ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕರಾಚಿ: 270 ಬಾಲಕಿಯರಿಗೆ ಸೂಸೈಡ್ ಬಾಂಬರ್ ತರಬೇತಿ! (Afghan Taliban | Karachi | suicide bombers | Pakistan)
Bookmark and Share Feedback Print
 
ಬಂಧಿತ ಪಾಕಿಸ್ತಾನ್ ತಾಲಿಬಾನ್ ಕಮಾಂಡರ್ ಅಬ್ದುಲ್ಲಾ ಅಲಿಯಾಸ್ ಅಬು ವಾಖಸ್ ಸುಮಾರು 270 ಅಪ್ರಾಪ್ತ ಬಾಲಕಿಯರನ್ನು ಆತ್ಮಹತ್ಯಾ ಬಾಂಬರ್‌ಗಳನ್ನಾಗಿ ತಯಾರು ಮಾಡಿರುವುದಾಗಿ ಪಾಕಿಸ್ತಾನದ ಅಪರಾಧ ತನಿಖಾ ದಳ ಗಂಭೀರವಾಗಿ ಆರೋಪಿಸಿದೆ.

ಬಾಜುರ್ಸ್ ನೈಮತುಲ್ಲಾ ಸಂಘಟನೆಯ ತಾಲಿಬಾನ್ ಕಮಾಂಡರ್ ಆಗಿರುವ ಅಬ್ದುಲ್ಲಾನನ್ನು ಕರಾಚಿಯ ಸಾಫೋರಾ ಗೋಥ್ ಚೌರಂಗಿಯಲ್ಲಿ ಬಂಧಿಸಲಾಗಿತ್ತು ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

ರಹಸ್ಯ ಸಂಘಟನೆಯ ಸದಸ್ಯರನ್ನು ಭೇಟಿಯಾಗಲು ನಗರಕ್ಕೆ ಆಗಮಿಸಿರುವುದಾಗಿ ವಿಚಾರಣೆ ವೇಳೆ ಅಬ್ದುಲ್ಲಾ ತಿಳಿಸಿರುವುದಾಗಿ ಡೈಲಿ ಟೈಮ್ಸ್ ವರದಿ ಅಧಿಕಾರಿಗಳು ಹೇಳಿರುವುದಾಗಿ ವಿವರಿಸಿದೆ.

ಆತ ಕರಾಚಿಯಲ್ಲಿ 13ರಿಂದ 16ರ ವಯೋಮಾನದ ಸುಮಾರು 270 ಹುಡುಗಿಯರಿಗೆ ಆತ್ಮಹತ್ಯಾ ದಾಳಿ ನಡೆಸಲು ತರಬೇತಿ ನೀಡಿರುವುದಾಗಿ ತನಿಖೆ ವೇಳೆ ಬಾಯ್ಬಿಟ್ಟಿರುವುದಾಗಿ ತಿಳಿಸಿದ್ದಾರೆ.

ಅಲ್ಲದೇ ದೇಶದಲ್ಲಿ ಭದ್ರತಾ ಪಡೆ, ತಪಾಸಣಾ ಕೇಂದ್ರದ ಮೇಲಿನ ದಾಳಿ ಸೇರಿದಂತೆ ಹಲವಾರು ಅಪರಾಧ ಕೃತ್ಯ ನಡೆಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ