ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜಪಾನ್‌ನಲ್ಲಿ ಮೆಲೊರ್ ಚಂಡಮಾರುತಕ್ಕೆ ಒಬ್ಬ ಬಲಿ (Typhoon | Japan | Melor | Kitahara)
 
ಜಪಾ‌ನ್‌ನಲ್ಲಿ ಗುರುವಾರ ಪ್ರಬಲ ಚಂಡಮಾರುತ ಅಪ್ಪೆಳಿಸಿದ್ದು, ಕಟ್ಟಡಗಳು ಮತ್ತು ರಸ್ತೆಗಳಿಗೆ ಹಾನಿಯಾಗಿದೆ, ರೈಲು ಸೇವೆಗೆ ಧಕ್ಕೆಯಾಗಿದ್ದು, ನೂರಾರು ವಿಮಾನದ ಫ್ಲೈಟ್‌ಗಳು ರದ್ದಾಗಿವೆ.

ಚಂಡಮಾರುತದ ಅಬ್ಬರಕ್ಕೆ ಒಬ್ಬ ವ್ಯಕ್ತಿ ಬಲಿಯಾಗಿದ್ದು, ಹತ್ತಾರು ಜನರು ಗಾಯಗೊಂಡಿದ್ದಾರೆ. ಚಂಡಮಾರುತ ಮೆಲೊರ್ ರಾಷ್ಟ್ರದ ಮುಖ್ಯದ್ವೀಪಕ್ಕೆ ಬಲವಾದ ಗಾಳಿಯೊಂದಿಗೆ ಅಪ್ಪಳಿಸಿದೆ. ಚಂಡಮಾರುತದಿಂದ ರಸ್ತೆಗಳು ಮತ್ತು ಮನೆಗಳು ಪ್ರವಾಹದಿಂದ ಆವೃತವಾಗಿದ್ದು, ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿವೆ ಮತ್ತು ಕಟ್ಟಡಗಳಿಗೆ ಭಾರೀ ಹಾನಿಯಾಗಿದೆ.

ಮುಂಜಾನೆಯೇ ಸುದ್ದಿಪತ್ರಿಕೆ ವಿತರಣೆಗೆ ಮೋಟರ್‌ಬೈಕಿನಲ್ಲಿ ತೆರಳುತ್ತಿದ್ದ ಹಿರೋಶಿ ಕಿಟಾಹರಾ ಎಂಬ 54ರ ಪ್ರಾಯದ ವ್ಯಕ್ತಿಯು ಮೋಟರ್ ‌ಬೈಕಿನಲ್ಲಿ ತೆರಳುತ್ತಿದ್ದಾಗ ಚಂಡಮಾರುತದಿಂದ ಉರುಳಿಬಿದ್ದ ಮರಕ್ಕೆ ಡಿಕ್ಕಿಹೊಡೆದು ಅಸುನೀಗಿದ ಘಟನೆ ವಾಕಾಯಾಮದಲ್ಲಿ ಸಂಭವಿಸಿದೆಯೆಂದು ವಕ್ತಾರ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ