ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಉತ್ತರ ಕೊರಿಯ ವಿರುದ್ಧ ಅಮೆರಿಕ ದಿಗ್ಬಂಧನ ವಿಸ್ತರಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉತ್ತರ ಕೊರಿಯ ವಿರುದ್ಧ ಅಮೆರಿಕ ದಿಗ್ಬಂಧನ ವಿಸ್ತರಣೆ
ಉತ್ತರ ಕೊರಿಯ ತನ್ನ ಅಣ್ವಸ್ತ್ರ ಮತ್ತು ಕ್ಷಿಪಣಿ ಕಾರ್ಯಕ್ರಮಗಳನ್ನು ಅಂತಾರಾಷ್ಟ್ರೀಯ ದಿಗ್ಬಂಧನಕ್ಕೆ ಜಗ್ಗದೇ ಮುಂದುವರಿಸಿರುವ ಬಗ್ಗೆ ಉದ್ವಿಗ್ನತೆ ಭುಗಿಲೆದ್ದಿರುವ ನಡುವೆ, ಅಮೆರಿಕ ಅಧ್ಯಕ್ಷ ಒಬಾಮಾ ಉತ್ತರಕೊರಿಯ ಮೇಲೆ ಆರ್ಥಿಕ ದಿಗ್ಬಂಧನಗಳ ಒಂದು ಕಂತನ್ನು ವಿಸ್ತರಿಸಿದೆ. ಉತ್ತರ ಕೊರಿಯ ಜತೆ ಸ್ಥಿರಾಸ್ತಿ ವ್ಯವಹಾರಗಳ ಮೇಲೆ ನಿರ್ಬಂಧವನ್ನು ತುರ್ತು ಅಧಿಕಾರ ಬಳಸಿದ ಒಬಾಮಾ ಇನ್ನೊಂದು ವರ್ಷಕ್ಕೆ ವಿಸ್ತರಣೆ ಮಾಡಿದ್ದಾರೆ.

ಕೊರಿಯ ಉಪಖಂಡದಲ್ಲಿ ಶಸ್ತ್ರಾಸ್ತ್ರಗಳಿಂದ ಬಳಸುವ ವಿದಳನ ಸಾಮಗ್ರಿಗಳ ಪ್ರಸರಣದ ಅಪಾಯ ಮತ್ತು ಅಸ್ತಿತ್ವವು ರಾಷ್ಟ್ರೀಯ ಭದ್ರತೆಗೆ ಮತ್ತು ಅಮೆರಿಕದ ವಿದೇಶಾಂಗ ನೀತಿ ಮೇಲೆ ಅಸಾಮಾನ್ಯ ಬೆದರಿಕೆ ಒಡ್ಡಿರುವುದಾಗಿ ಒಬಾಮಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಉತ್ತರ ಕೊರಿಯ ವೈರಿ ರಾಷ್ಟ್ರವೆಂಬ ಆಧಾರದ ಮೇಲೆ ಅದರ ಜತೆ ಎಲ್ಲ ವಾಣಿಜ್ಯವ್ಯವಹಾರಗಳನ್ನು ಮಾಜಿ ಅಧ್ಯಕ್ಷ ಬುಷ್ ಸ್ಥಗಿತಗೊಳಿಸಿದ್ದರು.

ಒಬಾಮಾ ಮಾದರಿಯಲ್ಲಿ ತುರ್ತು ಅಧಿಕಾರ ಬಳಸಿದ್ದ ಬುಷ್ ಅದೇ ಸಂದರ್ಭದಲ್ಲಿ ಸ್ಥಿರಾಸ್ತಿ ವಹಿವಾಟುಗಳ ಬಗ್ಗೆ ಕೂಡ ಉತ್ತರಕೊರಿಯ ವಿರುದ್ಧ ಒಂದು ವರ್ಷ ನಿರ್ಬಂಧ ಹೇರಿದ್ದರು. ಅದೇ ಸಮಯದಲ್ಲಿ ಬುಷ್ ಉತ್ತರಕೊರಿಯ ಜತೆ ಅಣ್ವಸ್ತ್ರ ಸ್ಥಗಿತಗೊಳಿಸುವ ಒಪ್ಪಂದ ಕುದುರಿಸಲು ಪ್ರಯತ್ನಿಸಿದ್ದರು. ಜಪಾನ್ ಮತ್ತು ಅಮೆರಿಕ ಕನ್ಸರ್ವೇಟಿವ್‌ಗಳ ಅತೃಪ್ತಿ ನಡುವೆ ಭಯೋತ್ಪಾದನೆ ಪ್ರಾಯೋಜಕರ ಪಟ್ಟಿಯಿಂದ ಉತ್ತರಕೊರಿಯವನ್ನು ಅಮೆರಿಕ ತೆಗೆದಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಯಂ ಸ್ಥಾನಕ್ಕಾಗಿ ಭಾರತಕ್ಕೆ ಬೆಂಬಲಿಸಲು ಬರ್ನ್ಸ್ ಕರೆ
ಭಾರತ-ಪಾಕ್ ಮಾತುಕತೆ ದಿನಾಂಕಕ್ಕೆ ಅಂತಿಮರೂಪ
ಭಾರತ ಮನವಿ ಮಾಡಿಲ್ಲ, ಉಗ್ರರ ಹಸ್ತಾಂತರವೂ ಇಲ್ಲ: ಪಾಕ್
ಮೆಕ್ಸಿಕೊ: ಹಂದಿಜ್ವರಕ್ಕೆ 116 ಮಂದಿ ಬಲಿ
ಕರೀಂ ಭಾರತಕ್ಕೆ ಬಾಂಗ್ಲಾದ ನೂತನ ಹೈಕಮೀಷನರ್
ಸರಬ್ಜಿತ್ ಸಿಂಗ್‌ಗೆ ಹುಲ್ಲುಕಡ್ಡಿ - ಜರ್ದಾರಿ, ಅನ್ಸಾರ್ ಬರ್ನಿ