ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್‌ ದಾಳಿಗೆ ಯುಎಸ್ ಹೆಲಿಕಾಪ್ಟರ್ ಪತನ: 13 ಬಲಿ (Taliban | Afghanistan | US helicopter | Farah | America)
Bookmark and Share Feedback Print
 
ಅಫ್ಘಾನಿಸ್ತಾನದ ಫಾರಾ ಪ್ರಾಂತ್ಯದಲ್ಲಿ ಕೆಳ ಮಟ್ಟದಲ್ಲಿ ಹಾರಾಡುತ್ತಿದ್ದ ಅಮೆರಿಕದ ಹೆಲಿಕಾಪ್ಟರ್ ಅನ್ನು ತಾಲಿಬಾನ್ ಉಗ್ರರು ಗುಂಡಿನ ದಾಳಿಯಿಂದ ಹೊಡೆದುರುಳಿಸಿದ ಪರಿಣಾಮ 13 ಮಂದಿ ಅಮೆರಿಕನ್‌ರು ಬಲಿಯಾಗಿರುವ ಘಟನೆ ನಡೆದಿದೆ.

ಭಾನುವಾರ ಬೆಳಿಗ್ಗೆ ಖಾಕ್ ಶಾಫಿದ್ ಜಿಲ್ಲೆಯ ಪ್ರದೇಶದಲ್ಲಿ ಹಾರಾಡುತ್ತಿದ್ದ ಸಮಯದಲ್ಲಿಯೇ ತಾಲಿಬಾನ್ ಉಗ್ರರು ನಡೆಸಿದ ದಾಳಿಯಿಂದಾಗಿ ಹೆಲಿಕಾಪ್ಟರ್‌ ಬೆಂಕಿ ಹೊತ್ತಿಕೊಂಡು ನೆಲಕ್ಕಪ್ಪಳಿಸಿತ್ತು ಎಂದು ದಿ ನೇಷನ್ ವರದಿ ತಿಳಿಸಿದೆ.

ಕಳೆದ ಎರಡು ತಿಂಗಳಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ವಿಮಾನ ಹೊಡೆದುರುಳಿಸಿದ ಎರಡನೇ ಪ್ರಕರಣ ಇದಾಗಿದೆ. ಕಳೆದ ಫೆಬ್ರುವರಿ ತಿಂಗಳಿನಲ್ಲಿ ಇದೇ ಫಾರಾ ಪ್ರಾಂತ್ಯದಲ್ಲಿ ಹೆಲಿಕಾಪ್ಟರನ್ನು ಉಗ್ರರು ಹೊಡೆದುರುಳಿಸಿದ್ದರು.

ಅಲ್ಲದೇ ಅಫ್ಘಾನಿಸ್ತಾನದ ಜಾಬೋಲ್ ಪ್ರಾಂತ್ಯ, ಮೈಡಾನ್ ವಾರ್ಡಕ್ ಮತ್ತು ಕುಂಡುಜ್ ಪ್ರದೇಶದಲ್ಲಿ ನ್ಯಾಟೋದ ಮೂರು ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಿರುವುದಕ್ಕೆ ತಾವೇ ಹೊಣೆ ಎಂದು ತಾಲಿಬಾನ್ ವಕ್ತರಾ ಮಾರ್ಚ್ ತಿಂಗಳಿನಲ್ಲಿ ಬಹಿರಂಗಪಡಿಸಿದ್ದ.
ಸಂಬಂಧಿತ ಮಾಹಿತಿ ಹುಡುಕಿ