ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಫ್ಘಾನ್ ಸ್ಥಿರತೆಗೆ ಅಮೆರಿಕ ಬದ್ಧವಾಗಿದೆ: ಒಬಾಮ (military | Afghanistan | Barack Obama | US | America)
Feedback Print Bookmark and Share
 
ಉಗ್ರರನ್ನು ಮಟ್ಟಹಾಕುವ ನಿಟ್ಟಿನಲ್ಲಿ ಅಫ್ಘಾನಿಸ್ತಾನಕ್ಕೆ ಇನ್ನಷ್ಟು ಅಮೆರಿಕದ ಸೈನಿಕ ಪಡೆಯನ್ನು ಕಳುಹಿಸಲು ಕುರಿತು ನಿರ್ಧಾರ ಕೈಗೊಂಡಿಲ್ಲ ಎಂದು ಅಧ್ಯಕ್ಷ ಬರಾಕ್ ಒಬಾಮ ತಿಳಿಸಿದ್ದಾರೆ.

ಭಯಹುಟ್ಟಿಸುವ ನಿಟ್ಟಿನಲ್ಲಿಯೂ ತಾನು ಯಾವತ್ತೂ ಅಫ್ಘಾನಿಸ್ತಾನಕ್ಕೆ ಹೆಚ್ಚಿನ ಸೈನಿಕರನ್ನು ರವಾನಿಸುವ ನಿರ್ಧಾರ ಕೈಗೊಳ್ಳಲಾರೆ. ಅಗತ್ಯವಿಲ್ಲದೆ ಅಂತಹ ನಿರ್ಧಾರ ತೆಗೆದುಕೊಳ್ಳಲಾರೆ ಎಂದಿರುವ ಅವರು, ಸುಮಾರು 3,500 ಸೈನಿಕರ ಪಡೆಯನ್ನು ಉದ್ದೇಶಿಸಿ ಮಾತನಾಡಿರುವುದಾಗಿ ಕ್ಸಿನ್‌ಹುವಾ ವರದಿ ಹೇಳಿದೆ.

ಇದು ತುಂಬಾ ಮುಖ್ಯವಾದ ವಿಷಯ, ಅಫ್ಘಾನಿಸ್ತಾನದಲ್ಲಿ ಯಾವ ತೆರನಾದ ನಿರ್ಧಾರ ಕೈಗೊಳ್ಳಬೇಕು ಎಂಬುದು ಮುಂದಿನ ಹೆಜ್ಜೆಯಾಗಿದೆ ಎಂದರು. ಆ ನಿಟ್ಟಿನಲ್ಲಿ ಅಮೆರಿಕದ ಜನರನ್ನು ರಕ್ಷಿಸುವಲ್ಲಿ ಸೈನಿಕರನ್ನು ನಿಯೋಜಿಸುವ ಬಗ್ಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಫ್ಘಾನಿಸ್ತಾನಕ್ಕೆ ಮತ್ತಷ್ಟು ಸೈನಿಕರ ಅಗತ್ಯವಿದ್ದಲ್ಲಿ ಅದನ್ನು ಪೂರೈಸಲಾಗುವುದು ಎಂಬುದಾಗಿಯೂ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಅಫ್ಘಾನಿಸ್ತಾನದ ಸ್ಥಿರತೆಗೆ ಅಮೆರಿಕ ಯಾವಾಗಲೂ ಬದ್ದವಾಗಿದೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ