ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ತಾಲಿಬಾನ್ ವರಿಷ್ಠ ಫಜುಲ್ಲಾ ಕಾರಸ್ಥಾನ ಧ್ವಂಸ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಾಲಿಬಾನ್ ವರಿಷ್ಠ ಫಜುಲ್ಲಾ ಕಾರಸ್ಥಾನ ಧ್ವಂಸ
ಉಗ್ರರನ್ನು ಮಟ್ಟಹಾಕಲೇಬೇಕೆಂಬ ಅಮೆರಿಕ ತಾಕೀತು ಮಾಡಿರುವ ಬೆನ್ನಲ್ಲೇ, ಪಾಕಿಸ್ತಾನದ ಭದ್ರತಾ ಪಡೆ ಮಂಗಳವಾರ ಸ್ವಾತ್ ಕಣಿವೆಯ ತಾಲಿಬಾನ್ ಮುಖಂಡ ಮೌಲಾನಾ ಫಜುಲ್ಲಾ ಎಂಬಾತನ ಕೇಂದ್ರ ಸ್ಥಾನದ ಮೇಲೆ ಹೆಲಿಕಾಪ್ಟರ್ ಮೂಲಕ ದಾಳಿ ಮಾಡಿ ಧ್ವಂಸಗೊಳಿಸಿದೆ.

ತಾಲಿಬಾನ್ ವರಿಷ್ಠ ಮೌಲಾನಾ ಫಜುಲ್ಲಾನ ಕಾರಸ್ಥಾನದ ಮೇಲೆ ಹೆಲಿಕಾಪ್ಟರ್ ಮತ್ತು ಫಿರಂಗಿಗಳ ದಾಳಿ ನಡೆಸುವ ಮೂಲಕ ನೆಲಸಮ ಮಾಡಿದ್ದು, ಈಶಾನ್ಯ ಪ್ರಾಂತ್ಯದಲ್ಲಿನ ತಾಲಿಬಾನ್ ಉಗ್ರರು ಅಪಾಯದಲ್ಲಿ ಸಿಲುಕಿಕೊಂಡಿರುವುದಾಗಿ ಪಾಕ್ ಭದ್ರತಾ ಪಡೆ ಮೂಲಗಳು ತಿಳಿಸಿವೆ.

ಕಣಿವೆ ಪ್ರದೇಶದಲ್ಲಿ ತಾಲಿಬಾನ್ ಉಗ್ರರ ವಿರುದ್ಧ ಧ್ವನಿ ಎತ್ತುವಂತೆ ಮಿಲಿಟರಿ ಪಡೆ ಕರೆ ನೀಡಿದೆ. ಅದರ ಬೆನ್ನಲ್ಲೇ ಫಜುಲ್ಲಾನ ಕೇಂದ್ರ ಕಾರಸ್ಥಾನದ ಮೇಲೆ ಫಿರಂಗಿ ದಾಳಿ ನಡೆಸಿ ಧ್ವಂಸಗೊಳಿಸಿರುವುದಾಗಿ ಮಿಲಿಟರಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಸ್ವಾತ್ ಕಣಿವೆ ಪ್ರದೇಶದ ತಾಲಿಬಾನ್ ಮುಖಂಡನಾಗಿರುವ ಫಜುಲ್ಲಾ ಉಗ್ರಗಾಮಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದು, ಆತನನ್ನು ಜೀವಂತ ಇಲ್ಲವೇ ಮೃತವಾಗಿ ಆತನನ್ನು ತಂದುಕೊಟ್ಟಲ್ಲಿ 50ಮಿಲಿಯನ್ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೆಲವು ಭಾರತೀಯರ ಮೇಲೆ ಜನಾಂಗೀಯ ಹಲ್ಲೆ ನಡೆದಿದೆ: ಆಸ್ಟ್ರೇಲಿಯಾ
'ಭಾರತ ಕೊನೆಗೂ ನೆರವಿಗೆ ಬರಲಿಲ್ಲ': ಲಂಕಾ ತಮಿಳರು
ಉಗ್ರರನ್ನು ಸದೆಬಡಿಯಿರಿ; ಪಾಕ್‌ಗೆ ಅಮೆರಿಕ
ನಕಲಿ ವಯಾಗ್ರ ಮಾರಿ ಜೈಲು ಸೇರಿದ ಭೂಪ!
ಗಸ್ತು ತಿರುಗುವುದು ಕೈಬಿಟ್ಟು;ಕೆಲಸಕ್ಕೆ ತೆರಳಿ: ಆಸ್ಟ್ರೇಲಿಯಾ
ಸೂ ಕೀಯನ್ನು ಕೂಡಲೇ ಮುಕ್ತಿಗೊಳಿಸಿ: ಅಮೆರಿಕ ತಾಕೀತು