ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕಾದ ತೆರಿಗೆ ಕಟ್ಟಡಕ್ಕೆ ವಿಮಾನ ಡಿಕ್ಕಿ; ಆಕ್ರೋಶಿತ ಕೃತ್ಯ (Texas | Plane crash | Austin | Joseph Andrew Stack)
Bookmark and Share Feedback Print
 
ಸರಕಾರದ ವಿರುದ್ಧ ಕೋಪಗೊಂಡಿದ್ದ ಕಂಪ್ಯೂಟರ್ ಇಂಜಿನಿಯರ್ ಓರ್ವ ಟೆಕ್ಸಾಸ್‌ನ ಆಸ್ಟಿನ್ ಎಂಬಲ್ಲಿ ಗುರುವಾರ ಮುಂಜಾನೆ ತನ್ನ ವಿಮಾನವನ್ನು ಡಿಕ್ಕಿ ಹೊಡೆಸಿ ಕಟ್ಟಡಕ್ಕೆ ಹಾನಿ ಮಾಡಿದ್ದಾನೆ.

ಆರಂಭದಲ್ಲಿ ಇದನ್ನು ಭಯೋತ್ಪಾದಕ ದಾಳಿ ಎಂದು ಶಂಕಿಸಲಾಗಿತ್ತಾದರೂ ನಂತರ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಆತ ಉತ್ತರ ಆಸ್ಟಿನ್‌ನ ಜೋಸೆಫ್ ಆಂಡ್ರ್ಯೂ ಸ್ಟಾಕ್ ಎಂದು ತಿಳಿಸಿದ್ದಾರೆ. ಪುಟ್ಟ ವಿಮಾನವನ್ನು ಚಲಾಯಿಸುತ್ತಿದ್ದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಆತ ಟೆಕ್ಸಾಸ್‌ನ ತೆರಿಗೆ ಇಲಾಖೆ ಮೇಲೆ ಕೋಪಗೊಂಡಿದ್ದ. ಇದೇ ಕಾರಣಕ್ಕಾಗಿ ಸುಮಾರು 200 ನೌಕರರು ಕೆಲಸ ಮಾಡುವ ಐಆರ್ಎಸ್ ಕಟ್ಟಡಕ್ಕೆ ವಿಮಾನವನ್ನು ಡಿಕ್ಕಿ ಹೊಡೆಸಿದ್ದಾನೆ. ಆಗಷ್ಟೇ ಉದ್ಯೋಗಿಗಳು ಕಚೇರಿಗೆ ಆಗಮಿಸುತ್ತಿದ್ದ ಕಾರಣ ಹೆಚ್ಚಿನ ಅಪಾಯ ನಡೆದಿಲ್ಲ. ಆದರೆ ಘಟನೆಯಿಂದ ಕಟ್ಟಡದ ಒಂದು ಭಾಗಕ್ಕೆ ಬೆಂಕಿ ಹತ್ತಿಕೊಂಡದ್ದರಿಂದ ಕನಿಷ್ಠ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಏಳು ಮಹಡಿಗಳ ಈ ಕಟ್ಟಡದ ದಾಳಿಯ ಹಿಂದೆ ಭಯೋತ್ಪಾದನೆಯಿಲ್ಲ ಎಂದು ತಾವು ಕಂಡುಕೊಂಡಿರುವುದಾಗಿ ಅಮೆರಿಕಾ ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಸುಲಭವಾಗಿ ಖಾಸಗಿ ಪುಟ್ಟ ವಿಮಾನವನ್ನು ಡಿಕ್ಕಿ ಹೊಡೆಸಿರುವುದು ಆತಂಕ ತಂದಿದೆ. ಇದೇ ರೀತಿ ದೇಶೀಯ ಭಯೋತ್ಪಾದಕರು ದಾಳಿ ನಡೆಸಿದರೂ ಅಮೆರಿಕಾ ತಡೆಯಲು ವಿಫಲವಾಗಬಹುದು ಎಂಬ ಅಭಿಪ್ರಾಯಗಳು ಬರುತ್ತಿವೆ.

ವಿಮಾನವನ್ನು ಕಟ್ಟಡಕ್ಕೆ ಢಿಕ್ಕಿಗೊಳಿಸುವ ಸ್ವಲ್ಪ ಮೊದಲಷ್ಟೇ ಆತನ ಮನೆ ಬೆಂಕಿಗಾಹುತಿಯಾಗಿದೆ. ಆತನಿಗೆ ಸಂಬಂಧಪಟ್ಟ ವೆಬ್‌ಸೈಟಿನಲ್ಲಿ ಸರಕಾರಿ ವಿರೋಧಿ ಸಂದೇಶಗಳಿರುವುದನ್ನು ಇದೀಗ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. 'ಇದೊಂದೇ ಉತ್ತರ' ಎಂದು ಹಿಂಸಾಚಾರವನ್ನು ಬಿಂಬಿಸುವ ಸಂದೇಶ ಆತನ ವೆಬ್‌ಸೈಟಿನಲ್ಲಿತ್ತು.

ಘಟನೆ ನಡೆಯುತ್ತಿದ್ದಂತೆ ರಾಷ್ಟ್ರದಾದ್ಯಂತ ಇದು ಭಯೋತ್ಪಾದನಾ ದಾಳಿ ಎಂದೇ ಪ್ರಚಾರವಾಗಿತ್ತು. ಕೆಲವು ವರ್ಷಗಳ ಹಿಂದೆ ಅಲ್‌ಖೈದಾ ಅಮೆರಿಕಾದ ವಿಶ್ವ ವ್ಯಾಪಾರ ಕೇಂದ್ರಕ್ಕೆ ವಿಮಾನಗಳನ್ನು ಢಿಕ್ಕಿ ಹೊಡೆಸಿ ಸಾವಿರಾರು ಮಂದಿಯನ್ನು ಬಲಿ ತೆಗೆದುಕೊಂಡ ಪ್ರಕರಣವನ್ನೇ ಇದು ನೆನಪಿಸುವಂತಿತ್ತು.
ಸಂಬಂಧಿತ ಮಾಹಿತಿ ಹುಡುಕಿ