ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ತಾಲಿಬಾನ್ ವಿರುದ್ಧ ಸಿಡಿದೆದ್ದ ಬುಡಕಟ್ಟು ಜನಾಂಗ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಾಲಿಬಾನ್ ವಿರುದ್ಧ ಸಿಡಿದೆದ್ದ ಬುಡಕಟ್ಟು ಜನಾಂಗ
ವಾಯವ್ಯ ಪಾಕಿಸ್ತಾನದಲ್ಲಿ ತಾಲಿಬಾನ್ ಉಗ್ರಗಾಮಿಗಳ ವಿರುದ್ಧ ನೂರಾರು ಬುಡಕಟ್ಟು ಜನಾಂಗದ ವ್ಯಕ್ತಿಗಳು ದಾಳಿ ನಡೆಸಿದ್ದಾರೆ. ಮ‌ೂರು ದಿನಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಕನಿಷ್ಠ 11 ತಾಲಿಬಾನಿಗಳು ಹತರಾಗಿದ್ದಾರೆ. ಮೇಲು ದಿರ್ ಜಿಲ್ಲೆಯಲ್ಲಿ ಮಸೀದಿಯೊಂದರ ಮೇಲೆ ಬಾಂಬ್ ದಾಳಿ ಬಳಿಕ 38 ಜನರ ಅಸುನೀಗಿದ್ದರಿಂದ ಗ್ರಾಮಸ್ಥರು ಆಕ್ರೋಶಗೊಂಡು ಈ ದಾಳಿ ನಡೆಸಿದ್ದಾರೆ.

ದಾಳಿಗೆ ತಾಲಿಬಾನ್ ಹೋರಾಟಗಾರರು ಕಾರಣವೆಂದು ಗ್ರಾಮಸ್ಥರು ದೂರಿದ್ದಾರೆ. ಸಮೀಪದಲ್ಲೇ ಸ್ವಾತ್ ಕಣಿವೆಯು ಪಾಕಿಸ್ತಾನ ಮಿಲಿಟರಿ ಮತ್ತು ತಾಲಿಬಾನ್ ಉಗ್ರರ ನಡುವೆ ವ್ಯಾಪಕ ಹೋರಾಟದ ಕಣವಾಗಿದೆ.ಮಿಲಿಟರಿಯ ಭದ್ರನೆಲೆಗಳಾಗಿರುವ ಧೋಕ್ ದಾರಾ ಪ್ರದೇಶಕ್ಕೆ 400 ಬುಡಕಟ್ಟು ಜನರು ದಾಳಿ ಮಾಡಿದರೆಂದು ಜಿಲ್ಲಾಧಿಕಾರಿಯ ಹೇಳಿಕೆ ಉಲ್ಲೇಖಿಸಿ ಎಪಿ ಸುದ್ದಿಸಂಸ್ಥೆ ತಿಳಿಸಿದೆ.

ನಾಗರಿಕರ ಸೇನೆಯು ಶನಿವಾರದಿಂದೀಚೆಗೆ ಮ‌ೂರು ಗ್ರಾಮಗಳ ಮೇಲೆ ಆಕ್ರಮಣ ಮಾಡಿದೆಯೆಂದು ಸುದ್ದಿಸಂಸ್ಥೆ ತಿಳಿಸಿದೆ. ತಾಲಿಬಾನ್ ಹೋರಾಟಗಾರರಿಗೆ ಆಶ್ರಯ ನೀಡಿದ್ದಾರೆಂದು ಶಂಕಿಸಲಾದ ಸ್ಥಳೀಯ ಬುಡಕಟ್ಟು ಜನರ 20 ಮನೆಗಳನ್ನು ನಾಶಪಡಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.

ಸುಮಾರು 200 ಉಗ್ರಗಾಮಿಗಳು ಕಠಿಣ ಹೋರಾಟ ಮಾಡುತ್ತಿದ್ದು, ಗ್ರಾಮಸ್ಥರು ಅವರನ್ನು ಸುತ್ತುವರಿದಿದ್ದಾರೆ. ಅಲ್ ಖಾಯಿದಾ ಮತ್ತು ತಾಲಿಬಾನ್ ಅಡಗುತಾಣಗಳಿರುವ ಆಪ್ಘಾನಿಸ್ತಾನ ಗಡಿಯಲ್ಲಿ ತಾಲಿಬಾನ್ ವಿರುದ್ಧ ಹೋರಾಟಕ್ಕೆ ಲಷ್ಕರ್ ಎಂದು ಹೆಸರಾದ ಸೇನೆಗಳನ್ನು ಕಟ್ಟಲು ಸರ್ಕಾರ ಸ್ಥಳೀಯರಿಗೆ ಉತ್ತೇಜನ ನೀಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
"ತಾಲಿಬಾನಿಗಳ ವಿರುದ್ಧ ನ್ಯಾಟೊ ಗೆಲುವು ಸಾಧ್ಯವಿಲ್ಲ"
ಇರಾಕ್‌ನಲ್ಲಿ ಮಿನಿಬಾಂಬ್ ಸ್ಫೋಟಕ್ಕೆ 7 ಜನರ ಬಲಿ
ಇನ್ನೊಬ್ಬ ಭಾರತೀಯ ವಿದ್ಯಾರ್ಥಿ ಮೇಲೆ ದಾಳಿ
ಅಮೆರಿಕ ಪತ್ರಕರ್ತೆಯರಿಗೆ ಉ.ಕೊರಿಯ ಸೆರೆವಾಸದ ಶಿಕ್ಷೆ
ಭಾರತದ ಕಾನೂನು ಪದವಿಗೆ ಕೆನಡಾ ಮಾನ್ಯತೆ
ಏರ್‌ಫ್ರಾನ್ಸ್ ಅವಶೇಷದಿಂದ 17 ದೇಹಗಳು ಪತ್ತೆ