ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ತಾಲಿಬಾನ್-ಪಾಕ್ ಸಂಧಾನಕಾರ ಸೂಫಿ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಾಲಿಬಾನ್-ಪಾಕ್ ಸಂಧಾನಕಾರ ಸೂಫಿ ಬಂಧನ
ಪಾಕಿಸ್ತಾನದ ವಾಯವ್ಯ ಸ್ವಾತ್ ಕಣಿವೆಯಲ್ಲಿ ವಿವಾದಾತ್ಮಕ ಶಾಂತಿ ಒಪ್ಪಂದ ಕುದುರಿಸಿದ ಮ‌ೂಲಭೂತವಾದಿ ಧರ್ಮಗುರು ಸೂಫಿ ಮಹಮ್ಮದ್‌ನನ್ನು ಅವನ ಇಬ್ಬರು ಮಕ್ಕಳು ಮತ್ತು ನಿಷೇಧಿತ ಸಂಘಟನೆ ಟಿಎನ್‌ಎಸ್‌ಎಂನ ಐವರು ನಾಯಕರ ಜತೆ ಗುರುವಾರ ಬಂಧಿಸಲಾಗಿದೆ.

ಕಾನೂನು ಜಾರಿ ಸಂಸ್ಥೆಗಳು ಸೂಫಿ ಮಹಮದ್, ಅವರ ಪುತ್ರರಾದ ರಿಜ್ವಾನುಲ್ಲಾ ಮತ್ತು ಜಿಯಾವುಲ್ಲಾ ಸೇರಿದಂತೆ ಟಿಎನ್‌ಎಸ್‌ಎಂ ಐವರು ನಾಯಕರನ್ನು ಬಂಧಿಸಿವೆ.ಬಂಧನ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ ಎಂದು ವರದಿಗಳು ತಿಳಿಸಿದ್ದು, ಅಜ್ಞಾತ ಸ್ಥಳವೊಂದಕ್ಕೆ ಬಂಧಿತರನ್ನು ಒಯ್ಯಲಾಗಿದೆ.

ಮಲಕಾಂಡ್ ವಿಭಾಗದಲ್ಲಿ ತಾಲಿಬಾನ್ ಹೋರಾಟಗಾರರ ಜತೆ ಸೂಫಿ ಮಹಮದ್ ನಿಕಟ ಸಂಪರ್ಕವಿರಿಸಿಕೊಂಡಿದ್ದರಿಂದ ಅವನನ್ನು ಬಂಧಿಸಲಾಗಿದೆಯೆಂದು ವರದಿಗಳು ತಿಳಿಸಿವೆ. ತಾಲಿಬಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿರುವ ಮಲಕಾಂಡ್ ವಿಭಾಗದ ಅಮಂಡಾರಾನಲ್ಲಿ ಟಿಎನ್‌ಎಸ್‌ಎಂ ಮುಖ್ಯಕೇಂದ್ರದಲ್ಲಿ ಬಹುತೇಕ ಜನರನ್ನು ಬಂಧಿಸಲಾಗಿದೆ.

ಸೂಫ್ ಮಹಮದ್ ವಾಯವ್ಯ ಗಡಿ ಪ್ರಾಂತ್ಯದ ಸರ್ಕಾರದ ಜತೆ ಒಪ್ಪಂದ ಕುದುರಿಸಿ ಷರಿಯತ್ ಕಾನೂನು ಜಾರಿಗೆ ತಂದರೆ ಸ್ವಾತ್ ಮತ್ತು ಮಲಕಾಂಡ್ ಇತರೆ ಭಾಗಗಳಲ್ಲಿ ಶಾಂತಿ ಸ್ಥಾಪಿಸುವುದಾಗಿ ಭರವಸೆ ನೀಡಿದ್ದ. ತೀವ್ರವಾದಿ ಧರ್ಮಗುರು ಸೂಫಿ, ತನ್ನ ಅಳಿಯ ಮೌಲಾನಾ ಫಜಲುಲ್ಲಾ ನೇತೃತ್ವದಲ್ಲಿ ತಾಲಿಬಾನ್ ಹೋರಾಟಗಾರರು ಮತ್ತು ಎನ್‌ಡಬ್ಲ್ಯು‌ಎಫ್‌ಪಿ ಸರ್ಕಾರದ ನಡುವೆ ಮಧ್ಯಸ್ಥಿಕೆ ವಹಿಸಿ ಶಾಂತಿ ಒಪ್ಪಂದಕ್ಕೆ ಅಂತಿಮ ರೂಪು ನೀಡಿದ್ದ. ಒಪ್ಪಂದದ ಅನ್ವಯ ಉಗ್ರಗಾಮಿಗಳು ಶಸ್ತ್ರಾಸ್ತ್ರಗಳನ್ನು ಒಪ್ಪಿಸುವುದಕ್ಕೆ ಪ್ರತಿಯಾಗಿ ಇಸ್ಲಾಮಿಕ್ ಕೋರ್ಟ್‌ಗಳ ಸ್ಥಾಪನೆಗೆ ಅಧಿಕಾರಿಗಳು ಸಮ್ಮತಿಸಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಂಗಾತಿಗಾಗಿ ಕಾಲೇಜು ಕ್ಯಾಂಪಸ್‌ಗಳಲ್ಲಿ ಶೋಧ
ನೇಪಾಳ ವಿದೇಶಾಂಗ ಸಚಿವೆಯಾಗಿ ಸುಜಾತ ಕೊರ್ಯಾಲ
ನಾಗಸಾಕಿ ಮೇಲೆ ಅಣುಬಾಂಬ್ ಹಾಕಿದ ಪೈಲಟ್ ನಿಧನ
ಹೊಸ ಮಾರುವೇಷದಲ್ಲಿ ಜೆಯುಡಿ ಕಾರ್ಯಾಚರಣೆ
ಪತ್ತೆಯಾದ ಅವಶೇಷ ಅಪಘಾತಕ್ಕೀಡಾದ ವಿಮಾನದ್ದಲ್ಲ
ಏರ್‌ಫ್ರಾನ್ಸ್‌ ದುರಂತ ಭೀಕರ