ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಕೆಲವು ಭಾರತೀಯರ ಮೇಲೆ ಜನಾಂಗೀಯ ಹಲ್ಲೆ ನಡೆದಿದೆ: ಆಸ್ಟ್ರೇಲಿಯಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೆಲವು ಭಾರತೀಯರ ಮೇಲೆ ಜನಾಂಗೀಯ ಹಲ್ಲೆ ನಡೆದಿದೆ: ಆಸ್ಟ್ರೇಲಿಯಾ
ದೇಶದಲ್ಲಿ ಕೆಲವು ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆದಿರುವುದು ಜನಾಂಗೀಯ ಹಲ್ಲೆ ಎಂದು ಕೊನೆಗೂ ಆಸ್ಟ್ರೇಲಿಯಾದ ಪೊಲೀಸ್ ವರಿಷ್ಠಾಧಿಕಾರಿ ಮಂಗಳವಾರ ತಪ್ಪೊಪ್ಪಿಕೊಂಡಿದ್ದು, ಇದೊಂದು ಗಂಭೀರ ಸ್ವರೂಪದ ಪ್ರಕರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಸೈಮನ್ ಅವರು ಮಾಧ್ಯಮದೊಂದಿಗೆ ಮಾತನಾಡುತ್ತ, ದೇಶದಲ್ಲಿ ನಡೆದಿರುವ ಕೆಲವು ಲೂಟಿ ಪ್ರಕರಣ ಜನಾಂಗೀಯ ಪ್ರೇರಿತವಾದದ್ದು ಹಾಗೂ ಉಳಿದವರು ಅವಕಾಶವಾದಿಗಳು ಎಂದು ತಿಳಿಸಿದ್ದಾರೆ.

ಏನೇ ಇರಲಿ, ಭಾರತೀಯರ ಮೇಲೆ ನಡೆದಿರುವ ದಾಳಿ ಉತ್ತಮ ಬೆಳವಣಿಗೆಯಲ್ಲ, ಹಿಂಸಾಚಾರ ಎಂಬುದು ಒಳ್ಳೆಯದಲ್ಲ ಅದೇ ರೀತಿ ಲೂಟಿ ಕೂಡ ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಜನಾಂಗೀಯ ಹಿಂಸಾಚಾರಕ್ಕೆ ಇಲ್ಲಿ ಅವಕಾಶ ಇಲ್ಲ ಎಂದು ಈ ಸಂದರ್ಭದಲ್ಲಿ ಸೈಮನ್ ಸ್ಪಷ್ಟಪಡಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಜನಾಂಗೀಯ ಹಲ್ಲೆ ನಡೆಸುವ ಮೂಲಕ ತೀವ್ರ ಟೀಕೆ ವ್ಯಕ್ತವಾಗಿತ್ತು. ಅಲ್ಲದೇ ಭಾರತ ಕೂಡ ಅಸಮಾಧಾನ ವ್ಯಕ್ತಪಡಿಸಿತ್ತು. ಅಸ್ಟ್ರೇಲಿಯಾದಲ್ಲಿ ಕಳೆದ ಒಂದು ತಿಂಗಳಲ್ಲಿ ಒಟ್ಟು 11ವಿದ್ಯಾರ್ಥಿಗಳ ಮೇಲೆ ಜನಾಂಗೀಯ ಹಲ್ಲೆ ನಡೆಸಲಾಗಿತ್ತು. ಆದರೂ ಆಸ್ಟ್ರೇಲಿಯಾ ಭಾರತೀಯರ ಮೇಲೆ ಜನಾಂಗೀಯ ಹಲ್ಲೆ ನಡೆದಿಲ್ಲ ಎಂದೇ ಸ್ಪಷ್ಟನೆ ನೀಡಿತ್ತು.

ಸುಮಾರು 90ಸಾವಿರ ಭಾರತೀಯ ವಿದ್ಯಾರ್ಥಿಗಳು ಆಸ್ಟ್ರೇಲಿಯಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಸಿಡ್ನಿಯಲ್ಲಿ ಭಾನುವಾರ ಪ್ರತಿಭಟನೆ ಜಾಥಾ ನಡೆದಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಭಾರತ ಕೊನೆಗೂ ನೆರವಿಗೆ ಬರಲಿಲ್ಲ': ಲಂಕಾ ತಮಿಳರು
ಉಗ್ರರನ್ನು ಸದೆಬಡಿಯಿರಿ; ಪಾಕ್‌ಗೆ ಅಮೆರಿಕ
ನಕಲಿ ವಯಾಗ್ರ ಮಾರಿ ಜೈಲು ಸೇರಿದ ಭೂಪ!
ಗಸ್ತು ತಿರುಗುವುದು ಕೈಬಿಟ್ಟು;ಕೆಲಸಕ್ಕೆ ತೆರಳಿ: ಆಸ್ಟ್ರೇಲಿಯಾ
ಸೂ ಕೀಯನ್ನು ಕೂಡಲೇ ಮುಕ್ತಿಗೊಳಿಸಿ: ಅಮೆರಿಕ ತಾಕೀತು
ಐಎಸ್‌ಐ ಮತ್ತು ಉಗ್ರರು ಗಳಸ್ಯ-ಕಂಠಸ್ಯ: ಮುಷ್