ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸೀಸ್: ಭಾರತೀಯ ಬಾಲೆಗೆ 'ಬುದ್ದಿವಂತೆ ಪ್ರಶಸ್ತಿ ಕಿರೀಟ' (Australia | brainiest student | India | Uma Jha,)
Bookmark and Share Feedback Print
 
ಒಂದೆಡೆ ಆಸ್ಟ್ರೇಲಿಯಾ ನೆಲದಲ್ಲಿ ಭಾರತೀಯರ ಮೇಲೆ ಜನಾಂಗೀಯ ದಾಳಿ ನಡೆಯುತ್ತಿದ್ದರೆ, ಮತ್ತೊಂದೆಡೆ ಭಾರತೀಯ ಮೂಲಕ ಮೂಲದ 14ರ ಬಾಲೆ ಆಸ್ಟ್ರೇಲಿಯಾದಲ್ಲಿ ನರವಿಜ್ಞಾನ ಜ್ಞಾನ ಪರೀಕ್ಷೆ ಸ್ಪರ್ಧೆಯಲ್ಲಿ ಬುದ್ದಿವಂತ (ಬ್ರೈನಿಯೆಸ್ಟ್) ಪ್ರಶಸ್ತಿಯ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ.

ಪೆರ್ಥ್ಸ್ ಶೆನ್‌ಟನ್ ಕಾಲೇಜಿನ ಭಾರತೀಯ ಮೂಲದ ಉಮಾ ಜಾ ನರವಿಜ್ಞಾನ ಜ್ಞಾನ ಪರೀಕ್ಷೆಯ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾಳೆ. ಆಸ್ಟ್ರೇಲಿಯಾದಾ ದ್ಯಂತ ಸುಮಾರು 4ಸಾವಿರ ಸ್ಪರ್ಧಾಳುಗಳು ಭಾಗವಹಿಸಿದ್ದು, ಕೊನೆಗೂ ಜಾ ಪ್ರಶಸ್ತಿಯನ್ನು ತನ್ನ ಮಡಲಿಗೆ ಹಾಕಿಕೊಂಡಿದ್ದಾಳೆ.

2010 ಆಸ್ಟ್ರೇಲಿಯನ್ ಬ್ರೈನ್ ಬೀ ಚಾಲೆಂಚ್ ಹೆಸರಿನಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಈ ಸ್ಪರ್ಧೆಯಲ್ಲಿ, ಬುದ್ದಿವಂತಿಕೆ, ಜ್ಞಾಪಕಶಕ್ತಿ, ಭಾವಪರವಶತೆ, ನಿದ್ದೆ, ವ್ಯಾಧಿ ಹಾಗೂ ಹಠಾತ್ ಹೊಡೆತ ವಿಷಯಗಳು ಒಳಗೊಂಡಿತ್ತು.

ಅಲ್ಲದೇ, ಉಮಾ ನ್ಯಾಶನಲ್ ಫೈನಲ್‌ಗಾಗಿ ಉಳಿದ ರಾಜ್ಯಗಳ ವಿಜೇತ ಸ್ಪರ್ಧಾಳುಗಳೊಂದಿಗೆ ಮತ್ತೆ ಅಖಾಡಕ್ಕೆ ಇಳಿಯಲಿದ್ದಾರೆ. ಇದರಲ್ಲಿ ಬ್ರೈನ್ ಟೀಸಿಂಗ್ ಆನೋಟಮಿ ಪರೀಕ್ಷೆ, ವೈದ್ಯರು, ರೋಗಿಯ ರೋಗ ಪರೀಕ್ಷೆ ಮತ್ತು ನರವಿಜ್ಞಾನದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ನಾನು ಯಾವತ್ತೂ ಈ ಮೊದಲು ನ್ಯಾಷನಲ್ ಸೈನ್ಸ್ ಸ್ಪರ್ಧೆಯಲ್ಲಿ ಜಯಗಳಿಸಿರಲಿಲ್ಲವಾಗಿತ್ತು, ನಿಜಕ್ಕೂ ಇದು ಅಚ್ಚರಿ ತಂದಿದೆ ಎಂದು ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಜೇತಳಾದ ನಂತರ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ನ್ಯೂಸ್ ಡಾಟ್ ಕಾಮ್ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ