ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಕೆನಡಾದಲ್ಲೂ ಭಾರತೀಯರ ಮೇಲೆ ಜನಾಂಗೀಯ ಹಲ್ಲೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೆನಡಾದಲ್ಲೂ ಭಾರತೀಯರ ಮೇಲೆ ಜನಾಂಗೀಯ ಹಲ್ಲೆ
ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಜನಾಂಗೀಯ ಹಿಂಸಾಚಾರ ಮುಂದುವರಿದಿರುವ ಬೆನ್ನಲ್ಲೇ, ಅದರ ಪಿಡುಗು ಎಂಬಂತೆ ಮಂಗಳವಾರ ಕೆನಡಾದಲ್ಲೂ ಭಾರತೀಯ ವಿದ್ಯಾರ್ಥಿಗಳ ಮೇಲೆ ಜನಾಂಗೀಯ ಹಲ್ಲೆ ನಡೆಸಿದ ಘಟನೆ ನಡೆದಿದೆ.

ವಾನ್‌‌ಕೌನ್‌ವೆರ್ ಹೊರವಲಯವಾದ ಲಾನ್‌‌‌ಗ್ಲೈ ಪ್ರದೇಶದಲ್ಲಿ ನಾಲ್ವರು ಬಿಳಿಯ ಕೆನಡಿಯನ್‌ರು ಭಾರತೀಯ ಗುಂಪಿನ ಮೇಲೆ ಜನಾಂಗೀಯ ಹಲ್ಲೆ ನಡೆಸಿದ್ದಾರೆ.

ಭಾರತೀಯ ಮೂಲದ ಆರು ಮಂದಿ ಟೆನ್ನಿಸ್ ಆಡುತ್ತಿರುವ ಸಂದರ್ಭದಲ್ಲಿ ಏಕಾಏಕಿ ಆಗಮಿಸಿದ ನಾಲ್ವರು ಕೆನಡಿಯನ್‌ರು ಜನಾಂಗೀಯ ವಾಗಿ ನಿಂದಿಸಿ ಹಲ್ಲೆ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಓರ್ವ ಮಹಿಳೆ ಹಾಗೂ ಮೂರು ಪುರುಷರು ಸೇರಿದಂತೆ ನಾಲ್ಕು ಮಂದಿ ಭಾರತೀಯರಿದ್ದಲ್ಲಿ ಆಗಮಿಸಿ ಜನಾಂಗೀಯವಾಗಿ ನಿಂದಿಸಿ ಬೈಗುಳಗಳ ಸುರಿಮಳೆ ಸುರಿಸಿದ್ದರು. ಅಲ್ಲದೇ ಜನಾಂಗೀಯ ನಿಂದನೆ ಘೋಷಣೆಗಳನ್ನು ಕೂಗಿ ಬೆದರಿಕೆಯನ್ನು ಹಾಕಿದ್ದರು.

ಶಂಕಿತರು ಟೆನ್ನಿಸ್ ಕೋರ್ಟ್‌ನೊಳಗೆ ಬಂದು ಭಾರತೀಯರ ಮೇಲೆ ಹಲ್ಲೆ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ. ಬಳಿಕ ಶಂಕಿತರನ್ನು ಬಂಧಿಸಲಾಗಿದ್ದು, ಆಯುಧದಿಂದ ಹಲ್ಲೆ, ಲೂಟಿ ಸೇರಿದಂತೆ ಹಲವಾರು ಪ್ರಕರಣಗಳನ್ನು ಅವರ ವಿರುದ್ಧ ದಾಖಲಿಸಲಾಗಿದೆ ಎಂದು ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹೌದು;ಮಸೀದಿಗಳಲ್ಲಿ ಬೇಹುಗಾರಿಕೆ ನಡೆಸ್ತೇವೆ: ಎಫ್‌ಬಿಐ
ಪಾಕ್ : ಆತ್ಮಾಹುತಿ ದಾಳಿಗೆ 14 ಬಲಿ
ಭಾರತ-ಕ್ಯೂಬಾ ತಂತ್ರಜ್ಞಾನ ಒಪ್ಪಂದಕ್ಕೆ ಸಹಿ
ಮಸೀದಿಯಲ್ಲಿ ಗೋಲಿಬಾರಿಗೆ 11ಬಲಿ
ತಾಲಿಬಾನ್ ವರಿಷ್ಠ ಫಜುಲ್ಲಾ ಕಾರಸ್ಥಾನ ಧ್ವಂಸ
ಕೆಲವು ಭಾರತೀಯರ ಮೇಲೆ ಜನಾಂಗೀಯ ಹಲ್ಲೆ ನಡೆದಿದೆ: ಆಸ್ಟ್ರೇಲಿಯಾ