ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಂಬಿ ಎಣಿಸಿದ ನಕಲಿ ಕಾರು ಅಪಘಾತಗಳ ರೂವಾರಿ (Briton | Scam | Insurance | Crashes)
Feedback Print Bookmark and Share
 
ಒಂದಲ್ಲ, ಎರಡಲ್ಲ ಈ ವ್ಯಕ್ತಿ ಸುಮಾರು 100 ಬಾರಿ ನಕಲಿ ಕಾರು ಅಪಘಾತಗಳಿಗೆ ಸೂತ್ರಧಾರಿಯಾಗಿದ್ದ. ವಂಚನೆಯಿಂದ ಹಣಗಳಿಸುವ ಹಗರಣಗಳಲ್ಲಿ ವಿಮೆ ಕಂಪೆನಿಗಳಿಗೆ ಸುಮಾರು 1.6 ದಶಲಕ್ಷ ಡಾಲರ್ ನಷ್ಟವುಂಟುಮಾಡಿದ ಆರೋಪದ ಮೇಲೆ ಈಗ ಜೈಲಿನಲ್ಲಿ ನಾಲ್ಕೂವರೆ ವರ್ಷ ಕಂಬಿಎಣಿಸಿದ್ದಾನೆ.

ನಕಲಿ ಅಪಘಾತಗಳನ್ನು ರೂಪಿಸಲು 24ರ ಪ್ರಾಯದ ಮೊಹಮದ್ ಪಟೇಲ್ ಪ್ರತಿ ಕಕ್ಷಿದಾರನಿಂದ ತಲಾ 500 ಡಾಲರ್ ಪಡೆಯುತ್ತಿದ್ದು, ವಂಚಕರು ತಮ್ಮ ವಿಮಾ ಕಂಪೆನಿಗಳಿಂದ ಸರಾಸರಿ 17,000 ಡಾಲರ್ ಕ್ಲೇಮು ಮಾಡಿದ್ದರು.2005 ಮತ್ತು 2008ರ ಅವಧಿಯಲ್ಲಿ ಅವನು ಸುಮಾರು 92 ನಕಲಿ ಅಪಘಾತಗಳಿಗೆ ಸೂತ್ರಧಾರಿಯಾದ. ಸಮೀಪದ ನಿರ್ದಿಷ್ಟ ಸ್ಥಳದಲ್ಲೇ ಅನೇಕ ಕಾರು ಅಪಘಾತಗಳು ಸಂಭವಿಸಿದ ಬಗ್ಗೆ ಕಚೇರಿ ಬ್ಲಾಕ್ ಕಾರ್ಮಿಕರು ಸಂಶಯಗೊಂಡ ಬಳಿಕ ಸಂಚು ಬಯಲಾಗಿತ್ತು. ಹಗರಣದಲ್ಲಿ ವಂಚನೆಗೆ ಬಲಿಯಾದ ಎಎಕ್ಸ್‌ಎ ವಿಮೆ ಕಂಪೆನಿ ತನಿಖೆ ಮಾಡಿ ಪೊಲೀಸರಿಗೆ ದೂರು ನೀಡಿತು.

ಪಟೇಲ್ ಉದ್ದೇಶಪೂರ್ವಕವಾಗಿ ಅಣಕು ಕಾರು ಅಪಘಾತಗಳನ್ನು ನಡೆಸಿದ್ದನೆಂಬುದನ್ನು ಪತ್ತೆದಾರರು ಪತ್ತೆಹಚ್ಚಿದರು. ತನ್ನ ಕಕ್ಷಿದಾರನ ಕಾರು ಹಿಂಭಾಗದಲ್ಲಿದ್ದಾಗ ಪಟೇಲ್ ದಿಢೀರ್ ಬ್ರೇಕ್ ಹಾಕುತ್ತಿದ್ದರಿಂದ ಹಿಂದಿದ್ದ ವಾಹನ ಡಿಕ್ಕಿ ತಪ್ಪಿಸಲು ಸಾಧ್ಯವಾಗುತ್ತಿರಲಿಲ್ಲ. ಬಳಿಕ ವಿಮಾದಾರರು ಗಾಯ, ಕಾನೂನು ದಾವೆಯ ಶುಲ್ಕ, ಕೆಲವು ಬಾರಿ ಕಾರಿಗೆ ಹಾನಿಯಾದ ಬಗ್ಗೆ ಪರಿಹಾರ ಕೂಡ ಪಡೆಯುತ್ತಿದ್ದರು.
ಸಂಬಂಧಿತ ಮಾಹಿತಿ ಹುಡುಕಿ