ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸುಳ್ಳು ಹೇಳಿದ ವಿಜ್ಞಾನಿಗೆ 3ವರ್ಷ ಜೈಲು ಶಿಕ್ಷೆ! (Soal | Koriea | Sciencist | America)
Feedback Print Bookmark and Share
 
ಮನುಷ್ಯರ ಆಕರ ಕೋಶ ಪತ್ತೆ ಹಚ್ಚಿದ್ದಾಗಿ ಹೇಳಿ ಜಗತ್ತನ್ನು ಒಂದಿಷ್ಟು ಕಾಲ ಕುತೂಹಲದಲ್ಲಿ ತೇಲಿಸಿದ್ದ ದಕ್ಷಿಣ ಕೊರಿಯದ ವಿಜ್ಞಾನಿ ಹ್ವಾಂಗ್ ವೂ ಸುಕ್ ಅವರಿಗೆ ನ್ಯಾಯಾಲಯವೊಂದು 3ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಸಂಶೋಧನಾ ಹಣವನ್ನು ಅಕ್ರಮವಾಗಿ ಸ್ವಂತಕ್ಕೆ ಬಳಸಿಕೊಂಡ ಹಾಗೂ ಮಾನವ ಅಂಡಾಣುಗಳನ್ನೇ ಪ್ರಯೋಗಕ್ಕಾಗಿ ಬಳಸಿಕೊಂಡು ನೈತಿಕ ತಪ್ಪೆಸಗಿದ ಕಾರಣಕ್ಕಾಗಿ ಸುಕ್ ಮೇಲೆ ಈ ಮೊದಲು ವಿಧಿಸಿದ್ದ 2ವರ್ಷಗಳ ಶಿಕ್ಷೆಯನ್ನು ಕೋರ್ಟ್ ಮೂರು ವರ್ಷಗಳಿಗೆ ಹೆಚ್ಚಿಸಿತು. ಸುಕ್ ವಿರುದ್ಧ 2006ರ ಜೂನ್‌ನಿಂದೀಚೆಗೆ ವಿಚಾರಣೆ ನಡೆಯುತ್ತಿದೆ.

2004ರಲ್ಲಿ ಹ್ವಾಂಗ್ ಪ್ರಸಿದ್ಧಿಗೆ ಬಂದಿದ್ದರು. ಅಮೆರಿಕದ ಸೈನ್ಸ್ ನಿಯತಕಾಲಿಕದಲ್ಲಿ ತಾವು ಮಾನವ ಆಕರ ಕೋಶ ಕಂಡುಹಿಡಿದುದಾಗಿ ಹೇಳಿ ಜಗತ್ತು ನಿಬ್ಬೆರಗಾಗುವಂತೆ ಮಾಡಿದ್ದರು. ಮರು ವರ್ಷ ಅವರು ಅದೇ ಪತ್ರಿಕೆಯಲ್ಲಿ ತಮ್ಮ ತಂಡದ ಮುಂದುವರಿದ ಸಂಶೋಧನೆಯ ಬಗ್ಗೆ ಬರೆದಿದ್ದರು. ಆದರೆ 2005ರ ನವೆಂಬರ್‌ನಲ್ಲಿ ಅವರ ಸಂಶೋಧನೆಗಳ ನಿಜ ಬಣ್ಣ ಬಯಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ