ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚಂದ್ರನ ಅಂಗಳದಲ್ಲಿ ಜೀವಜಲ ಪತ್ತೆಗೆ ನಾಸಾ ಬಾಂಬ್ (NASA | Bomb | Moon | Water)
Feedback Print Bookmark and Share
 
ಚಂದ್ರನ ಅಂಗಳಲ್ಲಿ ಅ.9ರ ಶುಕ್ರವಾರ 7.31 ಗಂಟೆಗೆ ಅಭೂತಪೂರ್ವ ವಿದ್ಯಮಾನ ನಡೆದಿದ್ದು, ವಿಜ್ಞಾನದ ರೋಮಾಂಚಕ ಕತೆಯಂತೆ ಭಾಸವಾದರೂ ಇದು ಸತ್ಯ. ಗಂಟೆಗೆ ಸುಮಾರು 8000 ಕಿಮೀ ವೇಗದಲ್ಲಿ ನಾಸಾದ ಬಾಹ್ಯಾಕಾಶ ನೌಕೆ 2305 ಕೇಜಿ ತೂಕದ ಸೆಂಟೌರ್ ಚಂದ್ರನ ದಕ್ಷಿಣ ಧ್ರುವಕ್ಕೆ ಅಪ್ಪಳಿಸಿತು.

ನೌಕೆ ಅಪ್ಪಳಿಸುವ ರಭಸಕ್ಕೆ ಚಂದ್ರನ ಅಂಗಳದ 350 ಟನ್ ಮಣ್ಣು ಮತ್ತು ಅವಶೇಷಗಳನ್ನು ಹೊರತೆಗೆದು 13 ಅಡಿ ಆಳದ ಕುಳಿಯನ್ನು ನಿರ್ಮಿಸಿದೆ. ಸುಮಾರು 6.6 ಮೀ ವ್ಯಾಸದ ಕುಳಿಯು ಫುಟ್‌ಬಾಲ್ ಮೈದಾನದ ಮ‌ೂರನೇ ಒಂದರಷ್ಟು ಗಾತ್ರವನ್ನು ಹೊಂದಿರುತ್ತದೆ. ಚಂದ್ರನ ಮೇಲೆ ನಾಸಾ ನೌಕೆಯ ಘರ್ಷಣೆ ಸಂಭವಿಸಿದ ಕೇವಲ ನಾಲ್ಕು ನಿಮಿಷಗಳ ಅಂತರದಲ್ಲಿ ಶೆಪರ್‌ಡಿಂಗ್ ಎಂದು ಕರೆಯುವ ಇನ್ನೊಂದು ಬಾಹ್ಯಾಕಾಶ ನೌಕೆ ಪ್ರೋಬ್ ಕ್ಯಾಮೆರಾಗಳೊಂದಿಗೆ ಮುಂಚಿನ ಪಥದಲ್ಲೇ ಅವಶೇಷಗಳ ಮೋಡದ ನಡುವೆ ಚಂದ್ರನ ಅಂಗಳಕ್ಕೆ ಅಪ್ಪಳಿಸಿತು.

ಆದರೆ ಜನರು ನಿರೀಕ್ಷಿಸಿದ್ದ ಸ್ಫೋಟದ ಚಿತ್ರಗಳು ಮತ್ತು 6 ಮೈಲುಗಳ ದೂರದವರೆಗೆ ದಟ್ಟವಾದ ದೂಳಿನ ಕಣಗಳು ಮ‌ೂಡಿಬರಲಿಲ್ಲ. ಇಂಟರ್‌ನೆಟ್‌ನಲ್ಲಿ ವೀಕ್ಷಿಸುತ್ತಿದ್ದ ಸಾರ್ವಜನಿಕರು ಮತ್ತು ವೀಕ್ಷಣಾಲಯಗಳಲ್ಲಿ ಕೊಂಚ ಗಲಿಬಿಲಿಯಾಯಿತು.

ತಮ್ಮ ಉಪಕರಣಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೆಂದು ನಾಸಾ ಅಧಿಕಾರಿಗಳು ಹೇಳಿದ್ದು, ವಾಸ್ತವ ಸ್ಫೋಟದ ಜೀವಂತ ಚಿತ್ರಗಳು ಕಾಣುತ್ತಿಲ್ಲವೆಂದು ಹೇಳಿದೆ. ಕೆಲವು ಆಯ್ದ ಚಿತ್ರಗಳು 10 ಗಂಟೆಗೆ ಸಿಗುವುದೆಂದು ಹೇಳಿವೆ.

ಚಂದ್ರನ ಮೇಲ್ಮೈಗೆ ಡಿಕ್ಕಿ ಹೊಡೆಸುವ ಯೋಜನೆಯ ಉದ್ದೇಶವು ಚಂದ್ರನ ಅಂಗಳದಲ್ಲಿ ಜೀವಜಲ ಪತ್ತೆಹಚ್ಚುವ ಮ‌ೂಲಕ ಚಂದ್ರನಲ್ಲಿ ನೀರಿನ ಕಣಗಳನ್ನು ಪತ್ತೆ ಹಚ್ಚುವ ಚಂದ್ರಯಾನ-1 ನೌಕೆಯ ಶೋಧನೆಯನ್ನು ದೃಢಪಡಿಸಲಿದೆ. ಚಂದ್ರನಲ್ಲಿ ನೀರಿನ ಸುಳಿವನ್ನು ಪತ್ತೆಹಚ್ಚುವುದು ಮಾನವಸಹಿತ ಚಂದ್ರ ಯಾತ್ರೆಗಳ ಮೇಲೆ ದೂರಗಾಮಿ ಪರಿಣಾಮ ಬೀರಲಿದ್ದು, ಚಂದ್ರನ ಮೇಲೆ ಮಾನವನ ಕಾಯಂ ನೆಲೆ ಸ್ಥಾಪನೆಗೆ ನೆರವಾಗಲಿದೆ.

ಪ್ರಾಸ್ಪೆಕ್ಟರ್ ಮತ್ತು ಮುಂಚಿನ ಯಾತ್ರೆ ಕ್ಲೆಮೆಂಟಿನ್ ಚಂದ್ರನಲ್ಲಿ ನೀರಿಗಾಗಿ ಶೋಧ ನಡೆಸಿದ್ದು, ಯಾವುದೇ ದೃಢ ಫಲಿತಾಂಶ ಪಡೆಯುವಲ್ಲಿ ವಿಫಲವಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ