ಪಾಕಿಸ್ತಾನದಲ್ಲಿ ಭಯೋತ್ಪಾದಕರ ಕರಾಳ ಛಾಯೆ ಮುಂದುವರಿದಿದ್ದು, ಡೇರಾ ಇಸ್ಮಾಯಿಲ್ ಕಾನ್ ಜಿಲ್ಲೆಯಲ್ಲಿ ಭಾನುವಾರ ಪ್ರಬಲ ಬಾಂಬ್ ಸ್ಫೋಟಿಸಿದ್ದು, 8 ಜನರು ಬಲಿಯಾಗಿದ್ದು, 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇದರಿಂದ ಪಾಕಿಸ್ತಾನದಲ್ಲಿ ಸ್ಫೋಟಗಳ ಸರಮಾಲೆ ಮುಂದುವರಿದಿದ್ದು, ಪಾಕ್ ಹೊತ್ತಿಉರಿಯುವ ಅಗ್ನಿಕುಂಡದಂತಾಗಿದೆ. ಸ್ಫೋಟಕ್ಕೆ 5ರಿಂದ 8 ಕಿಲೊ ಸ್ಫೋಟಕಗಳನ್ನು ಬಳಸಲಾಗಿದೆಯೆಂದು ಹೇಳಲಾಗಿದ್ದು, ಒಂದು ವಾರದಲ್ಲೇ ಸಂಭವಿಸಿದ 3ನೇ ಸ್ಪೋಟ ಇದಾಗಿದೆ.
ಸ್ಫೋಟದಲ್ಲಿ ತಾಲಿಬಾನ್ ಕೈವಾಡ ಶಂಕಿಸಲಾಗಿದ್ದು, ಸ್ವಾತ್ ಕಣಿವೆಯಲ್ಲಿ ತಾಲಿಬಾನಿಗಳ ವಿರುದ್ಧ ಪಾಕಿಸ್ತಾನ ಸೇನೆ ಕಾರ್ಯಾಚರಣೆ ನಡೆಸುತ್ತಿರುವುದರಿಂದ ಪ್ರತೀಕಾರ ತೀರಿಸಿಕೊಳ್ಳಲು ತಾಲಿಬಾನ್ ಉಗ್ರರು ಮೇಲಿಂದ ಮೇಲೆ ಆತ್ಮಾಹುತಿ ದಾಳಿಗಳನ್ನು ನಡೆಸುತ್ತಿದ್ದಾರೆಂದು ಹೇಳಲಾಗಿದೆ. |