ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೇಪಾಳ:ಮುಷ್ಕರ ಕೈಬಿಡಿ - ಮಾವೊಗಳಿಗೆ ಪ್ರಧಾನಿ ಮನವಿ (Maoists | Nepal | Kathmandu | Madhav Kumar | CPN)
Feedback Print Bookmark and Share
 
ಕಳೆದ ಮೇ ತಿಂಗಳಲ್ಲಿ ಮಾಜಿ ಸೇನಾ ಮುಖ್ಯಸ್ಥರನ್ನು ಮರಳಿ ನೇಮಕ ಮಾಡಿರುವ ಅಧ್ಯಕ್ಷರ ನಿರ್ಧಾರಕ್ಕೆ ಸಂಬಂಧಿಸಿದ ವಿವಾದ ಕೈಬಿಟ್ಟು ಮಾವೋವಾದಿಗಳು ಸರ್ಕಾರಕ್ಕೆ ನೆರವಿನ ಹಸ್ತ ಚಾಚಬೇಕೆಂದು ಪ್ರಧಾನಿ ಮಾಧವ್ ಕುಮಾರ್ ವಿನಂತಿಸಿಕೊಂಡಿದ್ದಾರೆ.

ನವೆಂಬರ್ 1ರಿಂದ ಆರಂಭಿಸಲು ಯೋಜಿಸಿರುವ ಮುಷ್ಕರ ಕೈಬಿಟ್ಟು ಯುಸಿಪಿಎನ್(ಮಾವೊ) ರಾಜಕೀಯ ಒಪ್ಪಂದಕ್ಕೆ ಮುಂದಾಗಬೇಕೆಂದು ಕೇಳಿಕೊಂಡಿದ್ದಾರೆ.

ವಜಾಗೊಂಡಿದ್ದ ಸೇನಾ ಮುಖ್ಯಸ್ಥ ರುಕ್ಮಾಂಗದ ಕಟವಾಲ್ ಮರಳಿ ಅವರನ್ನು ನೇಮಕ ಮಾಡಿರುವ ಅಧ್ಯಕ್ಷ ರಾಂ ಬರಾನ್ ಯಾದವ್ ಅವರ ನಿರ್ಣಯ ಕುರಿತು ಸಂಸತ್‌ನಲ್ಲಿ ಚರ್ಚೆ ಕೈಗೊಳ್ಳಲು ಸರ್ಕಾರ ವಿಫಲವಾದರೆ, ದೇಶಾದ್ಯಂತ ಚಳವಳಿ ಆರಂಭಿಸುವುದಾಗಿ ಮಾಜಿ ಬಂಡುಕೋರರು ಬೆದರಿಕೆ ಒಡ್ಡಿದ್ದಾರೆ.

22ಪಕ್ಷಗಳ ಸಮ್ಮಿಶ್ರ ಸರ್ಕಾರದೊಂದಿಗೆ ಮಾವೋವಾದಿಗಳು ಸೇರ್ಪಡೆಯಾಗಲಿ. ಬೀದಿ ಹೋರಾಟದಿಂದ ಏನು ಸಾಧಿಸಲಾಗದು. ಪ್ರಸ್ತುತ ಸಮಸ್ಯೆಯ ಪರಿಹಾರಕ್ಕೆ ರಾಜೀಯಾಗುವುದೊಂದೇ ಉತ್ತರ ಎಂದು ಪ್ರಧಾನಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ