ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಕಾಯಂ ಸ್ಥಾನಕ್ಕಾಗಿ ಭಾರತಕ್ಕೆ ಬೆಂಬಲಿಸಲು ಬರ್ನ್ಸ್ ಕರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಯಂ ಸ್ಥಾನಕ್ಕಾಗಿ ಭಾರತಕ್ಕೆ ಬೆಂಬಲಿಸಲು ಬರ್ನ್ಸ್ ಕರೆ
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವಕ್ಕೆ ಭಾರತಕ್ಕೆ ಅಮೆರಿಕ ನೆರವು ನೀಡಬೇಕು ಎಂದು ಭಾರತ-ಅಮೆರಿಕ ಅಣ್ವಸ್ತ್ರ ಒಪ್ಪಂದ ಜಾರಿಗೆ ಬುಷ್ ಆಡಳಿತದ ಪ್ರಮುಖ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ಭಾರತ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರವಾಗಬೇಕು ಮತ್ತು ಅಮೆರಿಕ ಅದಕ್ಕೆ ಬೆಂಬಲಿಸಬೇಕು ಎಂದು ರಾಜಕೀಯ ವ್ಯವಹಾರಗಳ ಮಾಜಿ ವಿದೇಶಾಂಗ ಅಧೀನ ಕಾರ್ಯದರ್ಶಿ ನಿಕೋಲಾಸ್ ಬರ್ನ್ಸ್ ತಿಳಿಸಿದರು.

ವಾಷಿಂಗ್ಟನ್‌ನಲ್ಲಿ ಭಾರತ-ಅಮೆರಿಕ ಬಾಂಧವ್ಯ ಕುರಿತ ಚರ್ಚೆಯಲ್ಲಿ ಮಾತನಾಡುತ್ತಾ ಅವರು ಮೇಲಿನಂತೆ ತಿಳಿಸಿದ್ದಾರೆ.ಭದ್ರತಾ ಮಂಡಳಿಗೆ ಕಾಯಂ ಸದಸ್ಯಸ್ಥಾನ ಪಡೆಯಲು ಭಾರತಕ್ಕೆ ಬರ್ನ್ಸ್ ಅವರಂತಹ ಪ್ರಭಾವಶಾಲಿ ವ್ಯಕ್ತಿ ಬೆಂಬಲಿಸುತ್ತಿರುವುದು ಇದೇ ಮೊದಲಬಾರಿಯಾಗಿದೆ.ಇಲ್ಲಿಯ ತನಕ ಜಪಾನ್ ರಾಷ್ಟ್ರವನ್ನು ಮಾತ್ರ ಯುಎನ್‌ಎಸ್‌ಸಿಯ ಕಾಯಂ ಸದಸ್ಯ ರಾಷ್ಟ್ರವೆಂದು ಅಮೆರಿಕ ಅನುಮೋದನೆ ನೀಡಿತ್ತು.

ಬರ್ನ್ಸ್ ತಮ್ಮ ಭಾಷಣದಲ್ಲಿ ಬ್ರೆಜಿಲ್‌ಗೆ ಕೂಡ ಕಾಯಂ ಸ್ಥಾನ ನೀಡಬೇಕೆಂದು ಬೆಂಬಲಿಸಿದ್ದಾರೆ. ಭಾರತವನ್ನು ಹೊರಹೊಮ್ಮುತ್ತಿರುವ ಜಾಗತಿಕ ಶಕ್ತಿಯೆಂದು ಗುರುತಿಸಿದ ಹಾರ್ವರ್ಡ್ ಕೆನಡಿ ಶಾಲೆಯ ಪ್ರಾಧ್ಯಾಪಕರಾಗಿರುವ ಬರ್ನ್ಸ್, ಭಾರತ ಮತ್ತು ಅಮೆರಿಕ ಒಂದುಗೂಡಿ ಕೆಲಸ ಮಾಡಿ ಜಗತ್ತಿನ ಭವಿಷ್ಯ ರೂಪಿಸಲು ಪ್ರಮುಖ ಪಾತ್ರ ವಹಿಸಬಹುದೆಂದು ಅವರು ಅಭಿಪ್ರಾಯಪಟ್ಟರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತ-ಪಾಕ್ ಮಾತುಕತೆ ದಿನಾಂಕಕ್ಕೆ ಅಂತಿಮರೂಪ
ಭಾರತ ಮನವಿ ಮಾಡಿಲ್ಲ, ಉಗ್ರರ ಹಸ್ತಾಂತರವೂ ಇಲ್ಲ: ಪಾಕ್
ಮೆಕ್ಸಿಕೊ: ಹಂದಿಜ್ವರಕ್ಕೆ 116 ಮಂದಿ ಬಲಿ
ಕರೀಂ ಭಾರತಕ್ಕೆ ಬಾಂಗ್ಲಾದ ನೂತನ ಹೈಕಮೀಷನರ್
ಸರಬ್ಜಿತ್ ಸಿಂಗ್‌ಗೆ ಹುಲ್ಲುಕಡ್ಡಿ - ಜರ್ದಾರಿ, ಅನ್ಸಾರ್ ಬರ್ನಿ
ರಾಜತಾಂತ್ರಿಕನ ಹತ್ಯೆ: ನಾಲ್ವರಿಗೆ ಮರಣದಂಡನೆ