ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಚುನಾವಣೆ ಫಲಿತಾಂಶಕ್ಕೆ ಕಾಯುತ್ತಿದ್ದ ಪ್ರಭಾಕರನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣೆ ಫಲಿತಾಂಶಕ್ಕೆ ಕಾಯುತ್ತಿದ್ದ ಪ್ರಭಾಕರನ್
ವೇಲುಪಿಳ್ಳೈ ಪ್ರಭಾಕರನ್ ತನ್ನ ಮುಂದಿನ ಕಾರ್ಯತಂತ್ರ ರೂಪಿಸಲು ಭಾರತದ ಚುನಾವಣೆ ಫಲಿತಾಂಶಕ್ಕಾಗಿ ಕಾಯುತ್ತಿದ್ದು, ಎನ್‌ಡಿಎ ಅಥವಾ ತೃತೀಯ ರಂಗ ಅಧಿಕಾರಕ್ಕೆ ಬರುವುದೆಂದು ಆಶಿಸಿದ್ದ. ಆದರೆ ಶ್ರೀಲಂಕಾ ಸೇನೆಯ ಯೋಜನೆ ಬೇರೆ ತೆರನಾಗಿತ್ತು. ತನ್ನ ಮತ್ತು ಎಲ್‌ಟಿಟಿಇ ಸಂಘಟನೆಯ ಭವಿಷ್ಯ ನಿರ್ಧರಿಸಲು ಬಂಡುಕೋರರ ಮುಖಂಡ ಮೇ 16ರ ಲೋಕಸಭೆ ಚುನಾವಣೆಗೆ ಕಾಯುತ್ತಿದ್ದ.

ಆದರೆ ಅದು ತುಂಬಾ ತಡವಾಗಿ ಶ್ರೀಲಂಕಾ ಸೇನೆ ತಪ್ಪಿಸಿಕೊಳ್ಳುವ ಎಲ್ಲಾ ಮಾರ್ಗಗಳನ್ನು ಬಂದ್ ಮಾಡಿತು.ಮೇ 16ರವರೆಗೆ ಯಾರಾದರೂ ಮಧ್ಯಪ್ರವೇಶ ಮಾಡಿ ತಾನು ಸಿಕ್ಕಿಬಿದ್ದಿರುವ ಗುಂಡು ಹಾರಾಟ ನಿಷೇಧ ವಲಯಕ್ಕೆ ಪ್ರವೇಶಿಸಿ ಸೇನೆಯನ್ನು ತಡೆಯುತ್ತಾರೆಂದು ಪ್ರಭಾಕರನ್ ಭಾವಿಸಿದ್ದಾಗಿ ಲಂಕಾಸೇನಾ ಮ‌ೂಲಗಳು ಹೇಳಿವೆ. ಮೇ 16ರ ಮಧ್ಯಾಹ್ನ, ಸಿಕ್ಕಿಬಿದ್ದ ಎಲ್ಲ ನಾಗರಿಕರನ್ನು ಸುರಕ್ಷಿತವಾಗಿ ನಿರ್ಗಮಿಸಲು ಅವಕಾಶ ನೀಡುವುದಾಗಿ ಪ್ರಭಾಕರನ್ ಪ್ರಕಟಿಸಿದ್ದ

ಚುನಾವಣೆ ಫಲಿತಾಂಶ ಪ್ರಭಾಕರನ್‌ಗೆ ಉದ್ವೇಗ ಮ‌ೂಡಿಸಿತ್ತು. ಅವನಿಗೆ ಯಾವುದೇ ಯೋಜನೆ ರೂಪಿಸಲು ಕಾಲಾವಕಾಶ ಸಿಗಲಿಲ್ಲ. ಆ ಸಂದರ್ಭದಲ್ಲಿ ಸೇನೆಯ ಬಲೆಗೆ ಸಿಕ್ಕಿಬಿದ್ದಿದ್ದರು ಎಂದು ತಮಿಳು ಮ‌ೂಲಗಳು ತಿಳಿಸಿವೆ. ತೃತೀಯ ರಂಗದ ಭಾಗವಾದ ಜಯಲಲಿತಾ ಶ್ರೀಲಂಕಾ ತಮಿಳು ಹೋರಾಟಕ್ಕೆ ಬೆಂಬಲಿಸಿದ್ದರು. ತಾವು ನಿರೀಕ್ಷಿಸಿದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಶ್ರೀಲಂಕಾದಿಂದ ತಮಿಳು ಈಳಂ ರಚನೆಗೆ ಭಾರತೀಯ ಸೇನೆಯನ್ನು ಕಳಿಸುವುದಾಗಿ ಕೂಡ ಭರವಸೆ ನೀಡಿದ್ದರೆಂದು ತಿಳಿದುಬಂದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬುಷ್ ಹುಟ್ಟುಹಬ್ಬ
ಇರಾನ್ ಅಧ್ಯಕ್ಷ ಪುನರಾಯ್ಕೆ
ಹಿಂಸೆ ಸಂಪೂರ್ಣವಾಗಿ ತ್ಯಜಿಸಲು ಮಾವೋವಾದಿಗಳಿಗೆ ಕರೆ
ಉ.ಕೊರಿಯ 3ನೇ ಅಣ್ವಸ್ತ್ರಪರೀಕ್ಷೆ ವಿರುದ್ಧ ಎಚ್ಚರಿಕೆ
'ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿಲ್ಲ'
ಭಾರತದ ಗಡಿಯಿಂದ ಪಾಕ್ ಪಡೆ ಸ್ಥಳಾಂತರ: ಪೆಟ್ರೊಸ್