ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಫ್ಘಾನ್ ಆಪಘಾತದಲ್ಲಿ 14 ಅಮೆರಿಕನ್ನರ ಸಾವು (helicopter | crashes | Afghanistan | Americans)
Feedback Print Bookmark and Share
 
ಆಫ್ಘಾನಿಸ್ತಾನದಲ್ಲಿ ಸೋಮವಾರ ಸಂಭವಿಸಿರುವ ಪ್ರತ್ಯೇಕ ಹೆಲಿಕಾಪ್ಟರ್ ಅಪಘಾತಗಳಲ್ಲಿ 14 ಮಂದಿ ಅಮರಿಕನ್ನರು, ಏಳು ಮಂದಿ ಪ್ಯಾರಾಚೂಟ್ ಜಿಗಿತದ ತರಬೇತಿ ಪಡೆದ ಸೈನಿಕರು ಮತ್ತು ಮೂವರು ನಾಗರಿಕರು ಮೃತರಾಗಿದ್ದಾರೆ.

ಪಶ್ಚಿಮ ಆಫ್ಘಾನಿಸ್ತಾನದಲ್ಲಿ ಸರ್ಕಾರಕ್ಕಾಗಿ ಕೆಲಸ ಮಾಡುತ್ತಿದ್ದಾಗ ಹೆಲಿಕಾಪ್ಟರ್ ನೆಲಕ್ಕೆ ಅಪ್ಪಳಿಸಿದ ಪರಿಣಾಮವಾಗಿ 7 ಮಂದಿ ಅಮೆರಿಕನ್ ಸೈನಿಕರು ಮತ್ತು ಮೂವರು ನಾಗರಿಕರು ನಸುಕಿನ ವೇಳೆ ಮೃತರಾದರು. ಈ ಘಟನೆಯಲ್ಲಿ 12 ಮಂದಿ ಅಮೆರಿಕನ್ನರು ಮತ್ತು 14 ಮಂದಿ ಆಫ್ಘಾನ್ ಪ್ರಜೆಗಳು ಗಾಯಗೊಂಡಿದ್ದಾರೆ.

ಇದಕ್ಕೆ ಮುನ್ನ ದಕ್ಷಿಣ ಆಫ್ಘಾನಿಸ್ತಾನದಲ್ಲಿ ಎರಡು ಅಮೆರಿಕನ್ ಹೆಲಿಕಾಪ್ಟರ್‌ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮವಾಗಿ ನಾಲ್ವರು ಅಮೆರಿಕನ್ ಸಿಬ್ಬಂದಿ ಮೃತರಾದರು. ಆಕಾಶದಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ಇಬ್ಬರು ಅಮೆರಿಕನ್ ಯೋಧರು ಗಾಯಗೊಂಡರು.
ಸಂಬಂಧಿತ ಮಾಹಿತಿ ಹುಡುಕಿ