ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ನಾಗಸಾಕಿ ಮೇಲೆ ಅಣುಬಾಂಬ್ ಹಾಕಿದ ಪೈಲಟ್ ನಿಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾಗಸಾಕಿ ಮೇಲೆ ಅಣುಬಾಂಬ್ ಹಾಕಿದ ಪೈಲಟ್ ನಿಧನ
ಜಪಾನಿನ ನಾಗಸಾಕಿ ಮೇಲೆ ಅಣುಬಾಂಬ್ ಹಾಕಿದ ವಿಮಾನದ ಸಹಪೈಲಟ್ 88ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೇ 23ರಂದು ಚಾರ್ಲ್ಸ್ ಡೊನಾಲ್ಡ್ ಆಲ್ಬರಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆಂದು ಟೆಲಿಗ್ರಾಫ್ ವರದಿ ಮಾಡಿದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ 1945ರ ಆಗಸ್ಟ್ 9 ನಾಗಸಾಕಿಗೆ ಕರಾಳ ದಿನ. ಆಲ್ಬರಿ ಬಿ-29 ಬಾಕ್‌ಸ್ಕಾರ್ ವಿಮಾನವನ್ನು ಬಾಂಬ್ ಉದುರಿಸುವುದಕ್ಕಾಗಿ ನಾಗಸಾಕಿ ಮೇಲೆ ಒಯ್ದಿದ್ದರು.

ಇದಕ್ಕೆ ಮುಂಚೆ ಮ‌ೂರು ದಿನಗಳ ಕೆಳಗೆ ಹಿರೋಶಿಮಾದಲ್ಲಿ ಪ್ರಥಮ ಅಣುಬಾಂಬ್ ಹಾಕುವುದಕ್ಕೆ ಬೆಂಬಲ ವಿಮಾನದ ಪೈಲಟ್ ಆಗುವ ಮ‌ೂಲಕ ಅವರು ಸಾಕ್ಷಿಯಾಗಿದ್ದರು. ಹಿರೋಷಿಮಾ ಕಾರ್ಯಾಚರಣೆಯಲ್ಲಿ ಸ್ಫೋಟದ ಅಗಾಧತೆ ಮತ್ತು ಅಣುವಿಕಿರಣದ ಮಟ್ಟವನ್ನು ಅಳತೆ ಮಾಡಲು ಆಲ್ಬರಿ ಸಾಮಗ್ರಿಗಳನ್ನು ವಿಮಾನದಿಂದ ಉದುರಿಸಿದ್ದರು. ಸುಮಾರು 10,200 ಪೌಂಡ್ ಅಣು ಬಾಂಬ್ ಸ್ಫೋಟದಿಂದ 40,000 ಜನರು ಹತರಾಗಿದ್ದರು.

ಇನ್ನೂ 35,000 ಜನರು ಗಾಯಗಳಿಂದ ಮತ್ತು ಅಣುವಿಕಿರಣದ ದುಷ್ಪರಿಣಾಮದಿಂದ ಸತ್ತಿದ್ದರು. ಬಳಿಕ ಜಪಾನ್ ಆಗಸ್ಟ್ 14ರಂದು ಶರಣಾಗಿತ್ತು. ಜಪಾನ್ ಅಮೆರಿಕದ ಮೇಲೆ ದಾಳಿಮಾಡಲು ಉದ್ದೇಶಿಸಿದ್ದರಿಂದ ವಿನಾಶಕಾರಿ ಸಾವು, ನೋವು ಸಂಭವಿಸುವುದು ಖಚಿತವಾದ್ದರಿಂದ ಅದನ್ನು ತಪ್ಪಿಸಲು ದಾಳಿ ನಡೆಸಬೇಕಾಯಿತು ಎಂದು ಹೇಳಿದ್ದ ಅಲ್ಬರಿ ತಮ್ಮ ವಿನಾಶಕಾರಿ ಕ್ರಮಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ.ಯುದ್ಧದ ಬಳಿಕ ಪತ್ನಿ ಜತೆ ಫ್ಲೋರಿಡಾದ ಕೊರಾಲ್ ಗೇಬಲ್ಸ್‌ನಲ್ಲಿ ನೆಲೆಸಿದ ಅಲ್ಬರಿ ಈಸ್ಟರ್ನ್ ಏರ್‌ಲೈನ್ಸ್ ವಿಮಾನಗಳ ಪೈಲಟ್ ಕೆಲಸ ನಿರ್ವಹಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹೊಸ ಮಾರುವೇಷದಲ್ಲಿ ಜೆಯುಡಿ ಕಾರ್ಯಾಚರಣೆ
ಪತ್ತೆಯಾದ ಅವಶೇಷ ಅಪಘಾತಕ್ಕೀಡಾದ ವಿಮಾನದ್ದಲ್ಲ
ಏರ್‌ಫ್ರಾನ್ಸ್‌ ದುರಂತ ಭೀಕರ
ತಾಲಿಬಾನ್ ಉಗ್ರರಿಂದ ಬಾಲಕೀಯರ ಶಾಲೆ ಸ್ಫೋಟ
ಗಣ್ಯರ ಮೇಲೆ ದಾಳಿಗೆ ಅಲ್ ಖಾಯಿದಾ ಪಾಕ್ ಪ್ರವೇಶ
ವೀಸಾ ಹಗರಣ: ಮ‌ೂವರು ಎನ್‌ಆರ್‌ಐಗಳಿಗೆ ಕೋರ್ಟ್ ಶಿಕ್ಷೆ