ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಹೊಸ ಮಾರುವೇಷದಲ್ಲಿ ಜೆಯುಡಿ ಕಾರ್ಯಾಚರಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಸ ಮಾರುವೇಷದಲ್ಲಿ ಜೆಯುಡಿ ಕಾರ್ಯಾಚರಣೆ
:ಮುಂಬೈ ದಾಳಿಯ ಸೂತ್ರಧಾರಿಯಾದ ಹಫೀಜ್ ಸಯೀದ್‌ನನ್ನು ಸಾಕ್ಷ್ಯಾಧಾರದ ಕೊರತೆಯಿಂದ ಲಾಹೋರ್ ಹೈಕೋರ್ಟ್ ಬಿಡುಗಡೆ ಮಾಡಿತು. ಜಮಾತ್ ಉದ್ ದವಾ ಮುಖ್ಯಸ್ಥನ ಬಿಡುಗಡೆಯಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ವಾಕ್ಸಮರ ಭುಗಿಲೆದ್ದಿದ್ದು, ಜೆಯುಡಿ ಇನ್ನೊಂದು ಹೆಸರಿನಲ್ಲಿ ಕಾರ್ಯಾಚರಿಸುತ್ತಿದೆಯೆಂಬ ವರದಿಗಳು ಭಾರತಕ್ಕೆ ಮತ್ತಷ್ಟು ಆತಂಕ ಮ‌ೂಡಿಸಿದೆ.

ಜೆಯುಡಿಗೆ ವಿಶ್ವಸಂಸ್ಥೆ ನಿಷೇಧ ವಿಧಿಸಿದ್ದರೂ ಧರ್ಮದತ್ತಿಯ ಮಾರುವೇಷ ಧರಿಸಿ ಇನ್ನೊಂದು ಹೆಸರಿಟ್ಟುಕೊಂಡು ಕಾರ್ಯಾಚರಿಸುತ್ತಿದೆಯೆಂದು ವರದಿಯಾಗಿದೆ. ಜೆಯುಡಿಗೆ ನಿಷೇಧ ವಿಧಿಸಿದ್ದರಿಂದ ಸ್ವಾತ್‌ನಲ್ಲಿ ಅಭಿವೃದ್ಧಿ ಕೆಲಸ ಮಾಡುವ ಸೋಗಿನಲ್ಲಿ ಹೊಸ ಹೆಸರಿಟ್ಟುಕೊಂಡು ಕ್ರಿಯಾಶೀಲವಾಗಿದ್ದು, ಅದರ ಹೊಸ ಹೆಸರು ಖಿದ್ಮತ್-ಐ- ಇನ್‌ಸಾನಿಯತ್ ಪ್ರತಿಷ್ಠಾನವೆನ್ನಲಾಗಿದೆ.

ಭಾರತ ಆತಂಕಗೊಳ್ಳಲು ಇವೆಲ್ಲ ಕಾರಣಗಳೆನ್ನಲಾಗಿದೆ. ಸಯೀದ್ ಬಿಡುಗಡೆಯಿಂದ ಭಯೋತ್ಪಾದಕರನ್ನು ದಮನಿಸುವ ಪಾಕ್ ಪ್ರಾಮಾಣಿಕತೆ ಬಗ್ಗೆ ಅನುಮಾನ ಮ‌ೂಡಿದ್ದಾಗಿ ಭಾರತ ಹೇಳಿದೆ. ಸಯೀದ್ ಬಿಡುಗಡೆಯಿಂದ ಹುರುಪುಗೊಂಡಿರುವ ಅವನ ವಕೀಲರು ಸಂಘಟನೆ ಆಸ್ತಿ ಸ್ಥಗಿತಗೊಳಿಸಿದ ಕ್ರಮವನ್ನು ಪ್ರಶ್ನಿಸುವುದಾಗಿ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪತ್ತೆಯಾದ ಅವಶೇಷ ಅಪಘಾತಕ್ಕೀಡಾದ ವಿಮಾನದ್ದಲ್ಲ
ಏರ್‌ಫ್ರಾನ್ಸ್‌ ದುರಂತ ಭೀಕರ
ತಾಲಿಬಾನ್ ಉಗ್ರರಿಂದ ಬಾಲಕೀಯರ ಶಾಲೆ ಸ್ಫೋಟ
ಗಣ್ಯರ ಮೇಲೆ ದಾಳಿಗೆ ಅಲ್ ಖಾಯಿದಾ ಪಾಕ್ ಪ್ರವೇಶ
ವೀಸಾ ಹಗರಣ: ಮ‌ೂವರು ಎನ್‌ಆರ್‌ಐಗಳಿಗೆ ಕೋರ್ಟ್ ಶಿಕ್ಷೆ
ಅಮೆರಿಕ, ಮುಸ್ಲಿಂರ ನೂತನ ಶಕೆಗೆ ಒಬಾಮಾ ಕರೆ