ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನಾಸಾದಿಂದ ಏರಿಸ್-1ರಾಕೆಟ್ ಉಡ್ಡಯನ ಯಶಸ್ವಿ (Nasa | Rocket | America | A-1)
Feedback Print Bookmark and Share
 
ಭವಿಷ್ಯದ ಚಂದ್ರಯಾನ ಯೋಜನೆ ಹಾಗೂ ಈಗಿರುವ ಬಾಹ್ಯಾಕಾಶ ನೌಕೆಗಳಿಗೆ ಬದಲಾಗಿ ಮುಂದಿನ ದಿನಗಳಲ್ಲಿ ಬಳಸಲು ಉದ್ದೇಶಿಸಲಾಗಿರುವ ಏರಿಸ್-1ರಾಕೆಟ್ ಅನ್ನು ನಾಸಾ ಬುಧವಾರ ಯಶಸ್ವಿಯಾಗಿ ಪ್ರಯೋಗಿಸಿದೆ.

3.27ಅಡಿ ಉದ್ದದ, 100ಆನೆ ತೂಕದ ರಾಕೆಟ್‌ನ ಯಶಸ್ವಿ ಪ್ರಯೋಗ ನಾಸಾದ ಭವಿಷ್ಯದ ಯೋಜನೆಗಳಿಗೆ ಮುನ್ನುಡಿ ಬರೆದಿದೆ. ಸುಮಾರು 30ವರ್ಷಗಳ ಬಳಿಕ ನಾಸಾ ಹೊಸ ಮಾದರಿಯ ರಾಕೆಟ್ ಒಂದನ್ನು ಸಿದ್ದಪಡಿಸಿ ಪ್ರಯೋಗಕ್ಕೆ ಒಳಪಡಿಸಿದ್ದರಿಂದ ಈ ಉಡ್ಡಯನ ಭಾರಿ ಕುತೂಹಲ ಕೆರಳಿಸಿತ್ತು.

ಈ ರಾಕೆಟ್‌ನಲ್ಲಿ ಯಾವುದೇ ಉಪಗ್ರಹ ಅಥವಾ ಬಾಹ್ಯಾಕಾಶ ಯಾನಿಗಳು ಇರಲಿಲ್ಲ. ಅ.27ರಂದೇ ರಾಕೆಟ್ ಉಡ್ಡಯನಕ್ಕೆ ಯೋಜಿಸಲಾಗಿತ್ತಾದರೂ ಹವಾಮಾನದ ವೈಪರೀತ್ಯದಿಂದಾಗಿ ಉಡ್ಡಯನವನ್ನು 2ದಿನ ಮುಂದೂಡಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಾಸಾ, ರಾಕೆಟ್, ಚಂದ್ರಯಾನ, ಅಮೆರಿಕ