ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಮೆರಿಕ ಪತ್ರಕರ್ತೆಯರಿಗೆ ಉ.ಕೊರಿಯ ಸೆರೆವಾಸದ ಶಿಕ್ಷೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕ ಪತ್ರಕರ್ತೆಯರಿಗೆ ಉ.ಕೊರಿಯ ಸೆರೆವಾಸದ ಶಿಕ್ಷೆ
ಉತ್ತರ ಕೊರಿಯದ ಉನ್ನತ ಕೋರ್ಟ್ ಅಮೆರಿಕದ ಇಬ್ಬರು ಮಹಿಳಾ ಪತ್ರಕರ್ತರಿಗೆ 12 ವರ್ಷ ಕಾಲಾವಧಿಯ ಶಿಕ್ಷೆ ವಿಧಿಸಿ, ಲೇಬರ್ ಬಂಧೀಖಾನೆಯಲ್ಲಿ ಸೆರೆಯಾಗಿಸಿದೆ ಎಂದು ರಾಷ್ಟ್ರಸ್ವಾಮ್ಯದ ಸುದ್ದಿ ಏಜನ್ಸಿ ಸೋಮವಾರ ವರದಿ ಮಾಡಿದೆ.

ಅಮೆರಿಕದ ಟಿವಿ ವರದಿಗಾರರಾದ ಲಾರಾ ಲಿಂಗ್ ಮತ್ತು ಯುನಾ ಲೀ ಅವರ ವಿಚಾರಣೆ ನಡೆಸಿದ ಸೆಂಟ್ರಲ್ ಕೋರ್ಟ್, ರಾಷ್ಟ್ರದ ವಿರುದ್ಧ ಅವರ ಗಂಭೀರ ಅಪರಾಧ ಮತ್ತು ಉತ್ತರಕೊರಿಯಕ್ಕೆ ಅಕ್ರಮವಾಗಿ ಪ್ರವೇಶಿಸಿದ ಕಾರಣದ ಮೇಲೆ ಅವರ ಶಿಕ್ಷೆಯನ್ನು ದೃಢಪಡಿಸಿದೆಯೆಂದು ಕೊರಿಯ ಸೆಂಟ್ರಲ್ ನ್ಯೂಸ್ ಏಜನ್ಸಿ ತಿಳಿಸಿದೆ.

ಜೂನ್ 4ರಿಂದ 8ರವರೆಗೆ ವಿಚಾರಣೆ ನಡೆಸಿದ ಕೋರ್ಟ್ 12 ವರ್ಷಗಳ ಶಿಕ್ಷೆಗೆ ಗುರಿಮಾಡಿದೆಯೆಂದು ವರದಿ ತಿಳಿಸಿದ್ದು, ಬೇರಾವುದೇ ವಿವರಗಳನ್ನು ನೀಡಿಲ್ಲ.ಸೋಲ್‌ನಲ್ಲಿ ಅಮೆರಿಕ ರಾಯಭಾರ ಕಚೇರಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇಬ್ಬರು ಪತ್ರಕರ್ತರನ್ನು ಸುತ್ತುವರಿದ ಸನ್ನಿವೇಶಗಳು ಮತ್ತು ಮ‌ೂರು ತಿಂಗಳ ಹಿಂದೆ ಚೀನಾ-ಉತ್ತರ ಕೊರಿಯ ಗಡಿಯಲ್ಲಿ ಅವರ ಬಂಧನವನ್ನು ಗೋಪ್ಯವಾಗಿ ಇಡಲಾಗಿತ್ತು. ದಕ್ಷಿಣ ಕೊರಿಯ ಮತ್ತು ಅಮೆರಿಕದ ಜತೆ ಬಿಕ್ಕಟ್ಟಿನ ನಡುವೆ ಇಬ್ಬರು ಮಹಿಳೆಯರನ್ನು ಚೌಕಾಸಿ ವಸ್ತುಗಳಂತೆ ಬಳಸಿಕೊಳ್ಳುವ ಶಂಕೆ ಆವರಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತದ ಕಾನೂನು ಪದವಿಗೆ ಕೆನಡಾ ಮಾನ್ಯತೆ
ಏರ್‌ಫ್ರಾನ್ಸ್ ಅವಶೇಷದಿಂದ 17 ದೇಹಗಳು ಪತ್ತೆ
ಆಸ್ಟ್ರೇಲಿಯಾ: 1,006 ಹಂದಿ ಜ್ವರ ಪ್ರಕರಣ
ಸಯೀದ್ ವಿರುದ್ಧ ಪಾಕ್ ಸಾಕ್ಷ್ಯ ಒದಗಿಸಿಯೇ ಇಲ್ಲ: ಕೋರ್ಟ್
ಆಸ್ಟ್ರೇಲಿಯ: ಭಾರತೀಯ ವಿದ್ಯಾರ್ಥಿ ಕಾರಿಗೆ ಬೆಂಕಿ
ಲೆಬೆನಾನ್‌‌ನಲ್ಲಿ ಶಾಂತಿಯುತ ಮತದಾನ