ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಇನ್ನೊಬ್ಬ ಭಾರತೀಯ ವಿದ್ಯಾರ್ಥಿ ಮೇಲೆ ದಾಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ನೊಬ್ಬ ಭಾರತೀಯ ವಿದ್ಯಾರ್ಥಿ ಮೇಲೆ ದಾಳಿ
ಆಸ್ಟ್ರೇಲಿಯದಲ್ಲಿ ಭಾರತೀಯ ವಿದ್ಯಾರ್ಥಿಗಳ ವಿರುದ್ಧ ಜನಾಂಗೀಯ ದ್ವೇಷದ ಜ್ವಾಲೆಗೆ ಇನ್ನೊಬ್ಬ ಭಾರತೀಯ ವಿದ್ಯಾರ್ಥಿ ಗುರಿಯಾಗಿದ್ದಾರೆ. ಮೆಲ್ಬೋರ್ನ್‌ನಲ್ಲಿ ಯುವಕರ ತಂಡವೊಂದು 23 ವರ್ಷ ವಯಸ್ಸಿನ ಭಾರತೀಯ ವಿದ್ಯಾರ್ಥಿಗೆ ಎರಡನೇ ಬಾರಿ ಥಳಿಸಿದ್ದಾರೆಂದು ತಿಳಿದುಬಂದಿದೆ. ನಗರದ ಪಶ್ಚಿಮ ಉಪನಗರದಲ್ಲಿ ಭಾನುವಾರ ಕಮಲ್ ಜಿತ್ ಎಂಬ ವಿದ್ಯಾರ್ಥಿ ರಕ್ತಸ್ರಾವದೊಂದಿಗೆ ಪ್ರಜ್ಞೆ ತಪ್ಪಿಬಿದ್ದಿದ್ದನ್ನು ಇನ್ನೊಬ್ಬ ಭಾರತೀಯ ವಿದ್ಯಾರ್ಥಿಯು ಗಮನಿಸಿದ.

ಇದು ಕಮಲ್ ಜಿತ್ ಮೇಲೆ ನಡೆದಿರುವ ಎರಡನೇ ದಾಳಿಯಾಗಿದೆ. ಮುಂಚಿನ ಘಟನೆಯಲ್ಲಿ ಸೇಂಟ್ ಆಲ್ಬನ್ಸ್ ನಿಲ್ದಾಣದಿಂದ ತಡರಾತ್ರಿ ರೈಲಿನಲ್ಲಿ ಬಂದಿಳಿದ ಕಮಲ್ ಜಿತ್ ಮೇಲೆ ಅನೇಕ ಮಂದಿ ಮುಸುಕುಧಾರಿ ವ್ಯಕ್ತಿಗಳು ಮೊಟ್ಟೆಗಳನ್ನು ಎಸೆದು ದಾಳಿ ಮಾಡಿದ್ದರು. ಇದೊಂದು ಕೆಟ್ಟ ಘಟನೆಯಾಗಿದ್ದು, ನಾವು ಶಿಕ್ಷಣಕ್ಕಾಗಿ ಅಪಾರ ಹಣ ಪಾವತಿ ಮಾಡುತ್ತಿದ್ದು, ನಮ್ಮ ರಾಷ್ಟ್ರದಿಂದ, ಕುಟುಂಬದಿಂದ ಯಾವುದೇ ರಕ್ಷಣೆಯಿಲ್ಲದೇ ಜೀವಿಸುತ್ತಿರುವುದಾಗಿ ಜಿತ್ ಹೇಳಿದ್ದಾರೆ.

ಭಾನುವಾರ ರಾತ್ರಿ 1.40ಕ್ಕೆ ಮನೆಗೆ ತೆರಳುತ್ತಿದ್ದಾಗ ಕಾರೊಂದರಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಮ‌ೂವರನ್ನು ಕಂಡ ಜಿತ್ ಅವರಿಂದ ತಪ್ಪಿಸಿಕೊಳ್ಳಲು ನೋಡಿದ. ಬಳಿಕ ಕಾರಿನಿಂದ ಇಳಿದ ಇಬ್ಬರು ಪಿಜ್ಜಾ ಶಾಪ್‌ ಬಳಿ ತೆರಳಿ ತಮ್ಮನ್ನು ನೆಲಕ್ಕೆ ತಳ್ಳಿ ತಲೆಯ ಮೇಲೆ ಬಹುಶಃ ಕಬ್ಬಿಣದ ರಾಡ್‌ನಿಂದ ಹೊಡೆದರೆಂದು ಅವರು ಆಪಾದಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಮೆರಿಕ ಪತ್ರಕರ್ತೆಯರಿಗೆ ಉ.ಕೊರಿಯ ಸೆರೆವಾಸದ ಶಿಕ್ಷೆ
ಭಾರತದ ಕಾನೂನು ಪದವಿಗೆ ಕೆನಡಾ ಮಾನ್ಯತೆ
ಏರ್‌ಫ್ರಾನ್ಸ್ ಅವಶೇಷದಿಂದ 17 ದೇಹಗಳು ಪತ್ತೆ
ಆಸ್ಟ್ರೇಲಿಯಾ: 1,006 ಹಂದಿ ಜ್ವರ ಪ್ರಕರಣ
ಸಯೀದ್ ವಿರುದ್ಧ ಪಾಕ್ ಸಾಕ್ಷ್ಯ ಒದಗಿಸಿಯೇ ಇಲ್ಲ: ಕೋರ್ಟ್
ಆಸ್ಟ್ರೇಲಿಯ: ಭಾರತೀಯ ವಿದ್ಯಾರ್ಥಿ ಕಾರಿಗೆ ಬೆಂಕಿ