ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ >  ಭಾರತ ಸರ್ಕಾರಕ್ಕೆ ಅಮೆರಿಕ ಅಧ್ಯಕ್ಷರ ಖಾಸಗಿ ಪತ್ರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ ಸರ್ಕಾರಕ್ಕೆ ಅಮೆರಿಕ ಅಧ್ಯಕ್ಷರ ಖಾಸಗಿ ಪತ್ರ
ನವದೆಹಲಿಗೆ ಪ್ರಸಕ್ತ ಭೇಟಿ ನೀಡಿರುವ ಅಮೆರಿಕ ವಿದೇಶಾಂಗ ಅಧೀನ ಕಾರ್ಯದರ್ಶಿ ವಿಲಿಯಂ ಬರ್ನ್ಸ್ ಭಾರತ ಸರ್ಕಾರಕ್ಕೆ ಅಧ್ಯಕ್ಷರ ಖಾಸಗಿ ಪತ್ರವನ್ನು ಒಯ್ದಿದ್ದಾರೆಂದು ಉನ್ನತ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಭಾರತ ಸಂಪೂರ್ಣ ನಿರ್ಣಾಯಕ ಎಂದು ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನಕ್ಕೆ ವಿಶೇಷ ಪ್ರತಿನಿಧಿಯಾಗಿರುವ ರಿಚರ್ಡ್ ಹಾಲ್‌ಬ್ರೂಕ್ ತಿಳಿಸಿದ್ದು, ನಾವು ಭಾರತದ ಜತೆ ನಿಕಟ ಸಮಾಲೋಚನೆ ಇರಿಸಿಕೊಳ್ಳಬೇಕೆಂದು ಹೇಳಿದ್ದಾರೆ. ಕಳೆದ ಮಧ್ಯರಾತ್ರಿ ತಾವು ಅಧೀನಕಾರ್ಯದರ್ಶಿ ಬಿಲ್ ಬರ್ನ್ಸ್ ನವದೆಹಲಿಗೆ ಕಾಲಿರಿಸಿದ ತಕ್ಷಣವೇ ಮಾತನಾಡಿದ್ದಾಗಿ ಹಾಲ್‌ಬ್ರೂಕ್ ಚೊಚ್ಚಲ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

"ಬರ್ನ್ಸ್ ಅವರು ಭಾರತ ಸರ್ಕಾರಕ್ಕೆ ಅಧ್ಯಕ್ಷರ ಖಾಸಗಿ ಪತ್ರವನ್ನು ಒಯ್ದಿದ್ದಾರೆ. ತಾವು ನವದೆಹಲಿಗೆ ಹೋಗಲು ಸಮಯಾವಕಾಶ ಇಲ್ಲದಿದ್ದರಿಂದ ತಮ್ಮ ಸಂದೇಶವನ್ನು ಅವರು ಒಯ್ದಿದ್ದಾರೆಂದು" ಪಾಕಿಸ್ತಾನದ ಪ್ರವಾಸದಿಂದ ಈ ವಾರದ ಆದಿಯಲ್ಲಿ ಆಗಮಿಸಿರುವ ಹಾಲ್‌ಬ್ರೂಕ್ ತಿಳಿಸಿದ್ದಾರೆ. ಆದರೆ ಸಂದೇಶದ ಒಕ್ಕಣೆಯನ್ನು ಬಹಿರಂಗ ಮಾಡಲು ಹಾಲ್‌ಬ್ರೂಕ್ ನಿರಾಕರಿಸಿ ಅದೊಂದು ಖಾಸಗಿ ಪತ್ರವೆಂದು ತಿಳಿಸಿದರು.

ನಾವು ಭಾರತವನ್ನು ಈ ವಲಯದ ನಿರ್ಣಾಯಕ ರಾಷ್ಟ್ರವೆಂದು ಪರಿಗಣಿಸಿದ್ದೇವೆ. ಅವರು ಸಮಸ್ಯೆಯ ಭಾಗವಲ್ಲದಿದ್ದರೂ ಮುಖ್ಯವಾಗಿ ಪರಿಣಾಮಕಾರಿಯಾಗಿದ್ದು, ಅವರ ಜತೆ ನಿಕಟವಾಗಿ ಕೆಲಸ ಮಾಡಲು ತಾವು ಬಯಸುವುದಾಗಿ ಅವರು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಶ್ವಸಂಸ್ಥೆಯ ಇಬ್ಬರು ಸಿಬ್ಬಂದಿ ಪೇಶಾವರ ಸ್ಫೋಟಕ್ಕೆ ಬಲಿ
ಇರಾಕ್: ಕಾರು ಬಾಂಬ್ ಸ್ಫೋಟಕ್ಕೆ 19 ಬಲಿ
73 ರಾಷ್ಟ್ರಗಳಿಗೆ ವ್ಯಾಪಿಸಿದ ಹಂದಿಜ್ವರ
ಭಾರತದೊಂದಿಗೆ ಮತ್ತೆ ಯುದ್ಧ ಬೇಕಾಗಿಲ್ಲ: ಪಾಕ್
ವಿಶ್ವಸಂಸ್ಥೆ ಆಯೋಗದಿಂದ ಬೇನಜೀರ್ ಹತ್ಯೆ ತನಿಖೆ
'ಬಸುರಿ ಪುರುಷ'ನಿಂದ ಮತ್ತೊಂದು ಮಗುವಿಗೆ ಜನ್ಮ