ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಾನುಟು ಬಳಿ 3 ಪ್ರಬಲ ಭೂಕಂಪಗಳು (Earthquake | Vanuatu | Tsunami | Quake)
Feedback Print Bookmark and Share
 
ಕೇವಲ ಒಂದು ಗಂಟೆಯ ಅವಧಿಯಲ್ಲಿ ‌ಮ‌ೂರು ಪ್ರಬಲ ಭೂಕಂಪಗಳು ದಕ್ಷಿಣ ಪೆಸಿಫಿಕ್ ರಾಷ್ಟ್ರ ವಾನುಟು ಬಳಿ ಅಪ್ಪಳಿಸಿವೆಯೆಂದು ಭೂಕಂಪತಜ್ಞರು ಹೇಳಿದ್ದಾರೆ. ಮೊದಲ ಭೂಕಂಪವು 7.8 ತೀವ್ರತೆಯುಳ್ಳದ್ದಾಗಿದ್ದು, ಪ್ರದೇಶದಾದ್ಯಂತ ಸುನಾಮಿ ಮುನ್ನೆಚ್ಚರಿಕೆ ನೀಡಲಾಯಿತು. ಅದರ ಹಿಂದೆಯೇ 7.7 ಮತ್ತು 7.1 ತೀವ್ರತೆಯ ಇನ್ನೆರಡು ಭೂಕಂಪಗಳು ಸಂಭವಿಸಿವೆಯೆಂದು ಅಮೆರಿಕ ಬೌಗೋಳಿಕ ಸಮೀಕ್ಷೆ ತಿಳಿಸಿದೆ.

ವಾನುಟು ಎಸ್ಪಿರಿಟು ಸಾಂಟೊ ದ್ವೀಪಕ್ಕೆ 294 ಕಿಮೀ ದೂರದಲ್ಲಿ 35 ಕಿಮೀ ಆಳದಲ್ಲಿ ಬೆಳಿಗ್ಗೆ 9.03ಕ್ಕೆ ಅಥವಾ ಭಾರತೀಯ ಕಾಲಮಾನ ಮುಂಜಾನೆ 3.30ಕ್ಕೆ ಭೂಕಂಪ ಅಪ್ಪಳಿಸಿತು. 15 ನಿಮಿಷಗಳ ಬಳಿಕ 7.7 ತೀವ್ರತೆಯ ಇನ್ನೊಂದು ಭೂಕಂಪ ಅಪ್ಪಳಿಸಿತು.

ಎರಡನೇ ಭೂಕಂಪವು ಎಸ್ಪಿರಿಟೊ ಸಾಂಟೊ ದ್ವೀಪದಲ್ಲಿ 9.18ಕ್ಕೆ ಸಂಭವಿಸಿತು. ಬಳಿಕ 10.13ಕ್ಕೆ ಲುಗಾನ್‌ವಿಲ್ಲೆಯ ವಾಯವ್ಯಕ್ಕೆ 280 ಕಿಮೀ ದೂರದಲ್ಲಿ 7.1 ಪ್ರಮಾಣದ ಭೂಕಂಪ ಅಪ್ಪಳಿಸಿತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭೂಕಂಪ, ವಾನುಟು, ಸುನಾಮಿ, ಭೂಕಂಪ