ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > 'ನಾಲ್ಕು ಶಕ್ತಿಕೇಂದ್ರಗಳ ನಡುವೆ ಪಾಕ್‌ನಲ್ಲಿ ಸಂಘರ್ಷ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ನಾಲ್ಕು ಶಕ್ತಿಕೇಂದ್ರಗಳ ನಡುವೆ ಪಾಕ್‌ನಲ್ಲಿ ಸಂಘರ್ಷ'
ಪಾಕಿಸ್ತಾನದಲ್ಲಿ ನಾಲ್ಕು ಶಕ್ತಿಕೇಂದ್ರಗಳ ನಡುವೆ ಅಭಿಪ್ರಾಯ ಭೇದದಿಂದ ರಾಷ್ಟ್ರದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಅಡ್ಡಬಂದಿವೆಯೆಂದು ರಾಜಕೀಯದಲ್ಲಿ ಮುಖ್ಯ ಪಾತ್ರವಹಿಸಿರುವ ಉನ್ನತ ಧರ್ಮಗುರು ತಿಳಿಸಿದ್ದಾರೆ.

ಟಿವಿ ಕಾರ್ಯಕ್ರಮಕ್ಕೆ ಮಾತನಾಡುತ್ತಿದ್ದ ಜಮೈತ್ ಉಲೇಮ-ಎ-ಇಸ್ಲಾಂನ ಮುಖ್ಯಸ್ಥ ಫಝಲ್ ಉರ್ ರೆಹ್ಮಾನ್, ಅಧ್ಯಕ್ಷಹುದ್ದೆ, ಪ್ರಧಾನಮಂತ್ರಿ ಕಚೇರಿ, ಸುಪ್ರೀಂಕೋರ್ಟ್ ಮತ್ತು ಸೇನೆಯ ಮುಖ್ಯಕಚೇರಿ ನಡುವೆ ಸಂಘರ್ಷದ ಕಾರಣದಿಂದ ಪಾಕಿಸ್ತಾನ ತನ್ನ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ವಿಫಲವಾಗಿದೆಯೆಂದು ಆನ್‌ಲೈನ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಯಾವುದೇ ಪರಿಹಾರ ಇತ್ಯರ್ಥಕ್ಕೆ ಸಂಸತ್ತು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದ ಅವರು, ಇತರೆ ರಾಷ್ಟ್ರಗಳ ಪ್ರೇರಣೆ ಮೇಲೆ ರಾಷ್ಟ್ರದ ನಾಯಕತ್ವ ನಿರ್ಧಾರ ಕೈಗೊಳ್ಳುವುದನ್ನು ತರಾಟೆಗೆ ತೆಗೆದುಕೊಂಡರು. ಅಮೆರಿಕದ ಒತ್ತಡದ ಮೇಲೆ ತಾಲಿಬಾನ್ ವಿರುದ್ಧ ಕಾರ್ಯಾಚರಣೆ ಉಲ್ಲೇಖಿಸಿ ಅದು ಹೇಳಿದೆ. ಭಯೋತ್ಪಾದನೆ ವಿರುದ್ಧ ಹೋರಾಟವು ಅಮೆರಿಕದ ಯುದ್ಧವಾಗಿದ್ದು, ಪಾಕಿಸ್ತಾನಕ್ಕೆ ಅದು ಸಂಬಂಧಿಸಿಲ್ಲ ಎಂದು ರೆಹಮಾನ್ ತಿಳಿಸಿದ್ದು, ಪಾಕಿಸ್ತಾನವು ಅಮೆರಿಕದ ಅಸ್ತ್ರವಾಗಿದ್ದು, ತನ್ನ ಬಾಸ್ ಮೆಚ್ಚುಗೆಗೆ ಸೇವೆಸಲ್ಲಿಸುತ್ತಿದೆಯೆಂದು ವ್ಯಂಗ್ಯವಾಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಣ್ವಸ್ತ್ರ ಯುದ್ಧದ ಕರಿಯ ಮೋಡಗಳು: ಉ.ಕೊರಿಯ ಎಚ್ಚರಿಕೆ
ಉತ್ತರ ಕೊರಿಯ ವಿರುದ್ಧ ಅಮೆರಿಕ ದಿಗ್ಬಂಧನ ವಿಸ್ತರಣೆ
ಕಾಯಂ ಸ್ಥಾನಕ್ಕಾಗಿ ಭಾರತಕ್ಕೆ ಬೆಂಬಲಿಸಲು ಬರ್ನ್ಸ್ ಕರೆ
ಭಾರತ-ಪಾಕ್ ಮಾತುಕತೆ ದಿನಾಂಕಕ್ಕೆ ಅಂತಿಮರೂಪ
ಭಾರತ ಮನವಿ ಮಾಡಿಲ್ಲ, ಉಗ್ರರ ಹಸ್ತಾಂತರವೂ ಇಲ್ಲ: ಪಾಕ್
ಮೆಕ್ಸಿಕೊ: ಹಂದಿಜ್ವರಕ್ಕೆ 116 ಮಂದಿ ಬಲಿ