ಬಾಗ್ದಾದ್ನ ಶಿಯಾ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ಜನದಟ್ಟಣೆಯ ಅವಧಿಯಲ್ಲಿ ಮಿನಿಬಸ್ಸೊಂದರಲ್ಲಿ ಬಾಂಬ್ ಸ್ಫೋಟಿಸಿ ಕನಿಷ್ಠ 7 ಜನರು ಅಸುನೀಗಿದ್ದಾರೆಂದು ಇರಾಕಿನ ಅಧಿಕಾರಿಗಳು ತಿಳಿಸಿದ್ದಾರೆ. ಅಬು ದಿಶಿರ್ನ ಮಿನಿಬಸ್ಸೊಂದರ ಅಡಿಯಲ್ಲಿ ಬಾಂಬ್ ಹುದುಗಿಸಿಡಲಾಗಿತ್ತೆಂದು ಪೊಲೀಸರು ಮತ್ತು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ದುರ್ಘಟನೆಯಲ್ಲಿ 24 ಜನರು ಗಾಯಗೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಅಬು ದಿಶಿರ್ ದೋರಾದ ಸುನ್ನಿ ಪ್ರದೇಶದಲ್ಲಿ ಶಿಯಾ ಸಮೂಹದ ಜನರಿದ್ದ ಪ್ರದೇಶವಾಗಿದೆ. ಹಲವಾರು ವರ್ಷಗಳಿಂದ ಎರಡೂ ಪ್ರದೇಶಗಳು ಅಮಾನುಷ ಜನಾಂಗೀಯ ಹಿಂಸಾಚಾರಕ್ಕೆ ಬಲಿಯಾಗಿವೆ.
ಇರಾಕ್ನಲ್ಲಿ ಅಲ್ ಖಾಯಿದಾ ಮತ್ತು ಶಿಯಾ ಉಗ್ರಗಾಮಿಗಳ ಕದನವಿರಾಮದ ಹಿನ್ನೆಲೆಯಲ್ಲಿ ಇತ್ತೀಚೆಗೆ ಹಿಂಸಾಚಾರ ತೀವ್ರ ಕುಂಠಿತವಾಗಿದೆ. |