ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > "ತಾಲಿಬಾನಿಗಳ ವಿರುದ್ಧ ನ್ಯಾಟೊ ಗೆಲುವು ಸಾಧ್ಯವಿಲ್ಲ"
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
"ತಾಲಿಬಾನಿಗಳ ವಿರುದ್ಧ ನ್ಯಾಟೊ ಗೆಲುವು ಸಾಧ್ಯವಿಲ್ಲ"
ಆಫ್ಘಾನಿಸ್ತಾನದಲ್ಲಿ ನಿಮ್ಮ ಶತ್ರುಗಳ ವಿರುದ್ಧ ಗೆಲ್ಲಲು ಸಾಧ್ಯವೇ ಇಲ್ಲವೆಂದು ತಾಲಿಬಾನ್ ನಾಯಕ ಮುಲ್ಲಾ ಓಮರ್‌ಗೆ ತರಬೇತಿ ನೀಡಿದ್ದ ಪಾಕಿಸ್ತಾನ ಗುಪ್ತಚರ ಏಜೆಂಟ್ ನ್ಯಾಟೊ ಪಡೆಗಳಿಗೆ ಎಚ್ಚರಿಕೆ ನೀಡಿದ್ದಾರೆ. ಸೋವಿಯತ್ ಆಕ್ರಮಣದ ವಿರುದ್ಧ ಆಫ್ಘಾನಿಸ್ತಾನದ ಪ್ರತಿರೋಧಕ್ಕೆ 1979ರಿಂದ 1989ರ ಅವಧಿಯಲ್ಲಿ ತರಬೇತಿ ಶಿಬಿರ ನಡೆಸಿದ್ದ ಕರ್ನಲ್ ಇಮಾಮ್ ಎಂದು ಹೇಳಲಾಗಿರುವ ಪಾಕ್ ಗುಪ್ತಚರ ಏಜೆಂಟ್ ನೀವು ಆಫ್ಘಾನಿಸ್ತಾನದ ಸಮರದಲ್ಲಿ ಜಯಿಸುವುದು ಸಾಧ್ಯವೇ ಇಲ್ಲವೆಂದಅಮೆರಿಕಕ್ಕೆ ತಿಳಿಸಿದ್ದಾರೆ.

"1970ರಿಂದ ತಾನು ಈ ಜನರೊಂದಿಗೆ ಕೆಲಸ ಮಾಡುತ್ತಿದ್ದು, ಅವರನ್ನು ಸೋಲಿಸಲು ಸಾಧ್ಯವೇ ಆಗುವುದಿಲ್ಲ. ನೀವು ಹೆಚ್ಚು ಉಗ್ರರನ್ನು ಕೊಂದಷ್ಟೂ ಅವರು ಬೆಳೆಯುತ್ತಲೇ ಇರುತ್ತಾರೆಂದು" ಅವನು ಹೇಳಿದ್ದಾನೆ. ಅಮೀರ್ ಸುಲ್ತಾನ್ ತರಾರ್ ಎಂದು ನಿಜ ಹೆಸರನ್ನು ಹೊಂದಿರುವ ಗಡ್ಡಧಾರಿ, ಉದ್ದನೆಯ ವ್ಯಕ್ತಿಯು ಅಮೆರಿಕದ ವಿಶೇಷ ಪಡೆಗಳಿರುವ ಸೇನಾ ನೆಲೆ ಫೋರ್ಟ್ ಬ್ರಾಗ್‌ನಲ್ಲಿ ತರಬೇತು ಹೊಂದಿದ್ದಾನೆ.

1970 ಮತ್ತು 1980ರ ಅವಧಿಯಲ್ಲಿ ಸುಮಾರು 95,000 ಆಫ್ಘನ್ನರಿಗೆ ಸಿಐಎ ಆರ್ಥಿಕ ನೆರವು ನೀಡುತ್ತಿದ್ದ ತರಬೇತಿ ಶಿಬಿರಗಳಲ್ಲಿ
ಅಮೀರ್ ಸುಲ್ತಾನ್ ಭಾಗವಹಿಸಿದ್ದ ಮತ್ತು ಕಾರ್ಯಾಚರಣೆಗಳಿಗೆ ವಿದ್ಯಾರ್ಥಿಗಳನ್ನು ಆಗಾಗ್ಗೆ ಜತೆಗೂಡುತ್ತಿದ್ದ. ಸೋವಿಯತ್ ಸೋಲು ಮತ್ತು ಕಮ್ಯುನಿಸ್ಟ್ ಕುಸಿತದ ಬಳಿಕ ಆಗಿನ ಪ್ರಥಮ ಅಧ್ಯಕ್ಷ ಜಾರ್ಜ್ ಬುಷ್ ಅವರನ್ನು ಶ್ವೇತಭವನಕ್ಕೆ ಕರೆಸಿಕೊಂಡು ಬರ್ಲಿನ್ ಗೋಡೆಯ ಚೂರು ಮತ್ತು ಪ್ರಥಮ ಪೆಟ್ಟು ನೀಡಿದವರಿಗೆ ಎಂದು ಕೆತ್ತಲಾದ ಹಿತ್ತಾಳೆ ಫಲಕವನ್ನು ನೀಡಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇರಾಕ್‌ನಲ್ಲಿ ಮಿನಿಬಾಂಬ್ ಸ್ಫೋಟಕ್ಕೆ 7 ಜನರ ಬಲಿ
ಇನ್ನೊಬ್ಬ ಭಾರತೀಯ ವಿದ್ಯಾರ್ಥಿ ಮೇಲೆ ದಾಳಿ
ಅಮೆರಿಕ ಪತ್ರಕರ್ತೆಯರಿಗೆ ಉ.ಕೊರಿಯ ಸೆರೆವಾಸದ ಶಿಕ್ಷೆ
ಭಾರತದ ಕಾನೂನು ಪದವಿಗೆ ಕೆನಡಾ ಮಾನ್ಯತೆ
ಏರ್‌ಫ್ರಾನ್ಸ್ ಅವಶೇಷದಿಂದ 17 ದೇಹಗಳು ಪತ್ತೆ
ಆಸ್ಟ್ರೇಲಿಯಾ: 1,006 ಹಂದಿ ಜ್ವರ ಪ್ರಕರಣ