ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಂಗೋಲಿಯಾದ ಪ್ರಧಾನಿ ಬಾಯರ್ ರಾಜೀನಾಮೆ (Mongolia | PM | Bayar Sanjaa | Resignation)
Feedback Print Bookmark and Share
 
ಮಂಗೋಲಿಯಾ ಪ್ರಧಾನಿ ಬಾಯಾರ್ ಸಂಜಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ಆರೋಗ್ಯದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ ಎಂಬುದಾಗಿ ಆಡಳಿತ ಪಕ್ಷಗಳು ಹೇಳಿವೆ.

ಸಂಜಾ ಅವರ ಕೋರಿಕೆಯನ್ನು ಸ್ಪೀಕರ್ ಅವರು ಇನ್ನಷ್ಟೆ ಪರಿಗಣಿಸಬೇಕಾಗಿದೆ ಎಂಬುದಾಗಿ ಪಕ್ಷದ ಮುಖ್ಯಸ್ಥರೊಬ್ಬರು ಹೇಳಿದ್ದಾರೆ.

ರಾಷ್ಟ್ರದಲ್ಲಿನ ರಾಜಕೀಯ ಪರಿಸ್ಥಿತಿಯ ಕುರಿತು ಚರ್ಚಿಸಲು ಬುಧವಾರದಂದು ಪಕ್ಷದ ನಾಯಕರು ಸಭೆ ಸೇರಲಿದ್ದಾರೆ ಎಂಬುದಾಗಿ ಮಂಗೋಲಿಯಾ ಪೀಪಲ್ಸ್ ರೆವಲ್ಯೂಶನರಿ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಕುರೇಲ್‌ಸುಕ್ ಉಖಾ ಹೇಳಿದ್ದಾರೆ.

ಹೆಪಟೈಟಿಸ್ ಸಿ ಸೋಂಕಿನಿಂದಾಗಿ ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ಸಂಜಾ ಅವರು ಈ ಹಿಂದೆ ವಿದೇಶಿ ಚಿಕಿತ್ಸೆ ಪಡೆದಿದ್ದರು. ಅವರನ್ನು ಕಳೆದ ವಾರ ಮತ್ತೆ ಮಂಗೋಲಿಯಾ ಆಸ್ಪತ್ರೆಗೆ ಸೇರಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ