ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೆಲಿಕಾಪ್ಟರ್ ದುರಂತ: 14 ಅಮೆರಿಕನ್ನರು ಬಲಿ (America | Helicaptor | Kabul | Pakistan)
Feedback Print Bookmark and Share
 
ಅಫ್ಘಾನಿಸ್ತಾನದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಎರಡು ಪ್ರತ್ಯೇಕ ಹೆಲಿಕಾಪ್ಟರ್ ದುರಂತದಲ್ಲಿ ಒಟ್ಟು 14ಅಮೆರಿಕನ್ನರು ಸಾವನ್ನಪ್ಪಿದ್ದಾರೆ. ಅವರಲ್ಲಿ ಏಳು ಸೈನಿಕರು ಹಾಗೂ ಮೂವರು ನಾಗರಿಕರು ಸೇರಿದ್ದಾರೆ.

ಪಶ್ಚಿಮ ಅಫ್ಘಾನಿಸ್ತಾನ ಪ್ರದೇಶದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಏಳು ಜನ ಸೈನಿಕರು ಹಾಗೂ ಮೂವರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಮೆರಿಕದ ಹೇಳಿಕೆ ತಿಳಿಸಿದೆ. ಘಟನೆಯಲ್ಲಿ 12ಜನ ಅಮೆರಿಕನ್ನರು ಹಾಗೂ 14 ಜನ ಅಫ್ಘಾನಿಸ್ತಾನಿ ಪ್ರಜೆಗಳು ಗಾಯಗೊಂಡಿದ್ದಾರೆ ಎಂದೂ ವರದಿ ವಿವರಿಸಿದೆ.

ಅಂತೆಯೇ ಇದಕ್ಕೂ ಮುನ್ನ ದಕ್ಷಿಣ ವಜೀರಿಸ್ತಾನದಲ್ಲಿ ನಡೆದ ಮತ್ತೊಂದು ಹೆಲಿಕಾಪ್ಟರ್ ದುರಂತದಲ್ಲಿ ಇತರೆ ನಾಲ್ವರು ಅಮೆರಿಕ ಅಧಿಕಾರಿಗಳು ಸತ್ತಿದ್ದಾರೆ. ಘಟನೆಯಲ್ಲಿ ಇಬ್ಬರು ಅಮೆರಿಕ ಪ್ರಜೆಗಳು ಗಾಯಗೊಂಡಿದ್ದಾರೆಂದು ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ