ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಣ್ವಸ್ತ್ರ ಯುದ್ಧದ ಕರಿಯ ಮೋಡಗಳು: ಉ.ಕೊರಿಯ ಎಚ್ಚರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣ್ವಸ್ತ್ರ ಯುದ್ಧದ ಕರಿಯ ಮೋಡಗಳು: ಉ.ಕೊರಿಯ ಎಚ್ಚರಿಕೆ
ಕೊರಿಯ ವಲಯದಲ್ಲಿ ಅಣ್ವಸ್ತ್ರ ಯುದ್ಧದ ಕರಿಯ ಮೋಡಗಳು ಆವರಿಸಿದೆಯೆಂದು ಉತ್ತರಕೊರಿಯ ಎಚ್ಚರಿಸಿದ್ದು, ತನ್ನ ಪರಮಾಣು ಶಸ್ತ್ರಾಗಾರವನ್ನು ಬಲಪಡಿಸುವುದಾಗಿ ಪ್ರತಿಜ್ಞೆ ಮಾಡಿದೆ.ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರ ದಕ್ಷಿಣಕೊರಿಯ ಅಮೆರಿಕದ ಪರಮಾಣು 'ರಕ್ಷಣೆ'ಯ ಅಡಿಯಲ್ಲಿ ಹೊಸ ಯುದ್ಧಕ್ಕೆ ಪ್ರಚೋದನೆ ನೀಡಲು ಪ್ರಯತ್ನಿಸುತ್ತಿದೆಯೆಂದು ಉತ್ತರಕೊರಿಯ ಸುದ್ದಿಪತ್ರಿಕೆ ರೋಡೊಂಗ್ ಸಿನ್‌ಮನ್ ಆರೋಪಿಸಿದೆ.

ಗಂಟೆಗಳು ಕಳೆಯುತ್ತಿದ್ದಂತೆ ಅಣ್ವಸ್ತ್ರ ಸಮರದ ಕರಿಯ ಮೋಡವು ಕೊರಿಯ ವಲಯದಲ್ಲಿ ಆವರಿಸಿದೆ ಎಂದು 1950-53ರ ಸಂಘರ್ಷ ವಾರ್ಷಿಕದ ಸಂಕೇತವಾಗಿ ಸುದೀರ್ಘ ಲೇಖನದಲ್ಲಿ ಅದು ತಿಳಿಸಿದೆ. ಯಾವುದೇ ಸಂದರ್ಭದಲ್ಲಿ ಹೊಸ ಯುದ್ಧ ಭುಗಿಲೇಳಬಹುದು ಎಂದು ಪತ್ರಿಕೆ ತಿಳಿಸಿದ್ದು,ಉತ್ತರ ಕೊರಿಯ ತನ್ನ ಪರಮಾಣು ಶಸ್ತ್ರಾಗಾರ ಬಲಪಡಿಸುವಿಕೆ ಮುಂದುವರಿಸುತ್ತದೆಂದು ನುಡಿದರು.

ಅಮೆರಿಕದ ವೈರತ್ವದ ನೀತಿ ಮುಂದುವರಿಯುವ ತನಕ ನಾವು ಅಣ್ವಸ್ತ್ರ ಪ್ರತಿರೋಧ ವ್ಯವಸ್ಥೆ ಕೈಬಿಡುವುದಿಲ್ಲ ಮತ್ತು ಇನ್ನಷ್ಟು ಬಲಪಡಿಸುತ್ತೇವೆಂದು ಅದು ಹೇಳಿದೆ. ಸೋಲ್‌ನಲ್ಲಿ ಸಂಪ್ರದಾಯವಾದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಉತ್ತರಕೊರಿಯ ವಿರುದ್ಧ ದೃಢ ನಿಲುವನ್ನು ಅನುಸರಿಸಿದ್ದರಿಂದ ಗಡಿಯಾಚೆಯ ಸಂಬಂಧ ಹದಗೆಟ್ಟಿದೆ.

ಏಪ್ರಿಲ್ ಆರಂಭದಲ್ಲಿ ದೂರವ್ಯಾಪ್ತಿಯ ರಾಕೆಟ್ ಉಡಾವಣೆ ಮತ್ತು ಮೇನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದರಿಂದ ಅಂತಾರಾಷ್ಟ್ರೀಯ ಆಕ್ರೋಶ ವ್ಯಕ್ತವಾಗಿದೆ.ಸಣ್ಣ ವ್ಯಾಪ್ತಿಯ ಕ್ಷಿಪಣಿಗಳನ್ನು ಕೂಡ ಉತ್ತರಕೊರಿಯ ಹಾರಿಸಿದ್ದು, ಸಂಭವನೀಯ ಯುದ್ಧದ ಬಗ್ಗೆ ಮತ್ತೆ ಮತ್ತೆ ಎಚ್ಚರಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉತ್ತರ ಕೊರಿಯ ವಿರುದ್ಧ ಅಮೆರಿಕ ದಿಗ್ಬಂಧನ ವಿಸ್ತರಣೆ
ಕಾಯಂ ಸ್ಥಾನಕ್ಕಾಗಿ ಭಾರತಕ್ಕೆ ಬೆಂಬಲಿಸಲು ಬರ್ನ್ಸ್ ಕರೆ
ಭಾರತ-ಪಾಕ್ ಮಾತುಕತೆ ದಿನಾಂಕಕ್ಕೆ ಅಂತಿಮರೂಪ
ಭಾರತ ಮನವಿ ಮಾಡಿಲ್ಲ, ಉಗ್ರರ ಹಸ್ತಾಂತರವೂ ಇಲ್ಲ: ಪಾಕ್
ಮೆಕ್ಸಿಕೊ: ಹಂದಿಜ್ವರಕ್ಕೆ 116 ಮಂದಿ ಬಲಿ
ಕರೀಂ ಭಾರತಕ್ಕೆ ಬಾಂಗ್ಲಾದ ನೂತನ ಹೈಕಮೀಷನರ್