ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 83ರ 'ಪ್ಲೇಬಾಯ್'ಗೆ 23ರ ತರುಣಿ ಹೊಸ ವಧು! (Playboy founder Hugh Hefner to Marry again?)
Bookmark and Share Feedback Print
 
ಪ್ಲೇಬಾಯ್ ಪತ್ರಿಕೆ ಗೊತ್ತಲ್ಲ? ಪಡ್ಡೆಗಳ ಕಪಾಟಿನಲ್ಲಿ ಅಡಗಿರುತ್ತಿದ್ದ ಅದೇ ಅಶ್ಲೀಲ ಪತ್ರಿಕೆ. ಈ ಪತ್ರಿಕೆಯ ಸಂಸ್ಥಾಪಕ ಹ್ಯೂಗ್ ಹೆಫ್ನರ್ ಮತ್ತೆ ಮದುವೆಯಾಗಲು ಹೊರಟಿದ್ದಾರೆ. ಅದರಲ್ಲೇನು ವಿಶೇಷ ಅಂತೀರಾ? ನಿಲ್ಲಿ, ವಿಶೇಷ ಸಂಗತಿ ಅಂದ್ರೆ, ವಧು, ಆತನ ಗರ್ಲ್ ಫ್ರೆಂಡ್ ಆತನಿಗಿಂತ ಬರೇ 60 ವರ್ಷ ಸಣ್ಣವಳು! ಆತನ ವಯಸ್ಸೀಗ 83 ವರ್ಷ ಅಷ್ಟೆ!

23ರ ಹರೆಯದ ಗರ್ಲ್ ಫ್ರೆಂಡ್ ಕ್ರಿಸ್ಟಲ್ ಹ್ಯಾರಿಸ್ ಜೊತೆಗಿರುವುದು ತನಗೆ ಹಿಂದೆಂದಿಗಿಂತಲೂ ಹೆಚ್ಚು ಆನಂದ ನೀಡುತ್ತಿದೆ ಎನ್ನುತ್ತಾರೆ 83ರ ಹೆಫ್ನರ್. ಇದನ್ನು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಗಳೂ ಇವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮದುವೆಯಾಗ್ತೀರಾ ಅಂತ ಕೇಳಿದಾಗ ಅವರು ಹೇಳಿದ್ದು: "ಖಂಡಿತಾ ಸಾಧ್ಯವಿದೆ. ನಾನು ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ನಾನವಳನ್ನು ಚೆನ್ನಾಗಿಯೇ ಪ್ರೀತಿಸುತ್ತಿದ್ದೇನೆ. ನೋಡೋಣ. ಈ ಸಂಬಂಧ ಈಗ ಎಷ್ಟು ಸಂತಸದಾಯಕವಿದೆಯೋ, ಅದು ಮುಂದುವರಿಯಬೇಕೆಂಬುದಷ್ಟೇ ನನ್ನ ಇಚ್ಛೆ. ನಾನು 20ರಲ್ಲಿದ್ದುದಕ್ಕಿಂತಲೂ ಹೆಚ್ಚು ರಂಜನೆಯನ್ನು ಈಗ ಅನುಭವಿಸುತ್ತಿದ್ದೇನೆ"!

ಈಗಾಗಲೇ ಮೂರು ಮದುವೆಯಾಗಿರುವ ಈ ಮಾಧ್ಯಮ-ದೈತ್ಯ ಹೆಫ್ನರ್, ಈಗ ತಮ್ಮ ಮನಸ್ಸು ಬದಲಾಯಿಸಿದ್ದಾರೆ. ಅಂದ್ರೆ ಇನ್ನು ಮದುವೆಯಾಗುವುದಿಲ್ಲ ಎಂದು ಶಪಥ ಮಾಡಿದ್ದರವರು. 'ನಂಗೆ ಮದುವೆಯಲ್ಲಿ ಸಾಕಷ್ಟು ಅದೃಷ್ಟವಿರಲಿಲ್ಲ. ನನ್ನ ಟ್ರ್ಯಾಕ್ ರೆಕಾರ್ಡ್ ಕೂಡ ಚೆನ್ನಾಗಿಲ್ಲ' ಎಂದು ಒಪ್ಪಿಕೊಂಡಿದ್ದಾರೆ ಹೆಫ್ನರ್.

ಒಂದುವರೆ ವರ್ಷದ ಹಿಂದೆ 23ರರ ಕ್ರಿಸ್ಟಲ್ ಜೊತೆ ಡೇಟಿಂಗ್ ಆರಂಭಿಸಿದ್ದರು ಹೆಫ್ನರ್. ಅದು ಕೂಡ, 20 ವರ್ಷದ ಕ್ರಿಸ್ತಿನಾ ಮತ್ತು ಕರಿಸ್ಸಾ ಶನೋನ್ ಎಂಬ ಅವಳಿ ತರುಣಿಯರೊಂದಿಗೆ ಸಂಬಂಧ ಇರುವಾಗಲೇ! ಆದರೆ, ಕ್ರಿಸ್ಟಲ್ ಜೊತೆ ಸಂಬಂಧವು 'ಸೀರಿಯಸ್' ಆಗುತ್ತಿದೆ ಎಂದು ಕಳೆದ ಜನವರಿ ತಿಂಗಳಲ್ಲೇ ಪ್ರಕಟಿಸಿದ್ದರು ಮತ್ತು ಬೇರೆ ಪ್ರೇಯಸಿಯರು ಪ್ಲೇಬಾಯ್ ಮಾನ್ಷನ್‌ನಿಂದ ಸಮೀಪದ ಪ್ಲೇಮೇಟ್ ಹೌಸ್‌ಗೆ ಹೋಗುವಂತೆಯೂ ಕೇಳಿಕೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ