ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕೆಲವು ಹೆಚ್ಚಿನ ಜವಾಬ್ದಾರಿ ಪ್ರಧಾನಿಗೆ: ಜರ್ದಾರಿ ನಿರ್ಧಾರ (Zardari | Islamabad | Pakistan | Zaman Kaira | PML-N)
Feedback Print Bookmark and Share
 
PTI
ಪಾಕಿಸ್ತಾನ ವಿಧಾನಸಭೆಗೆ ಹಾಗೂ ಪ್ರಮುಖ ಸೇವೆಗಳ ನಿಯೋಜನೆಗೆ ಸಂಬಂಧಿಸಿದ ಅಧ್ಯಕ್ಷರ ಅಧಿಕಾರವನ್ನು ಪಾಕ್ ಅಧ್ಯಕ್ಷರಾದ ಅಸಿಫ್ ಅಲಿ ಜರ್ದಾರಿಯವರು ಪಾಕ್ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅವರಿಗೆ ಒಪ್ಪಿಸಲು ನಿರ್ಧಾರ ಕೈಗೊಂಡಿದ್ದಾರೆ.

ಜರ್ದಾರಿಯವರು ಗಿಲಾನಿ ಅವರನ್ನು ಭೇಟಿ ಮಾಡಿದ್ದು, ಪ್ರಸ್ತುತ ದೇಶದಲ್ಲಿನ ಭದ್ರತೆ ಮತ್ತು ರಾಜಕೀಯ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಫೆಡರಲ್ ಮಾಹಿತಿ ಸಚಿವ ಖಮಾರ್ ಜಮಾನ್ ಕೈರಾ ಇಲ್ಲಿನ ಖಾಸಗಿ ಟಿವಿ ವಾಹಿನಿಯೊಂದರಲ್ಲಿ ಹೇಳಿದ್ದಾರೆ.

ಈ ಮಾತುಕತೆಯಲ್ಲಿ ಅಧ್ಯಕ್ಷರು ತಮ್ಮ ಕೆಲವೊಂದು ಜವಾಬ್ದಾರಿಗಳನ್ನು ಪಾರ್ಲಿಮೆಂಟ್‌ಗೆ ಒಪ್ಪಿಸಲು ತೀರ್ಮಾನಿಸಿರುವುದಾಗಿ ಕೈದಾ ತಿಳಿಸಿದರು.

ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರ ನೀಡುತ್ತ ಮಾತನಾಡಿದ ಅವರು, ಜರ್ದಾರಿ ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್‌ನ ಮುಖ್ಯಸ್ಥ ನವಾಜ್ ಅವರು ಪ್ರಜಾಪ್ರಭುತ್ವದ ಪ್ರಣಾಳಿಕೆಯ ಕರಡು ಪ್ರತಿಯನ್ನು ತಯಾರಿಸಲು ಪರಸ್ಪರ ಒಪ್ಪಿಕೊಂಡಿರುವುದಾಗಿ ಹೇಳಿಕೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ