ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ವಿದ್ಯಾರ್ಥಿಗಳಿಗೆ ಭರವಸೆ: ಆಸ್ಟ್ರೇಲಿಯದ ನಿಯೋಗ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿದ್ಯಾರ್ಥಿಗಳಿಗೆ ಭರವಸೆ: ಆಸ್ಟ್ರೇಲಿಯದ ನಿಯೋಗ
ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ಪ್ರತಿಭಟನೆಗಳು ಭುಗಿಲೇಳಲು ಕಾರಣವಾದ ಭಾರತೀಯ ವಿದ್ಯಾರ್ಥಿಗಳ ಮೇಲೆ ಜನಾಂಗೀಯ ದೇಶದ ದಾಳಿಗಳಿಂದ ಆಸ್ಟ್ರೇಲಿಯ ಸರ್ಕಾರ ತತ್ತರಿಸಿದೆ. ಅಂತಾರಾಷ್ಟ್ರೀಯ ವಿದ್ಯಾರ್ಧಿಗಳ ಕಳವಳ ನಿಭಾಯಿಸಲು ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ನೀಡುವ ಸಲುವಾಗಿ ಆಸ್ಟ್ರೇಲಿಯ ಸರ್ಕಾರ, ವೈಸ್ ಚಾನ್ಸಲರ್‌ಗಳು ಮತ್ತು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಇನ್ನೊಂದು ಉನ್ನತ ಮಟ್ಟದ ನಿಯೋಗವನ್ನು ನವದೆಹಲಿಗೆ ಈ ವಾರ ಕಳಿಸಲಿದೆ.

ಆಸ್ಟ್ರೇಲಿಯದ ಶಿಕ್ಷಣ ಇಲಾಖೆ ಕಾರ್ಯದರ್ಶಿ ಲೀಸಾ ಪಾಲ್ ಸಾಗರೋತ್ತರ ವ್ಯವಹಾರ ಸಚಿವ ವಯಲಾರ್ ರವಿ ಅವರನ್ನು ನವದೆಹಲಿಯಲ್ಲಿ ಈಗಾಗಲೇ ಭೇಟಿ ಮಾಡಿದ್ದರು. ವಿದ್ಯಾರ್ಥಿಗಳು ಸಂಪರ್ಕಿಸುವ ವಿಶ್ವವಿದ್ಯಾಲಯದ ಏಜೆಂಟರ ಮೇಲೆ ಕಣ್ಣಿಟ್ಟು, ಅರೆಕಾಲಿಕ ಉದ್ಯೋಗದಲ್ಲಿರುವ ವಿದ್ಯಾರ್ಥಿಗಳಿಗೆ ಸೂಕ್ತ ವೇತನ ಸಿಗುವುದನ್ನು ಖಾತರಿಪಡಿಸಲು ನಿಯಂತ್ರಣ ವ್ಯವಸ್ಥೆ ಜಾರಿಗೆ ತರುವುದಾಗಿ ಅವರು ಭರವಸೆ ನೀಡಿದ್ದರು.

ಮುಂದಿನ ನಿಯೋಗವನ್ನು ಶಿಕ್ಷಣ ಇಲಾಖೆಯ ಅಂತಾರಾಷ್ಟ್ರೀಯ ಸಮ‌ೂಹದ ಮುಖ್ಯಸ್ಥರಾದ ಕಾಲಿನ್ ವಾಲ್ಟರ್ಸ್ ನೇತೃತ್ವ ವಹಿಸಲಿದ್ದಾರೆ. ಕುಲಪತಿಗಳು ಮತ್ತು ಪೊಲೀಸ್ ಅಧಿಕಾರಿಗಳು ಅವರನ್ನು ಜತೆಗೂಡಲಿದ್ದು, ಆಸ್ಟ್ರೇಲಿಯ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿರುವ ಪ್ರಮುಖ ರಾಜ್ಯಗಳಿಗೆ ಭೇಟಿ ನೀಡಲಿದ್ದು, ಕಳೆದ ಕೆಲವು ವಾರಗಳಲ್ಲಿ ಹಿಂಸಾಚಾರದ 16 ಘಟನೆಗಳ ಬಗ್ಗೆ ಪ್ರತಿಕ್ರಿಯಿಸಲಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ನಾಲ್ಕು ಶಕ್ತಿಕೇಂದ್ರಗಳ ನಡುವೆ ಪಾಕ್‌ನಲ್ಲಿ ಸಂಘರ್ಷ'
ಅಣ್ವಸ್ತ್ರ ಯುದ್ಧದ ಕರಿಯ ಮೋಡಗಳು: ಉ.ಕೊರಿಯ ಎಚ್ಚರಿಕೆ
ಉತ್ತರ ಕೊರಿಯ ವಿರುದ್ಧ ಅಮೆರಿಕ ದಿಗ್ಬಂಧನ ವಿಸ್ತರಣೆ
ಕಾಯಂ ಸ್ಥಾನಕ್ಕಾಗಿ ಭಾರತಕ್ಕೆ ಬೆಂಬಲಿಸಲು ಬರ್ನ್ಸ್ ಕರೆ
ಭಾರತ-ಪಾಕ್ ಮಾತುಕತೆ ದಿನಾಂಕಕ್ಕೆ ಅಂತಿಮರೂಪ
ಭಾರತ ಮನವಿ ಮಾಡಿಲ್ಲ, ಉಗ್ರರ ಹಸ್ತಾಂತರವೂ ಇಲ್ಲ: ಪಾಕ್