ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ನೇಪಾಳ ವಿದೇಶಾಂಗ ಸಚಿವೆಯಾಗಿ ಸುಜಾತ ಕೊರ್ಯಾಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೇಪಾಳ ವಿದೇಶಾಂಗ ಸಚಿವೆಯಾಗಿ ಸುಜಾತ ಕೊರ್ಯಾಲ
ಬಹುದಿನಗಳಿಂದ ನಿರೀಕ್ಷಿಸಿದ್ದ ಪ್ರಧಾನಮಂತ್ರಿ ಮಾಧವ ಕುಮಾರ್ ನೇಪಾಳ ಅವರ ಸಚಿವಸಂಪುಟ ವಿಸ್ತರಣೆಯಲ್ಲಿ ನೇಪಾಳಿ ಕಾಂಗ್ರೆಸ್ ನಾಯಕಿ ಸುಜಾತಾ ಕೊರ್ಯಾಲ ವಿದೇಶಾಂಗ ಸಚಿವೆಯಾಗಿ ನೇಮಕವಾಗಿದ್ದಾರೆ.

ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಮತ್ತು ಮಾಜಿ ಪ್ರಧಾನಮಂತ್ರಿ ಗಿರಿಜಾ ಪ್ರಸಾದ್ ಕೊಯಿರಾಲಾ ಅವರ ಪುತ್ರಿಯಾದ ಸುಜಾತಾ ಕೊಯಿರಾಲಾ ಅವರಲ್ಲದೇ ಐವರು ಎನ್‌ಸಿ ಮುಖಂಡರಾದ ಪ್ರಕಾಶ್ ಶರಣ್ ಮಹತ್, ಮಿನೇಂದ್ರ ರಿಜಾಲ್, ಬಾಲಕೃಷ್ಣ ಖಂಡ್, ಪುರ್ಣ ಕುಮಾರ್ ಶೆರ್ಮಾ ಮತ್ತು ಉಮಾಕಾಂತ ಚೌಧರಿ ಅವರನ್ನು ಸಚಿವರನ್ನಾಗಿ ನೇಮಿಸಲಾಗಿದ್ದು, ಖಾತೆಗಳನ್ನು ಹಂಚಲಾಗಿಲ್ಲ.

ಅಧ್ಯಕ್ಷ ರಾಮ್ ಬರಣ್ ಯಾದವ್ ಅವರ ಸಮ್ಮುಖದಲ್ಲಿ ಅಧ್ಯಕ್ಷರ ಕಚೇರಿಯಲ್ಲಿ ನೂತನವಾಗಿ ಆಯ್ಕೆಯಾದ ಸಚಿವರಿಗೆ ಪ್ರಧಾನಮಂತ್ರಿ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣವಚನ ಬೋಧಿಸಿದರು. ಮಾದೇಶಿ ಪೀಪಲ್ಸ್ ರೈಟ್ಸ್ ವೇದಿಕೆ ನಾಯಕ ಬಿಜಯ್ ಗಚಾದ್ದಾರ್ ಅವರನ್ನು ಉಪಪ್ರಧಾನಿಯಾಗಿ ನೇಮಿಸಲಾಗಿದ್ದು, ಬೌತಿಕ ಯೋಜನೆ ಮತ್ತು ಕಾಮಗಾರಿ ಖಾತೆಯನ್ನು ಕೂಡ ಅವರು ನಿರ್ವಹಿಸಲಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಾಗಸಾಕಿ ಮೇಲೆ ಅಣುಬಾಂಬ್ ಹಾಕಿದ ಪೈಲಟ್ ನಿಧನ
ಹೊಸ ಮಾರುವೇಷದಲ್ಲಿ ಜೆಯುಡಿ ಕಾರ್ಯಾಚರಣೆ
ಪತ್ತೆಯಾದ ಅವಶೇಷ ಅಪಘಾತಕ್ಕೀಡಾದ ವಿಮಾನದ್ದಲ್ಲ
ಏರ್‌ಫ್ರಾನ್ಸ್‌ ದುರಂತ ಭೀಕರ
ತಾಲಿಬಾನ್ ಉಗ್ರರಿಂದ ಬಾಲಕೀಯರ ಶಾಲೆ ಸ್ಫೋಟ
ಗಣ್ಯರ ಮೇಲೆ ದಾಳಿಗೆ ಅಲ್ ಖಾಯಿದಾ ಪಾಕ್ ಪ್ರವೇಶ