ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪ್ರವಾದಿ ಕ್ಯಾರಿಕೇಚರ್ ಸ್ಪರ್ಧೆ: ಪಾಕ್ ಮುಸ್ಲಿಮರ ಆಕ್ರೋಶ (Facebook | Blasphemous Act | Prophet Mohammad | Caricature | Competition)
Bookmark and Share Feedback Print
 
ಪ್ರವಾದಿ ಮಹಮ್ಮದ್ ಅವರ ಕ್ಯಾರಿಕೇಚರ್ ಬಿಡಿಸುವ ಸ್ಪರ್ಧೆ ಏರ್ಪಡಿಸಿದೆ ಎಂಬ ವರದಿಗಳಿಂದ ರೊಚ್ಚಿಗೆದ್ದಿರುವ ಮುಸ್ಲಿಂ ಸಮುದಾಯ, ಫೇಸ್‌ಬುಕ್ ಸಮುದಾಯ ತಾಣದ ವಿರುದ್ಧ ಪಾಕಿಸ್ತಾನದಾದ್ಯಂತ ಬುಧವಾರ ತೀವ್ರ ಪ್ರತಿಭಟನೆ ನಡೆಸಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವಂತೆ ಪಾಕ್ ಸಂಸತ್ ಭವನದೆದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಸರಕಾರವನ್ನು ಒತ್ತಾಯಿಸಿದರು.

ದೇವನಿಂದನಾ ಕೃತ್ಯವನ್ನು ಪ್ರೇರೇಪಿಸುತ್ತಿರುವ ಪಾಶ್ಚಾತ್ಯರ ವಿರುದ್ಧವೂ ಘೋಷಣೆಗಳನ್ನು ಕೂಗಲಾಯಿತು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಂತರಿಕ ವ್ಯವಹಾರಗಳ ಸೆನೆಟ್ ಸ್ಥಾಯಿ ಸಮಿತಿ ಅಧ್ಯಕ್ಷ ತಲ್ಹಾ ಮೆಹಮೂದ್, ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾಶ್ಚಾತ್ಯರೊಂದಿಗೆ ಸಂಬಂಧಗಳನ್ನು ಮರುಪರಿಶೀಲಿಸುವಂತೆ ಸರಕಾರವನ್ನು ಒತ್ತಾಯಿಸಿದರು. ಅಲ್ಲದೆ ಸೂಕ್ತ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಇದನ್ನು ಪ್ರಸ್ತಾಪಿಸುವಂತೆಯೂ ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟವನ್ನು ಅವರು ಆಗ್ರಹಿಸಿದರು.

ಅಲ್ಲದೆ, ಬುರ್ಖಾ ವಿರುದ್ಧ ನಿಷೇಧ ಹೇರಿರುವ ಫ್ರೆಂಚ್ ಸರಕಾರದ ಕ್ರಮವನ್ನೂ ಅವರು ಖಂಡಿಸಿದರು.

ಕ್ಯಾರಿಕೇಚರ್ ಸ್ಪರ್ಧೆಯನ್ನು ಏಪ್ರಿಲ್ 20ಕ್ಕೆ ನಿಗದಿಪಡಿಸಲಾಗಿದ್ದು, ಇದರ ವಿರುದ್ಧ ಹಲವರು ಹೈಕೋರ್ಟ್ ಮೊರೆ ಹೋಗಿದ್ದರು. ಈ ವಿಷಯದ ಕುರಿತು ತೀರ್ಪು ನೀಡಿರುವ ಲಾಹೋರ್ ಹೈಕೋರ್ಟ್, ಮೇ 31ರವರೆಗೆ ಫೇಸ್‌ಬುಕ್ ತಾಣಕ್ಕೆ ನಿಷೇಧ ಹೇರುವಂತೆಯೂ ಸರಕಾರಕ್ಕೆ ಸೂಚಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ