಲ 71 ವಿದ್ಯಾರ್ಥಿಗಳನ್ನು ಮತ್ತು 9 ಸಿಬ್ಬಂದಿಯನ್ನು ಪಾರು ಮಾಡಿದ್ದು,ಇನ್ನೂ 48 ಜನರನ್ನು ತಾಲಿಬಾನಿಗಳು ಹಿಡಿದಿಟ್ಟಿದ್ದರು. ಇಂದು 48 ಬಂಧಿತರನ್ನು ತಾಲಿಬಾನಿಗಳು ಬಿಡುಗಡೆ ಮಾಡುವುದರೊಂದಿಗೆ ಉದ್ಭವಿಸಿದ್ದ ವಿವಾದ ಕೊನೆಗೊಂಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತಿರುವು ಮುರುವು: ಸಯೀದ್ ಬಿಡುಗಡೆಗೆ ಪಾಕ್ ಮೇಲ್ಮನವಿ
ಏರ್ ಫ್ರಾನ್ಸ್ ಅವಶೇಷ ಪತ್ತೆ: ಅಪಘಾತಕ್ಕೆ ಕಾರಣ ನಿಗೂಢ
ಸ್ವಾತ್ ಕಾರ್ಯಾಚರಣೆ ವಿರುದ್ಧ ಕಿಡಿಕಾರಿದ ಲಾಡೆನ್
ಪಾಕ್‌ನ ಸಿಖ್ಖರು, ಹಿಂದುಗಳಿಗೆ ಜಝಿಯ ತೆರಿಗೆಯ ಹೊರೆ
ಮುಸ್ಲಿಂ ಜಗತ್ತಿಗೆ ಇಂದು ಒಬಾಮಾ ಭಾಷಣ
ಮುಂಬೈ ದಾಳಿಕೋರರ ಮೇಲೆ ಕ್ರಮಕ್ಕೆ ಅಮೆರಿಕ ಒತ್ತಾಯ