ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬರಾಕ್ ಒಬಾಮಾಗೆ ನೊಬೆಲ್ ಶಾಂತಿ ಪ್ರಶಸ್ತಿಯ ಗರಿ (Obama | Nobel | world peace | Disarmament)
Feedback Print Bookmark and Share
 
PTI
PTI
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಪಟ್ಟ ಶ್ರಮಕ್ಕಾಗಿ ಮತ್ತು ವಿಶ್ವವನ್ನು ಅಣ್ವಸ್ತ್ರಮುಕ್ತವಾಗಿಸಲು ಅಣ್ವಸ್ತ್ರ ದಾಸ್ತಾನನ್ನು ತಗ್ಗಿಸುವ ಪ್ರಯತ್ನಕ್ಕಾಗಿ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ.

ಅಮೆರಿಕದ ಉನ್ನತ ಹುದ್ದೆಯನ್ನು ಹೊಂದಿದ ಪ್ರಥಮ ಆಫ್ರಿಕನ್-ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಒಬಾಮಾ, ಪರಮಾಣು ನಿಶ್ಶಸ್ತ್ರೀಕರಣಕ್ಕೆ ಕರೆ ನೀಡಿದ್ದು, ಕಳೆದ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಸ್ಥಗಿತಗೊಂಡ ಮಧ್ಯಪೂರ್ವ ಶಾಂತಿ ಪ್ರಕ್ರಿಯೆಯ ಪುನಾರಂಭಕ್ಕೆ ಕೆಲಸ ಮಾಡಿದ್ದರು. ಒಬಾಮಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ವಹಿಸಿದ ಅಸಾಮಾನ್ಯ ರಾಜತಾಂತ್ರಿಕ ಪ್ರಯತ್ನಗಳನ್ನು ನೊಬೆಲ್ ತೀರ್ಪುಗಾರರ ಮಂಡಳಿ ಶ್ಲಾಘಿಸಿದೆ.

ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯನ್ನು ಮತ್ತು ಜನರ ನಡುವೆ ಸಹಕಾರ ಬಲಪಡಿಸುವ ಒಬಾಮಾ ಅವರ ಅಸಾಮಾನ್ಯ ಪ್ರಯತ್ನಗಳನ್ನು ನಾರ್ವೆಯ ನೊಬೆಲ್ ಸಮಿತಿಯು ಹೊಗಳಿದೆ.ಮಾತುಕತೆ ಉತ್ತೇಜನಕ್ಕೆ, ಜನಾಂಗಗಳ ನಡುವೆ ಮರುಸಂಧಾನಕ್ಕೆ, ಅಣ್ವಸ್ತ್ರ ಪ್ರಸರಣ ನಿಷೇಧ ಅಭಿಯಾನವನ್ನು ಮುಂದಿರಿಸಲು ಒಬಾಮಾ ಪಟ್ಟ ಶ್ರಮವನ್ನು ಪರಿಗಣಿಸಿ ಪ್ರತಿಷ್ಠಿತ ಗೌರವವನ್ನು ನೀಡಲಾಗುತ್ತಿದೆಯೆಂದು ಪ್ರಶಸ್ತಿ ಪತ್ರದಲ್ಲಿ ವಿವರಿಸಲಾಗಿದೆ.

ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಸುಮಾರು 205 ದಾಖಲೆಯ ನಾಮಪತ್ರಗಳನ್ನು ಸ್ವೀಕರಿಸಲಾಗಿತ್ತು. ಐವರು ಸದಸ್ಯರ ಸಮಿತಿಯು ಒಬಾಮರಿಗೆ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದು, ಅವರು ಚಿನ್ನದ ಪದಕ, ಪ್ರಶಸ್ತಿ ಪತ್ರ ಮತ್ತು 10 ದಶಲಕ್ಷ ಡಾಲರ್ ಸ್ವೀಡನ್ ಕ್ರೋನರ್ ಅಥವಾ 14 ಲಕ್ಷ ಡಾಲರ್ ಬಹುಮಾನ ಗಳಿಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ