ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ವಿಮಾನ ಅಪಘಾತ: ಸಿಕ್ಕಿದ ದೇಹಗಳು 50
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಮಾನ ಅಪಘಾತ: ಸಿಕ್ಕಿದ ದೇಹಗಳು 50
ಏರ್ ಫ್ರಾನ್ಸ್ ವಿಮಾನ ಅಪಘಾತಗೊಂಡ ಅಟ್ಲಾಂಟಿಕ್ ಸಾಗರದಿಂದ ಇನ್ನೂ 7 ದೇಹಗಳನ್ನು ಪತ್ತೆಹಚ್ಚಲಾಗಿದ್ದು, ಇಲ್ಲಿಯವರೆಗೆ ಪತ್ತೆಹಚ್ಚಿದ ದೇಹಗಳ ಸಂಖ್ಯೆ 50ಕ್ಕೆ ಮುಟ್ಟಿದೆಯೆಂದು ನೌಕಾ ವಕ್ತಾರ ತಿಳಿಸಿದ್ದಾರೆ. ದೇಹಗಳನ್ನು ಗುರುತಿಸಲು ಬ್ರೆಜಿಲ್‌ನ ರಿಸೈಫ್‌ಗೆ ಒಯ್ಯಲಾಗುವುದು ಎಂದು ಬ್ರೆಜಿಲ್ ನೌಕಾ ಮತ್ತು ನಾಗರಿಕ ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಜೂನ್ 1ರಂದು ರಿಯೊ ಡಿ ಜನೈರೊನಿಂದ ಪ್ಯಾರಿಸ್‌ಗೆ ತೆರಳುತ್ತಿದ್ದ 228 ಪ್ರಯಾಣಿಕರಿದ್ದ ವಿಮಾನವು ಅಪಘಾತಕ್ಕೀಡಾಗಿ ಅಟ್ಲಾಂಟಿಕ್ ಸಾಗರಕ್ಕೆ ಬಿದ್ದಿತ್ತು.ಬಹುತೇಕ ದೇಹಗಳನ್ನು ಗುರುತಿಸಲು ಈಗಾಗಲೇ ರಿಸೈಫ್‌ಗೆ ಒಯ್ಯಲಾಗಿದೆ. ವಿಮಾನದಲ್ಲಿ ಪ್ರಯಾಣಿಸಿದ್ದ ಜನರ ಬಂಧುಗಳ ಕೂದಲು, ರಕ್ತದ ಮಾದರಿಗಳು ಮತ್ತು ಲಾಲಾರಸವನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ.

ಏರ್‌ಬಸ್ ಪ್ಲೈಟ್ ಧ್ವನಿಮುದ್ರಿಕೆಗಳು ಇನ್ನೂ ಪತ್ತೆಯಾಗಿಲ್ಲ. ಅವು ಜೂ.30ರವರೆಗೆ ಮಾತ್ರ ಸಂಕೇತಗಳನ್ನು ಕಳಿಸುವುದನ್ನು ಮುಂದುವರಿಸಲಿದೆ. ಅವನ್ನು ಪತ್ತೆಹಚ್ಚದಿದ್ದರೆ ಅಪಘಾತದ ಕಾರಣ ಸ್ಥಿರಪಡಿಸುವ ಅವಕಾಶವೇ ಬಹುತೇಕ ಇಲ್ಲವೆಂದು ತಜ್ಞರು ಹೇಳಿದ್ದಾರೆ. ಅಟ್ಲಾಂಟಿಕ್ ಸಾಗರದಲ್ಲಿ 3000 ಮೀಟರ್ ಆಳದಲ್ಲಿ ವಿಮಾನದ ಅವಶೇಷ ಬಿದ್ದಿರಬಹುದೆಂದು ನಂಬಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶ್ರೀಲಂಕಾದಲ್ಲಿ ಮೊದಲ ಹಂದಿಜ್ವರ ಪ್ರಕರಣ ದಾಖಲೆ
ಭಾರತವು ಮಾನವ ಕಳ್ಳಸಾಗಣೆ ಕೇಂದ್ರ: ಅಮೆರಿಕ ವರದಿ
ಕೃಷ್ಣರ ಮೊದಲ ವಿದೇಶ ಪ್ರವಾಸ
ಆರ್ಥಿಕ ಬಿಕ್ಕಟ್ಟು ಅವಕಾಶವಾಗಿ ಪರಿವರ್ತನೆ: ಪ್ರಧಾನಿ ಕರೆ
ಅಹ್ಮದಿ ನೆಜಾದ್ ವಿರೋಧಿ ರ‌್ಯಾಲಿಗೆ ಒಬ್ಬ ಬಲಿ
ಚೀನಾ: ಬುಲೆಟ್‌ಗೆ ಬದಲು ಇಂಜಕ್ಷನ್ ಮರಣದಂಡನೆ