ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ವಿಶ್ವಸಂಸ್ಥೆಯ ಇಬ್ಬರು ಸಿಬ್ಬಂದಿ ಪೇಶಾವರ ಸ್ಫೋಟಕ್ಕೆ ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವಸಂಸ್ಥೆಯ ಇಬ್ಬರು ಸಿಬ್ಬಂದಿ ಪೇಶಾವರ ಸ್ಫೋಟಕ್ಕೆ ಬಲಿ
ಪೇಶಾವರ ಹೊಟೆಲ್ ಸ್ಫೋಟದಲ್ಲಿ ಯುನಿಸೆಫ್ ಪಾಕಿಸ್ತಾನದ ಮುಖಂಡ ಸೇರಿದಂತೆ ತನ್ನ ಇಬ್ಬರು ಸಿಬ್ಬಂದಿ ಸಾವಿಗೆ ವಿಶ್ವಸಂಸ್ಥೆ ಶೋಕ ವ್ಯಕ್ತಪಡಿಸಿದ್ದು, ಪಾಕಿಸ್ತಾನ ಮಿಲಿಟರಿಯು ತಾಲಿಬಾನ್ ವಿರುದ್ಧ ಜಾಲವನ್ನು ಬಿಗಿಗೊಳಿಸಿದೆ. ಮಿಲಿಟರಿ ನಡೆಸಿದ ಹೊಸ ದಾಳಿಗಳಲ್ಲಿ 70 ಮಂದಿ ಉಗ್ರರು ಹತರಾಗಿದ್ದಾರೆ. ತನಿಖೆದಾರರು ಸಾಕ್ಷ್ಯಾಧಾರಕ್ಕಾಗಿ ಬುಧವಾರ ಹೊಟೆಲ್‌ನಲ್ಲಿ ಹುಡುಕಾಟ ನಡೆಸಿದರು.

ಬಾಂಬ್ ದಾಳಿ ನಡೆದಾಗ ಹತ್ತಾರು ವಿದೇಶಿ ನೆರವು ಕಾರ್ಯಕರ್ತರು ಹೊಟೆಲ್‌ನಲ್ಲಿದ್ದು ಮೃತರ ಸಂಖ್ಯೆ 18ಕ್ಕೇರಿದೆ. ಪೇಶಾವರದಲ್ಲಿ ಒಂದು ತಿಂಗಳಿನಲ್ಲೇ ನಡೆದ 7 ನೇ ಬಾಂಬ್ ದಾಳಿ ಇದಾಗಿದೆ. ಟೆಲಿವಿಷನ್ ಚಾನೆಲ್‌ಗಳಲ್ಲಿ ಸಿಸಿಟಿವಿ ಚಿತ್ರಗಳು ಭದ್ರತಾ ಚೌಕಿ ಮ‌ೂಲಕ ಹಾದುಹೋಗುವ ಕಾರು ಮತ್ತು ಅದರ ಬೆನ್ನ ಹಿಂದೆ ಸ್ಫೋಟಕಗಳನ್ನು ತುಂಬಿದ ಟ್ರಕ್ ಒಂದನ್ನು ತೋರಿಸಿವೆ.

ಮ‌ೂವರು ದಾಳಿಕೋರರು ಹೊಟೆಲ್‌ ಆವರಣದೊಳಕ್ಕೆ 500 ಕೇಜಿ ಸ್ಫೋಟಕಗಳನ್ನು ಸಿಡಿಸಿದ್ದಾರೆ. ಇಸ್ಲಾಮಾಬಾದ್ ಮಾರಿಯಟ್ ಹೊಟೆಲ್‌ನಲ್ಲಿ ಕಳೆದ ವರ್ಷ ಸುಮಾರು 50 ಜನರನ್ನು ಬಲಿ ತೆಗೆದುಕೊಂಡ ಬಾಂಬ್ ದಾಳಿಯನ್ನು ಹೊಟೆಲ್‌ನಲ್ಲಿನ ದೃಶ್ಯವು ಪ್ರತಿಬಿಂಬಿಸಿದೆ. ಹೊಟೆಲ್‌ಗಳ ಒಡೆಯನಾದ ಸದ್ರುದ್ದೀನ್ ಹಶ್ವಾನಿ ಹೊಟೆಲ್ ಮರುನಿರ್ಮಾಣಕ್ಕೆ ಶಪಥ ತೊಟ್ಟಿದ್ದು, ಸರ್ಕಾರ ಸಾಕಷ್ಟು ಭದ್ರತೆ ನೀಡಲಿಲ್ಲವೆಂದು ಅದರ ವಿರುದ್ಧ ಆರೋಪ ಹೊರಿಸಿದ್ದಾರೆ
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇರಾಕ್: ಕಾರು ಬಾಂಬ್ ಸ್ಫೋಟಕ್ಕೆ 19 ಬಲಿ
73 ರಾಷ್ಟ್ರಗಳಿಗೆ ವ್ಯಾಪಿಸಿದ ಹಂದಿಜ್ವರ
ಭಾರತದೊಂದಿಗೆ ಮತ್ತೆ ಯುದ್ಧ ಬೇಕಾಗಿಲ್ಲ: ಪಾಕ್
ವಿಶ್ವಸಂಸ್ಥೆ ಆಯೋಗದಿಂದ ಬೇನಜೀರ್ ಹತ್ಯೆ ತನಿಖೆ
'ಬಸುರಿ ಪುರುಷ'ನಿಂದ ಮತ್ತೊಂದು ಮಗುವಿಗೆ ಜನ್ಮ
ಶ್ರೀಲಂಕಾದಲ್ಲಿ ಕೆನಡಾ ಸಂಸದನ ಬಂಧನ