ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಉ.ಕೊರಿಯ ರಾಸಾಯನಿಕ ಅಸ್ತ್ರದಿಂದ ಬೆದರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉ.ಕೊರಿಯ ರಾಸಾಯನಿಕ ಅಸ್ತ್ರದಿಂದ ಬೆದರಿಕೆ
ಉತ್ತರ ಕೊರಿಯ ಬಳಿಕ ಹಲವಾರು ಸಾವಿರ ಟನ್ ರಾಸಾಯನಿಕ ಅಸ್ತ್ರಗಳಿದ್ದು ಅವುಗಳನ್ನು ಕ್ಷಿಪಣಿಗಳಲ್ಲಿ ಇರಿಸಿ ದಕ್ಷಿಣ ಕೊರಿಯ ಮೇಲೆ ಕ್ಷಿಪ್ರ ದಾಳಿ ಮಾಡುವುದು ಸಾಧ್ಯವೆಂದು ಅಂತಾರಾಷ್ಟ್ರೀಯ ಬಿಕ್ಕಟ್ಟು ನಿವಾರಣೆ ಸಮ‌ೂಹ ಗುರುವಾರ ಬಿಡುಗಡೆ ಮಾಡಿದ ವರದಿ ತಿಳಿಸಿದೆ.

ಉತ್ತರ ಕೊರಿಯ ಕ್ಷಿಪಣಿ ಉಡಾವಣೆಗಳು, ದಕ್ಷಿಣದ ಮೇಲೆ ದಾಳಿಗೆ ಬೆದರಿಕೆಗಳು ಮತ್ತು ಮೇ 25ರಂದು ಅಣ್ವಸ್ತ್ರ ಪರೀಕ್ಷೆಯಿಂದ 6ನೇ ಒಂದು ಭಾಗದಷ್ಟು ಜಾಗತಿಕ ಆರ್ಥಿಕತೆಗೆ ಕಾರಣವಾದ ಉತ್ತರ ಏಷ್ಯಾದಲ್ಲಿ ಇತ್ತೀಚೆಗೆ ಉದ್ವಿಗ್ನತೆಗಳನ್ನು ಹುಟ್ಟಿಸಿದೆ. ಸರ್ಕಾರೇತರ ಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ ಉತ್ತರ ಕೊರಿಯ ಸೇನೆಯ ಸ್ವಾಧೀನದಲ್ಲಿ ವಿಷಾನಿಲ, ಸರೀನ್ ಮತ್ತಿತರ ಮಾರಕ ನರವ್ಯೂಹಕ್ಕೆ ಹಾನಿಕರವಾದ 2500-5000 ಟನ್ ರಾಸಾಯನಿಕ ಅಸ್ತ್ರಗಳನ್ನು ಹೊಂದಿದೆಯೆಂದು ತಿಳಿಸಿದೆ.

ಸಂಘರ್ಷ ಉಲ್ಬಣಿಸಿ, ಮಿಲಿಟರಿ ದ್ವೇಷ ಭುಗಿಲೆದ್ದರೆ ರಾಸಾಯನಿಕ ಅಸ್ತ್ರಗಳನ್ನು ಬಳಸುವ ಅಪಾಯ ಎದುರಾಗಿದೆ. ಉತ್ತರಕೊರಿಯ ದುರ್ಬಲವಾಗಿದ್ದು ಅದನ್ನು ಬಳಸುವುದೊಂದೇ ದಾರಿಯೆಂದು ಅದರ ಭಾವನೆಯಾಗಿದೆ ಎಂದು ಸೋಲ್‌ನಲ್ಲಿ ಐಸಿಜಿ ಪ್ರತಿನಿಧಿ ಡೇನಿಯಲ್ ಪಿಂಕ್‌ಸ್ಟನ್ ತಿಳಿಸಿದ್ದಾರೆ.ಉತ್ತರ ಕೊರಿಯ ರಾಸಾಯನಿಕ ಅಸ್ತ್ರಗಳು ದಕ್ಷಿಣ ಕೊರಿಯದಲ್ಲಿ ಅಪಾರ ನಾಗರಿಕ ಸಾವುನೋವು ಉಂಟುಮಾಡುವುದಕ್ಕೆ ಸಾಕಾಗಿದೆಯೆಂದು ಐಸಿಜಿ ವರದಿ ತಿಳಿಸಿದೆ.

ಉತ್ತರ ಕೊರಿಯ ಜೈವಿಕ ಅಸ್ತ್ರಗಳ ಕಾರ್ಯಕ್ರಮವನ್ನು ಕೂಡ ನಡೆಸಿದ್ದು ವ್ಯೋಂಗ್‌ಯಾಂಗ್ ಈ ಶಸ್ತ್ರಾಸ್ತ್ರ ಕಾರ್ಯಕ್ರಮವನ್ನು ಪೂರ್ಣವಾಗಿ ಅಭಿವೃದ್ಧಿ ಮಾಡಿದೆಯೆಂದು ಪಿಂಕ್‌ಸ್ಟನ್ ಭಾವಿಸಿಲ್ಲ. ಏಕಕಾಲದಲ್ಲಿ ಬಿಡುಗಡೆ ಮಾಡಿದ ಪ್ರತ್ಯೇಕ ವರದಿಯಲ್ಲಿ, ಉತ್ತರ ಕೊರಿಯ 600 ಸ್ಕಡ್ ಮಾದರಿಯ ಕ್ಷಿಪಣಿಗಳನ್ನು ನಿಯೋಜಿಸಿದ್ದು, ದಕ್ಷಿಣ ಕೊರಿಯದ ಎಲ್ಲ ಭಾಗಗಳಿಗೆ ಮುಟ್ಟಲು ಸಾಧ್ಯವಿದೆ ಮತ್ತು ಜಪಾನ್ ಮೇಲೆ ದಾಳಿ ನಡೆಸುವ ರೊಡೊಂಗ್ ಕ್ಷಿಪಣಿಗಳನ್ನು ನಿಯೋಜಿಸಿದೆಯೆಂದು ಐಸಿಜಿ ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಲ್‌ಟಿಟಿಇ ಪಳೆಯುಳಿಕೆಗೆ ಪದ್ಮನಾಥನ್ ಸಾರಥ್ಯ?
ಭಯೋತ್ಪಾದನೆ ನಿಗ್ರಹಕ್ಕೆ ಸಹಕಾರ: ಕ್ಲಿಂಟನ್ ಕರೆ
ಪಾಕ್: 28 ಉಗ್ರರ ಹತ್ಯೆ
ಇಂಡೋನೇಷ್ಯಾ: ಕಲ್ಲಿದ್ದಲು ಗಣಿ ಸ್ಫೋಟಕ್ಕೆ 31ಬಲಿ
ವಿಯೆಟ್ನಾಂ ತೈಲಹಡಗು ಸ್ಫೋಟ: ಮ‌ೂವರ ನಾಪತ್ತೆ
ಪ್ಯಾಲೆಸ್ಟೀನಿಯರ ಸಂಕಷ್ಟ ಪರಿಹಾರಕ್ಕೆ ಬ್ಲೇರ್ ಕರೆ