ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಂದು ಹೀರೋ, ಇಂದು ಝೀರೋವಾದ ವಿಜ್ಞಾನಿ (South Korean | scientist | cloning fraud)
Feedback Print Bookmark and Share
 
ಒಂದು ಕಾಲದಲ್ಲಿ ದಕ್ಷಿಣ ಕೊರಿಯಾದ ಹೀರೋ ಎಂದು ಪರಿಗಣಿಸ್ಪಲ್ಪಟ್ಟಿದ್ದ, ಕ್ಲೋನಿಂಗ್ ಸಂಶೋಧನೆಯಲ್ಲಿ ಯಶಸ್ಸು ಸಾಧಿಸಿರುವ ವಿಜ್ಞಾನಿಯೊಬ್ಬರಿಗೆ ವಂಚನೆ ಆಪಾದನೆ ಮೇಲೆ ಶಿಕ್ಷೆ ವಿಧಿಸಲಾಗಿದೆ.

ಹ್ವಾಂಗ್ ವೂ-ಸುಕ್ ಎಂಬ 56ರ ಹರೆಯದ ವಿಜ್ಞಾನಿ ಅವರು ತಮ್ಮ ಮೇಲಿದ್ದ ವಂಚನೆಯ ಪ್ರಮುಖ ಆರೋಪಿದಿಂದ ಮುಕ್ತವಾಗಿದ್ದರೂ, ಸಂಶೋಧನಾ ನಿಧಿಯ ದುರ್ಬಳಕೆ ಹಾಗೂ ಮಾನವ ಅಂಡಾಣುಗಳನ್ನು ಕಾನೂನುಬಾಹಿರವಾಗಿ ಖರೀದಿ ಮಾಡಿರುವ ಆಪಾದನೆಗಾಗಿ ಶಿಕ್ಷೆಗೀಡಾಗಿದ್ದಾರೆ.

ಸುಕ್ ಅವರಿಗೆ ನಾಲ್ಕುವರ್ಷಗಳ ಶಿಕ್ಷೆ ವಿಧಿಸಬೇಕು ಎಂದು ವಾದಿಸಲಾಗಿದ್ದರೂ, ನ್ಯಾಯಾಧೀಶ ಬಯೇ ಕಿ-ಯಿಯೋಲ್ ಅವರು, ಸುಕ್‌ಗೆ ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪವಿರುವ ಕಾರಣ ಮೂರು ವರ್ಷಗಳ ಕಾಲ ಅವರು ತೊಂದರೆ ಮುಕ್ತರಾಗಿದ್ದರೆ ಅವರಿಗೆ ಜೈಲು ವಾಸದ ಸಮಯದಲ್ಲಿ ವಿನಾಯಿತಿ ತೋರಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ