ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಏರ್‌ಫ್ರಾನ್ಸ್ ದುರಂತ: ಬ್ಲ್ಯಾಕ್ ಬಾಕ್ಸ್‌ಗಾಗಿ ಶೋಧ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏರ್‌ಫ್ರಾನ್ಸ್ ದುರಂತ: ಬ್ಲ್ಯಾಕ್ ಬಾಕ್ಸ್‌ಗಾಗಿ ಶೋಧ
ಈವರೆಗೆ 41 ಶವಗಳ ಪತ್ತೆ...
ಬ್ರೆಜಿಲ್ ಮತ್ತು ಫ್ರಾನ್ಸ್ ಶೋಧನಾ ತಂಡ ಏರ್ ಫ್ರಾನ್ಸ್ ಜೆಟ್ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರ ಸುಮಾರು 41 ಮೃತದೇಹಗಳನ್ನು ಈವರೆಗೆ ಪತ್ತೆ ಹಚ್ಚಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪತ್ತೆಯಾಗಿರುವ ಮೃತದೇಹಗಳನ್ನು ಗುರುತಿಸಲು ಸಂಬಂಧಿಕರ ಕೂದಲು ಮತ್ತು ರಕ್ತದ ಸ್ಯಾಂಪಲ್‌ಗಳನ್ನು ಪಡೆಯಲಾಗುತ್ತಿದೆ.

ವಿಮಾನದ ಬ್ಲ್ಯಾಕ್ ಬಾಕ್ಸ್‌ಗಳನ್ನು ಪತ್ತೆ ಹಚ್ಚಲು ಫ್ರೆಂಚ್ ಜಲಾಂತರ್ಗಾಮಿಯನ್ನು ನಿಯೋಜಿಸಲಾಗಿದೆ. ಇದರಿಂದ ಆರು ಸಾವಿರ ಅಡಿ ಎತ್ತರದಲ್ಲಿದ್ದ ಏರ್ ಫ್ರಾನ್ಸ್ ಹೇಗೆ ದುರಂತಕ್ಕೀಡಾಯಿತು ಎಂಬುದನ್ನು ಪತ್ತೆ ಹಚ್ಚಬಹುದು.

ಅಟ್ಲಾಂಟಿಕ್ ಸಾಗರಕ್ಕೆ ಬಿದ್ದಿರುವ ಏರ್ ಫ್ರಾನ್ಸ್ ವಿಮಾನದ ಹಿಂಭಾಗದಲ್ಲಿದ್ದ ಲಿಂಬಾಕೃತ ಸ್ಟೆಬಿಲೈಜರ್ ಅನ್ನು ರಕ್ಷಣಾ ತಂಡ ಪತ್ತೆ ಹಚ್ಚಿದೆ. ಇದು ಬ್ಲ್ಯಾಕ್ ಬಾಕ್ಸ್ ಹುಡುಕಲು ಮತ್ತು ಜೆಟ್ ವಿಮಾನ ಹೇಗೆ ಅಪಘಾತಕ್ಕೀಡಾಯಿತು ಎಂಬುದನ್ನು ತಿಳಿಯಲು ಸಹಾಯಕವಾಗುತ್ತದೆ ಎಂದು ಬ್ರಿಜೆಲ್ ನೌಕಾ ಮತ್ತು ವಾಯುಪಡೆ ತಿಳಿಸಿದೆ.

ಜೂನ್1 ರಂದು ರಿಯೊಡಿ ಜನೇರೊದಿಂದ ಪ್ಯಾರಿಸ್‌ಗೆ ಹೊರಟಿದ್ದ ಈ ವಿಮಾನ ದುರಂತದಲ್ಲಿ ಎಲ್ಲಾ 228ಮಂದಿ ಸಾವನ್ನಪ್ಪಿದ್ದರು. ಇದೀಗ ತೀವ್ರ ಶೋಧ ನಡೆಸುತ್ತಿರುವ ರಕ್ಷಣಾ ತಂಡ ವಿಮಾನದ ದೊಡ್ಡ ಮತ್ತು ಸಣ್ಣಪುಟ್ಟ ತುಂಡುಗಳನ್ನು ಹಾಗೂ ಪ್ರಯಾಣಿಕರ ವಿವಿಧ ವಸ್ತುಗಳನ್ನು ಪತ್ತೆ ಮಾಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೆನಡಾದಲ್ಲೂ ಭಾರತೀಯರ ಮೇಲೆ ಜನಾಂಗೀಯ ಹಲ್ಲೆ
ಹೌದು;ಮಸೀದಿಗಳಲ್ಲಿ ಬೇಹುಗಾರಿಕೆ ನಡೆಸ್ತೇವೆ: ಎಫ್‌ಬಿಐ
ಪಾಕ್ : ಆತ್ಮಾಹುತಿ ದಾಳಿಗೆ 14 ಬಲಿ
ಭಾರತ-ಕ್ಯೂಬಾ ತಂತ್ರಜ್ಞಾನ ಒಪ್ಪಂದಕ್ಕೆ ಸಹಿ
ಮಸೀದಿಯಲ್ಲಿ ಗೋಲಿಬಾರಿಗೆ 11ಬಲಿ
ತಾಲಿಬಾನ್ ವರಿಷ್ಠ ಫಜುಲ್ಲಾ ಕಾರಸ್ಥಾನ ಧ್ವಂಸ