ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಫ್ಘನ್ ನೀತಿ ಮಾರ್ಪಾಟಿಗೆ ಒಬಾಮಾ ಚಿಂತನೆ (Afghan | Obama | Pakistan | Obama)
 
ಆಫ್ಘಾನಿಸ್ತಾನದಲ್ಲಿ ಅಮೆರಿಕ ನೇತೃತ್ವದ ಕಾರ್ಯಾಚರಣೆ ಆರಂಭವಾಗಿ 8 ವರ್ಷಗಳು ಕಳೆದ ಬಳಿಕ, ಆಫ್ಘಾನಿಸ್ತಾನದ ನೀತಿ ಬಗ್ಗೆ ಒಬಾಮಾ ಆಡಳಿತ ಗಂಭೀರ ಪುನರಾಲೋಚನೆ ನಡೆಸಿದೆ.

ಆಫ್ಘಾನಿಸ್ತಾನದಲ್ಲಿ ಅಮೆರಿಕದ ಕಾರ್ಯತಂತ್ರದಲ್ಲಿ ಬದಲಾವಣೆ ಸಂಭವದ ಬಗ್ಗೆ ಊಹಾಪೋಹಗಳು ಎದ್ದ ಬಳಿಕ ಒಬಾಮಾ ಅವರು ಉನ್ನತ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನು ಭೇಟಿ ಮಾಡಿದರು.ಉನ್ನತ ನೀತಿ ನಿರೂಪಕರು ಕೂಡ ನೆರೆಯ ಪಾಕಿಸ್ತಾನದಲ್ಲಿರುವ ಪ್ರಕ್ಷುಬ್ಧ ಸ್ಥಿತಿಯನ್ನು ಕುರಿತು ಚರ್ಚಿಸಿದರು. ಅಲ್ ಖಾಯಿದಾ ಮತ್ತು ತಾಲಿಬಾನ್ ಸೋಲಿಸುವ ಗುರಿ ಸಾಧನೆಗೆ ಆಫ್ಘನ್-ಪಾಕಿಸ್ತಾನ ಪ್ರದೇಶದಲ್ಲಿ ಸೂಕ್ತ ಕಾರ್ಯತಂತ್ರವನ್ನು ಹುಡುಕುವುದು ಅವರ ಪ್ರಯತ್ನವೆಂದು ಹೇಳಲಾಗಿದೆ.ಒಬಾಮಾ ಅವರು ಪಾಕಿಸ್ತಾನದ ಕುರಿತು ತಮ್ಮ ಉನ್ನತ ಸಂಗಡಿಗರ ಜತೆ ಸಿಚುಯೇಷನ್ ರೂಂ ಸಭೆ ಕರೆದಿದ್ದಾರೆ.

ಉನ್ನತ ಅಲ್ ಖಾಯಿದಾ ಮತ್ತು ತಾಲಿಬಾನ್ ನಾಯಕರು ಬುಡಕಟ್ಟು ಪ್ರದೇಶದಲ್ಲಿರುವುದರಿಂದ ಪಾಕಿಸ್ತಾನ ಕುರಿತು ಸೂಕ್ತ ಕಾರ್ಯತಂತ್ರ ರೂಪಿಸುವುದು ಅವಶ್ಯಕವೆಂದು ವಾಷಿಂಗ್ಟನ್ ಈಗ ನಂಬಿಕೆಯಿರಿಸಿದೆ.

ಒಬಾಮಾ ಮತ್ತು ಉಪಾಧ್ಯಕ್ಷ ಜೋಯಿ ಬಿಡನ್ ಸೇರಿದಂತೆ ಈ ಸಭೆಯಲ್ಲಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್, ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್, ಪಾಕ್, ಆಫ್ಘನ್ ವಿಶೇಷ ಪ್ರತಿನಿಧಿ ಹಾಲ್‌ಬ್ರೂಕ್, ಸ್ಟಾಫ್ ಅಡ್ಮೈರಲ್ ಮೈಕ್ ಮುಲ್ಲನ್, ಜನರಲ್ ಡೇವಿಡ್ ಪೆಟ್ರೋಸ್ ಮುಂತಾದವರು ಭಾಗವಹಿಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ