ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗಾಂಧೀಜಿಯ ಐತಿಹಾಸಿಕ ಮನೆ ಹರಾಜಿನಲ್ಲಿ ಖರೀದಿ (Gandhi | Historic house | Tourism | Bidders)
 
ಸುಮಾರು 100 ವರ್ಷಗಳ ಕೆಳಗೆ ಮಹಾತ್ಮ ಗಾಂಧಿ ವಾಸವಿದ್ದ ಐತಿಹಾಸಿಕ ಮನೆಯನ್ನು ಫ್ರೆಂಚ್ ಪ್ರವಾಸೋದ್ಯಮ ಕಂಪೆನಿಯೊಂದು ಹರಾಜಿನಲ್ಲಿ ಖರೀದಿಸಿದೆ. ಹರಾಜಿನ ಮ‌ೂಲ ಬೆಲೆಯಾದ 377,029 ಡಾಲರ್‌ನ ಎರಡು ಪಟ್ಟು ಹಣ ನೀಡಿ, ಭಾರತೀಯರು ಸೇರಿದಂತೆ ಇತರೆ ಬಿಡ್ಡರ್‌ಗಳನ್ನು ಸೋಲಿಸಿ ಗೆದ್ದಿದೆ.

ಪ್ರವಾಸೋದ್ಯಮ ಕಂಪೆನಿ ವೋಯಾಗೇರ್ ಡು ಮೊಂಡೆ ಪ್ಯಾರಿಸ್ ಷೇರುವಿನಿಮಯ ಕೇಂದ್ರದಲ್ಲಿ ಹೆಸರು ಹೊಂದಿದ್ದು, ವಿಶ್ವಾದ್ಯಂತ ಪಾರಂಪರಿಕ ಆಸ್ತಿಗಳಲ್ಲಿ ಹೂಡಿಕೆ ಮಾಡುವ ಸಿದ್ಧಾಂತಕ್ಕೆ ಅನುಗುಣವಾಗಿ ಗಾಂಧಿ ಮನೆಯನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತನೆ ಮಾಡಲು ಯೋಜಿಸಿದೆ. ಗಾಂಧಿ ಯುವ ವಕೀಲರಾಗಿ 1908 ರಿಂದ 1910ರವಗೆ ಈ ಮನೆಯಲ್ಲಿ ವಾಸ ಮಾಡಿದ್ದರು.

ಗಾಂಧೀಜಿಯ ನಿಕಟವರ್ತಿ ಮತ್ತು ವಿನ್ಯಾಸಕಾರ ಹರ್ಮನ್ ಕ್ಯಾಲೆನ್‌ಬ್ಯಾಕ್ ಅವರು ಹುಲ್ಲಿನ ಮಾಡಿನ ರೊಂಡಾವೆಲ್ ಶೈಲಿಯ ಮನೆಯ ವಿನ್ಯಾಸ ರೂಪಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ