ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಏರ್ ಫ್ರಾನ್ಸ್ ವಿಮಾನ ಆಕಾಶದಲ್ಲೇ ಇಬ್ಭಾಗ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏರ್ ಫ್ರಾನ್ಸ್ ವಿಮಾನ ಆಕಾಶದಲ್ಲೇ ಇಬ್ಭಾಗ
ಅಟ್ಲಾಂಟಿಕ್ ಸಾಗರಕ್ಕೆ ಬಿದ್ದು ಅಪಘಾತಕ್ಕೀಡಾದ ಏರ್ ಫ್ರಾನ್ಸ್ ವಿಮಾನ ಸಾಗರಕ್ಕೆ ಬೀಳುವ ಮುಂಚೆ ಆಕಾಶದಲ್ಲಿ ಅತ್ಯಂತ ಎತ್ತರದಲ್ಲೇ ಎರಡು ಭಾಗಗಳಾಗಿ ಇಬ್ಭಾಗವಾಗಿದೆ ಎಂದು ಮಾಧ್ಯಮದ ವರದಿಗಳು ಭಾನುವಾರ ತಿಳಿಸಿವೆ.

ರಿಯೊ ಡಿ ಜನೈರೊನಿಂದ ಪ್ಯಾರಿಸ್ಸಿಗೆ ತೆರಳುತ್ತಿದ್ದ ವಿಮಾನವು ಕೆಟ್ಟ ಹವಾಮಾನದಲ್ಲಿ ನಿಯಂತ್ರಣ ತಪ್ಪಿ ಅಪಘಾತವಾಗಿ 80 ಕಿಮೀ ಅಂತರದಲ್ಲಿ ಮೃತದೇಹಗಳು ಪತ್ತೆಯಾದ ಬಳಿಕ ವಿಮಾನ ಎರಡು ಭಾಗವಾಗಿ ಒಡೆದಿದೆಯೆಂದು ತನಿಖೆದಾರರು ತೀರ್ಮಾನಿಸಿದ್ದಾರೆ. ಬ್ರೆಜಿಲ್ ತೀರದಲ್ಲಿ ಪತ್ತೆಯಾದ ದೇಹಗಳನ್ನು ಪರೀಕ್ಷೆ ಮಾಡಿದಾಗ ಸಾಗರಕ್ಕೆ ಬೀಳುವ ಮುಂಚೆಯೇ ಪ್ರಯಾಣಿಕರು ಮೃತಪಟ್ಟಿದ್ದು ಪತ್ತೆಯಾಗಿರುವುದಾಗಿ ಸಂಡೇ ಟೈಮ್ಸ್ ವರದಿ ಮಾಡಿದೆ.

ಸುಮಾರು 35,000 ಅಡಿ ಎತ್ತರದಿಂದ ಬಿದ್ದಿದ್ದರಿಂದ ಗಾಳಿಯ ಒತ್ತಡಕ್ಕೆ ಉಡುಪುಗಳು ಕಳಚಿದ್ದವು. ಗಂಟೆಗೆ 120 ಕಿಮೀ ವೇಗದಲ್ಲಿ ನೀರಿಗೆ ಬಿದ್ದಿದ್ದರಿಂದ ಮ‌ೂಳೆಗಳು ಮುರಿದಿದ್ದವು.

ಸ್ಫೋಟದ ಯಾವುದೇ ಲಕ್ಷಣಗಳಾದ ಸುಟ್ಟ ಗಾಯ ಅಥವಾ ಹೊಗೆ ಸೇವನೆ ಮುಂತಾದವುಗಳ ಅನುಪಸ್ಥಿತಿಯಲ್ಲಿ ವೇಗದ ಸೆನ್ಸರ್‌ಗಳಲ್ಲಿ ಅಡಚಣೆ ಮುಂತಾದ ಅನೇಕ ಅಂಶಗಳ ಆಧಾರದ ಮೇಲೆ ಅಪಘಾತ ಸಂಭವಿಸಿದ್ದಾಗಿ ಹೇಳಲಾಗಿದೆ. ಅಪಘಾತಕ್ಕೆ ಕಳಪೆ ನಿರ್ವಹಣೆಯ ಸ್ಪೀಡ್ ಸೆನ್ಸರ್‌ಗಳು ಕೊಡುಗೆ ನೀಡಿವೆ ಎಂದು ಏರ್ ಫ್ರಾನ್ಸ್ ಮುಖ್ಯ ಎಕ್ಸಿಕ್ಯೂಟಿವ್ ಪೀರೆ ಹೆನ್ರಿ ಗುರ್ಗಾನ್ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
3.1 ಕೋಟಿ ರೂ.ಗೆ ಹುಸೇನ್ ವರ್ಣಚಿತ್ರ ಹರಾಜು
ಪಾಕಿಸ್ತಾನದಲ್ಲಿ ಬಾಂಬ್ ಸ್ಪೋಟಕ್ಕೆ 8 ಬಲಿ
ಚುನಾವಣೆ ಫಲಿತಾಂಶಕ್ಕೆ ಕಾಯುತ್ತಿದ್ದ ಪ್ರಭಾಕರನ್
ಬುಷ್ ಹುಟ್ಟುಹಬ್ಬ
ಇರಾನ್ ಅಧ್ಯಕ್ಷ ಪುನರಾಯ್ಕೆ
ಹಿಂಸೆ ಸಂಪೂರ್ಣವಾಗಿ ತ್ಯಜಿಸಲು ಮಾವೋವಾದಿಗಳಿಗೆ ಕರೆ